ಬಾಕ್ಸಾಫೀಸಿನಲ್ಲಿ ಓಟ ಮುಂದುವರೆಸಿದ ರಥಾವರ; ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಹೊಸ ಚಿತ್ರ
ಭಾರಿ ಯಶಸ್ಸಿನ 'ಉಗ್ರಂ' ನಂತರ 'ರಥಾವರ' ಕೂಡ ನಟ ಶ್ರೀಮುರಳಿ ಅವರನ್ನು ಕೈಹಿಡಿದಿರುವುದು ಗಾಂಧಿನಗರದಲ್ಲಿ ನಟನಿಗೆ ಉತ್ತುಂಗ ಸ್ಥಾನ ದೊರೆತಂತಾಗಿದೆ.

ಬೆಂಗಳೂರು: ಭಾರಿ ಯಶಸ್ಸಿನ 'ಉಗ್ರಂ' ನಂತರ 'ರಥಾವರ' ಕೂಡ ನಟ ಶ್ರೀಮುರಳಿ ಅವರನ್ನು ಕೈಹಿಡಿದಿರುವುದು ಗಾಂಧಿನಗರದಲ್ಲಿ ನಟನಿಗೆ ಉತ್ತುಂಗ ಸ್ಥಾನ ದೊರೆತಂತಾಗಿದೆ. ಇದಕ್ಕೆ ಹರ್ಷ ವ್ಯಕ್ತಪಡಿಸಿರುವ ವಿತರಕ ಜಯಣ್ಣ "ರಥಾವರ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು ಎರಡು ವಾರಗಳಲ್ಲಿ ೧೦ ಕೋಟಿ ಗಳಿಸಿದೆ" ಎಂದಿದ್ದಾರೆ.
ಈಗ ಸದ್ಯಕ್ಕೆ ಶ್ರೀಮುರಳಿ ಅವರಿಗೆ ಹಲವಾರು ಅವಕಾಶಗಳು ಒದಗಿ ಬಂದಿದ್ದರೂ, ಎಚ್ಚರಿಕೆ ನಡೆ ಇಟ್ಟಿರುವ ನಟ ಮುಂದಿನ ಚಿತ್ರವನ್ನು ಜಯಣ್ಣ-ಭೋಗೇಂದ್ರ ಅವರ ನಿರ್ಮಾಣ ಸಂಸ್ಥೆಯಡಿ ಒಪ್ಪಿಕೊಂಡಿದ್ದು, ವಿವರಗಳು ಮುರಳಿ ಅವರ ಹುಟ್ಟು ಹಬ್ಬವಾದ ಡಿಸೆಂಬರ್ ೧೭ ರಂದು ಹೊರಬೀಳಲಿವೆ ಎನ್ನಲಾಗಿದೆ.
ಈ ಯೋಜನೆಯ ವಿಶೇಷವೆಂದರೆ, ಉಗ್ರಂ ಸಿನೆಮಾ ನೀಡಿದ ಪ್ರಶಾಂತ್ ನೀಲ್ ಜೊತೆಗೆ ಕೆಲಸ ಮಾಡುತ್ತಿದ್ದ ನಾರ್ಥನ್ ಈ ಸಿನೆಮಾ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕ ಟೋಪಿ ತೊಡಲಿದ್ದಾರೆ. ನಾರ್ಥನ್, ಯಶ್ ಅವರ 'ಮಾಸ್ಟರ್ ಪೀಸ್' ನಲ್ಲಿ ಗೀತರಚನೆ ಕೂಡ ಮಾಡಿದ್ದಾರೆ.
ನೂತನ ಚಿತ್ರದ ಒಂದು ಸಾಲಿನ ಕಥೆ ಸಿದ್ಧವಾಗಿದ್ದು "ಮುಂದಿನ ಎರಡು ತಿಂಗಳುಗಳಲ್ಲಿ ಕಥೆ ಸಿದ್ಧವಾಗುತ್ತದೆ. ಜೊತೆ ಜೊತೆಗೇ ಇತರ ತಾರಾಗಣದ ಆಯ್ಕೆಯೂ ನಡೆಯುತ್ತದೆ" ಎಂದು ತಿಳಿಸುತ್ತಾರೆ ಜಯಣ್ಣ.
ಸದ್ಯಕ್ಕೆ 'ರಥಾವರ' ಪ್ರಚಾರ ಕಾರ್ಯ ಕೈಗೊಂಡಿರುವ ಶ್ರೀಮುರಳಿ ತುಮಕೂರು ಚಿತ್ರದುರ್ಗ ಇತ್ಯಾದಿ ಪ್ರದೇಶಗಳಲ್ಲಿ ಪ್ರವಾಸ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


