ಬಿಗ್ ಬಿ ಕಂಠದಲ್ಲಿ ರಾಷ್ಟ್ರಗೀತೆ
ಇತ್ತಿಚೆಗಷ್ಟೇ ಪದ್ಮವಿಭೂಷಣ ಪಡೆದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾರತದ ರಾಷ್ಟ್ರಗೀತೆಯನ್ನು

ಮುಂಬೈ: ಇತ್ತಿಚೆಗಷ್ಟೇ ಪದ್ಮವಿಭೂಷಣ ಪಡೆದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಹಾಗೆ ಅದಕ್ಕೆ ವಿಡಿಯೋ ಒಂದನ್ನು ಕೂಡ ಚಿತ್ರೀಕರಣ ಮಾಡಿದ್ದಾರೆ.
ಎರೋಸ್ ಇಂಟರ್ನ್ಯಾಷನಲ್ ನಿರ್ಮಿಸಿರುವ ಈ ದೃಷ್ಯಾವಳಿಯನ್ನು ರಾಷ್ಟ್ರಗೀತೆ ರಚಿಸಿ ಅದಕ್ಕೆ ಸಂಗೀತ ಸಂಯೋಜಿಸಿದ ರಬೀಂದ್ರನಾಥ್ ಟ್ಯಾಗೋರ್ ಅವರ ಕೊಲ್ಕತ್ತಾದ ಪೂರ್ವಜರ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ತಮ್ಮ ಮುಂಬರುವ ಸಿನೆಮಾ ಶಮಿತಾಬ್ ಸೇರಿದಂತೆ ಅಮಿತಾಬ್ ಬಚ್ಚನ್ ಹಲವಾರು ಸಿನೆಮಾಗಳಲ್ಲಿ ಈ ಹಿಂದೆ ಹಾಡಿದ್ದಾರೆ.
ಜನವರಿ ೨೬ ರಂದು ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಗೀತೆಯ ಈ ವಿಡಿಯೋ ಬಿಡುಗಡೆಯಾಗಿದೆ. "ಕೊಲ್ಕತ್ತಾದ ಥಾಕೂರ್ ಬಾಡಿಯಾ ಜೋರಸಂಕೊ, ಟ್ಯಾಗೋರ್ ಅವರ ಮನೆಯಲ್ಲಿ ಚಿತ್ರೀಕರಣಗೊಂಡ ನಾನು ಹಾಡಿರುವ ರಾಷ್ಟ್ರಗೀತೆ" ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಪ್ರಶಸ್ತಿಗಳ ಮೇಲೆ ಟ್ಯಾಗೋರ್ ಅವರು ನೀಡಿದ ಹೇಳಿಕೆಯನ್ನು ಅವರು ಟ್ವೀಟ್ ಮಾಡಿದ್ದಾರೆ. "ಟ್ಯಾಗೋರ್ ಹೇಳಿದ್ದಾರೆ: ನಿಮ್ಮ ಗುರುತುಗಳನ್ನು, ಗಾಯಗಳನ್ನು, ತಪ್ಪುಗಳನ್ನು ಮತ್ತು ಸೋಲುಗಳನ್ನು ಮರೆಮಾಚುವುವು ಪ್ರಶಸ್ತಿಗಳು ಹಾಗೂ ಗುರಿಯ ಬದಲು ಮಾರ್ಗವನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ" ಎಂದು ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


