ದ್ವಿಭಾಷಾ ಚಲನಚಿತ್ರದಲ್ಲಿ ಸುದೀಪ್ ಒಟ್ಟಿಗೆ ನಿತ್ಯಾ ಮೆನನ್
ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರಿಡದ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಆಯ್ಕೆಯಾಗಿದ್ದಾರೆ. ನಾಯಕ ನಟನಾಗಿ ಸುದೀಪ್

ತಮಿಳು ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ಹೆಸರಿಡದ ಮುಂದಿನ ಚಿತ್ರಕ್ಕೆ ದಕ್ಷಿಣ ಭಾರತದ ನಟಿ ನಿತ್ಯಾ ಮೆನನ್ ಆಯ್ಕೆಯಾಗಿದ್ದಾರೆ. ನಾಯಕ ನಟನಾಗಿ ಸುದೀಪ್ ಅಭಿನಯಿಸಲಿದ್ದಾರೆ.
ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಸಿನೆಮಾದ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಹೊರಬೀಳಬೇಕಿದೆ. ಮಲಯಾಳಮ್, ತೆಲುಗು, ತಮಿಳು ಮತ್ತು ಕನ್ನಡ ಭಾಷೆಯ ಪ್ರೇಕ್ಷಕರಿಗೆ ನಿತ್ಯಾ ಪರಿಚಿತ ನಟಿಯೇ!
ನಿತ್ಯಾ ಅವರ ಹಿಂದಿನ ಚಿತ್ರ 'ಓ ಕಾದ್ಹಲ್ ಕಣ್ಮಣಿ' ಯಶಸ್ಸು ಕಂಡ ಚಿತ್ರ. ಈಗ ಅವರು ತೆಲುಗು ಚಿತ್ರ 'ರುದ್ರಮಾದೇವಿ'ಯಲ್ಲಿ ಅನುಷ್ಕಾ ಶೆಟ್ಟಿ ಅವರೊಂದಿಗೆ ನಟಿಸಿದ್ದಾರೆ.
ಸುದೀಪ್ ಅವರು 'ಬಾಹುಬಲಿ' ಸಿನೆಮಾದಲ್ಲಿ ಅತಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ, ಎರಡನೇ ಭಾಗದಲ್ಲಿ ದೊಡ್ಡ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ರಾಜಮೌಳಿ ಅವರು ತಿಳಿಸಿದ್ದರು. 'ರನ್ನ' ತೆಲುಗು ರಿಮೇಕ್ ಕೂಡ ಸಾಧಾರಣ ಯಶಸ್ಸು ಕಂಡ ಸಿನೆಮಾ. ವಿಜಯ್ ಅವರ ತಮಿಳು ಸಿನೆಮಾ 'ಪುಲಿ'ಯಲ್ಲಿ ಕೂಡ ಸುದೀಪ್ ನಟಿಸಿದ್ದಾರೆ.
ಕನ್ನಡ ಮತ್ತು ಇತರ ಭಾಷೆಗಳಲ್ಲೂ ಅಪಾರ ಬೇಡಿಕೆಯಲ್ಲಿರುವ ಒಬ್ಬನೇ ಕನ್ನಡದ ನಟ ಸುದೀಪ್. ಸೂರಪ್ಪ ಬಾಬು ನಿರ್ಮಿಸುತ್ತಿರುವ ಈ ನೂತನ ಸಿನೆಮಾ ತಂಡವನ್ನು ಸುದೀಪ್ ಸೇರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


