ಸಿನಿಮಾ ಸುದ್ದಿ

ದ್ವೀಪವನ್ನು ಕೊಳ್ಳಲಿರುವ ಜೋಲಿ-ಪಿಟ್ ಜೋಡಿ

ನಟ ಬ್ರ್ಯಾಡ್ ಪಿಟ್ ಮತ್ತು ಅವರ ಪತ್ನಿ ನಟಿ ಎಂಜಲಿನ ಜೋಲಿ ಅವರು ಗ್ರೀಸ್ ನ ಜಿಯಾದಲ್ಲಿ ಸ್ವಂತಕ್ಕೆ ದ್ವೀಪವೊಂದನ್ನು ೪.೭ ದಶಲಕ್ಷ ಡಾಲರ್ ಗಳಿಗೆ

ದ್ವೀಪವನ್ನು ಕೊಳ್ಳಲಿರುವ ಜೋಲಿ-ಪಿಟ್ ಜೋಡಿ
ನಟ ಬ್ರ್ಯಾಡ್ ಪಿಟ್ ಮತ್ತು ಅವರ ಪತ್ನಿ ನಟಿ ಎಂಜಲಿನ ಜೋಲಿ
Published On :

ಲಾಸೇಂಜಲೀಸ್: ನಟ ಬ್ರ್ಯಾಡ್ ಪಿಟ್ ಮತ್ತು ಅವರ ಪತ್ನಿ ನಟಿ ಎಂಜಲಿನ ಜೋಲಿ ಅವರು ಗ್ರೀಸ್ ನ ಜಿಯಾದಲ್ಲಿ ಸ್ವಂತಕ್ಕೆ ದ್ವೀಪವೊಂದನ್ನು ೪.೭ ದಶಲಕ್ಷ ಡಾಲರ್ ಗಳಿಗೆ ಕೊಂಡುಕೊಳ್ಳಲಿದ್ದಾರೆ ಎಂದು ಎಂದು ತಿಳಿದುಬಂದಿದೆ.

"ಏಂಜಿ (ಎಂಜಲಿನ ಜೋಲಿ) ಆ ದ್ವೀಪಕ್ಕೆ ಮನಸೋತುಹೋದಳು. ಸ್ವತಂತ್ರ ಫೋಟೋಗ್ರಾಫರ್ ಗಳ ತೊಂದರೆ ಇಲ್ಲದೆ ಮಕ್ಕಳು ಈಗ ಸುಲಭವಾಗಿ ಓಡಾಡಿಕೊಂಡು ಆಟವಾಡಬಹುದು" ಎಂದು ಬ್ರ್ಯಾಡ್ ಪಿಟ್ ಹೇಳಿದ್ದಾರೆ ಎಂದು ಅಂತರ್ಜಾಲ ತಾಣವೊಂದು ವರದಿ ಮಾಡಿದೆ.

೪೩ ಎಕರೆ ಜಾಗದ ಈ ದ್ವೀಪದಲ್ಲಿ ಆರು ಮಕ್ಕಳಿರುವ ಈ ಜೋಡಿ, ಆರು ವಿಲ್ಲಗಳನ್ನು ಕಟ್ಟಲು ಈಗಾಗಲೇ ಪರವಾನಗಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ಯಾರಿಸ್ ಗೆ ಸಾಮಾನ್ಯ ದರ್ಜೆಯ ಆಸನದಲ್ಲಿ ಕುಳಿತು ಪಿಟ್ ಮತ್ತು ಜೋಲಿ ತೆರಳುವಾಗ ಈ ಸುದ್ದಿ ವರದಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.