ಖಾಲಿ ಬಿಟ್ಟ ಸ್ಥಳ ತುಂಬಿದ ಉಪ್ಪಿ-೨ ಅಭಿಮಾನಿಗಳು
ನಟ-ನಿರ್ದೇಶಕ ಉಪೇಂದ್ರ ತಮ್ಮ ಸೃಜನಶೀಲತೆಗೂ ಮತ್ತು ಗಿಮಿಕ್ಕಿಗೂ ಹೆಸರುವಾಸಿ. ಜುಲೈ ೧೭ ರಂದು ನಡೆಯಲಿರುವ ತಮ್ಮ ಮುಂದಿನ ಸಿನೆಮ ಉಪ್ಪಿ-೨
ಬೆಂಗಳೂರು: ನಟ-ನಿರ್ದೇಶಕ ಉಪೇಂದ್ರ ತಮ್ಮ ಸೃಜನಶೀಲತೆಗೂ ಮತ್ತು ಗಿಮಿಕ್ಕಿಗೂ ಹೆಸರುವಾಸಿ. ಜುಲೈ ೧೭ ರಂದು ನಡೆಯಲಿರುವ ತಮ್ಮ ಮುಂದಿನ ಸಿನೆಮ ಉಪ್ಪಿ-೨ ಸಿನೆಮಾ ಆಡಿಯೋ ಅನಾವರಣ ಕಾರ್ಯಕ್ರಮಕ್ಕೆ, ಖಾಲಿ ಜಾಗ ಬಿಟ್ಟು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಈಗ ಅವರ ಅಭಿಮಾನಿಗಳು ಆ ಖಾಲಿ ಜಾಗವನ್ನು ತುಂಬಿ ಆ ಜಾಹೀರಾತನ್ನು ಸಂಪೂರ್ಣಗೊಳಿಸಿದ್ದಾರೆ.
ಉಪೇಂದ್ರ ಅಭಿಮಾನಿಗಳಲ್ಲಿ ಒಬ್ಬರಾಗ ವಿಜಯಸೂರ್ಯ, ಹಾಗೆ ಸುಮ್ಮನೆ ಒಂದು ಪೋಸ್ಟರ್ ವಿನ್ಯಾಸ ಮಾಡಿ ಸಾಮಾಜಿಕ ಅಂತರಜಾಲದಲ್ಲಿ ತೇಲಿಬಿಟ್ಟದ್ದು, ನಿರ್ಮಾಪಕಿ ಸೌದರ್ಯ ಜಗದೀಶ್ ಅವರ ಕಣ್ಣಿಗೆ ಬಿದ್ದು ಅವರು ಮನಸೂರೆಗೊಂಡಿದ್ದಾರೆ. ಅವರು ಈ ವಿಷಯವನ್ನು ಉಪೇಂದ್ರ ಅವರಿಗೆ ತಿಳಿಸಿದ್ದಕ್ಕೆ, ವಿಜಯಸೂರ್ಯ ಅವರಿಗೆ ಸಹ ನಿರ್ದೇಶಕರಾಗುವ ಭಾಗ್ಯ ದೊರಕಿತಂತೆ. ಈಗ ಉಪ್ಪಿ-೨ ಸಿನೆಮಾದ ಭಿತ್ತಿಚಿತ್ರಗಳ ಅಧಿಕೃತ ವಿನ್ಯಾಸಕಾರರ ವಿಜಯಸೂರ್ಯ!
ವಿಜಯಸೂರ್ಯ ಹೇಳುವಂತೆ "ಮೊದಲಿಗೆ ತನ್ನ ಖುಷಿಗಾಗಿ ಉಪ್ಪಿ-೨ ಸಿನೆಮಾದ ಪೋಸ್ಟರ್ ವಿನಾಸ ಮಾಡಿ ಫೇಸ್ಬುಕ್ ನಲ್ಲಿ ಹಾಕಿದೆ. ಇದನ್ನು ಜನ ಬಹಳ ಮೆಚ್ಚಿ ಪ್ರತಿಕ್ರಿಯಿಸಿದರು. ಆದುದರಿಂದ ಇನ್ನೂ ಹೆಚ್ಚಿನ ವಿನ್ಯಾಸಗಳೊಂದಿಗೆ ಮುಂದುವರೆಸಿದೆ. ಸೌಂದರ್ಯ ಜಗದೀಶ್ ಇದನ್ನು ಪತ್ತೆ ಹಚ್ಚಿ ಉಪೇಂದ್ರ ಅವರಿಗೆ ನನ್ನನ್ನು ಪರಿಚಯಿಸಿದರು" ಎನ್ನುತ್ತಾರೆ.
ಹೀಗೆಯೇ ಮತ್ತೊಬ್ಬ ಉಪೇಂದ್ರ ಅಭಿಮಾನಿ ೨೧ ವರ್ಷದ ಮಾಗಡಿ ಮೂಲದ ವಿನಯ್ ಕೂಡ ಉಪ್ಪಿ-೨ ಸಿನೆಮಾಗೆ ಪೋಸ್ಟರ್ ಗಳನ್ನು ಮಾಡುತ್ತಿದ್ದಾರಂತೆ. ಉಪೇಂದ್ರ ಅವರ ಅಭಿಮಾನಕ್ಕೆ ತನ್ನ ಹೆಸರನ್ನೇ ವಿನಯ್ ಉಪೇಂದ್ರ ಎಂದು ಬದಲಿಸಿಕೊಂಡಿರುವ ಇವರು ಇತರ ಉಪೇಂದ್ರ ಅಭಿಮಾನಿಗಳನ್ನು ಕೂಡಿ ಪ್ರತ್ಯೇಕವಾಗಿ ಉಪ್ಪಿ-೨ ಆಡಿಯೋ ಬಿಡುಗಡೆ ಮಾಡಲಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

