ಸಿನಿಮಾ ಸುದ್ದಿ

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ; ವಿನಯ್ ಚಿತ್ರಕ್ಕೆ ಸಹೋದರನ ಹೂಡಿಕೆ

ಸಿದ್ಧಾರ್ಥ ಚಿತ್ರದ ಬಳಿಕ ಪ್ರೇಮ್ ನಿರ್ದೇಶನದ ಆರ್ ದಿ ಕಿಂಗ್ ಚಿತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದ ವಿನಯ್ ರಾಜ್ ಕುಮಾರ್ ಅದೇಕೋ ಆ ಚಿತ್ರವನ್ನು ಮುಂದಕ್ಕೆ ಹಾಕಿದ ವಿಚಾರ ಎಲ್ಲರಿಗೂ ತಿಳಿದಿದ್ದೇ...

ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ; ವಿನಯ್ ಚಿತ್ರಕ್ಕೆ ಸಹೋದರನ ಹೂಡಿಕೆ
ರಾಘವೇಂದ್ರ ರಾಜ್ ಕುಮಾರ್ ಮತ್ತು ಅವರ ಪುತ್ರರು (ಸಂಗ್ರಹ ಚಿತ್ರ)
Published On :

ಬೆಂಗಳೂರು: ಸಿದ್ಧಾರ್ಥ ಚಿತ್ರದ ಬಳಿಕ ಪ್ರೇಮ್ ನಿರ್ದೇಶನದ ಆರ್ ದಿ ಕಿಂಗ್ ಚಿತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದ ವಿನಯ್ ರಾಜ್ ಕುಮಾರ್ ಅದೇಕೋ ಆ ಚಿತ್ರವನ್ನು ಮುಂದಕ್ಕೆ ಹಾಕಿದ  ವಿಚಾರ ಎಲ್ಲರಿಗೂ ತಿಳಿದಿದ್ದೇ.

ಇದೀಗ ಮತ್ತೊಂದು ಚಿತ್ರಕ್ಕೆ ಮುಂದಾಗಿರುವ ವಿನಯ್ ಗೆ ಅವರ ಸಹೋದರ ಸಾಥ್ ನೀಡುತ್ತಿದ್ದು, ವಿನಯ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ರನ್ ಅ್ಯಂಟನಿಗೆ ಸಹೋದರ ಗುರು ರಾಜ್  ಕುಮಾರ್ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ. ಆ ಮೂಲಕ ರಾಜ್ ಕುಟುಂಬದ ಮತ್ತೊಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ.

ರನ್ ಅ್ಯಂಟನಿ ಎಂಬ ಥ್ರಿಲ್ಲರ್ ಆ್ಯಕ್ಷನ್ ಚಿತ್ರವನ್ನು ರಘುಶಾಸ್ತ್ರಿ ಅವರು ನಿರ್ದೇಶಿಸುತ್ತಿದ್ದು, ರಾಜ್ ಕುಟುಂಬದ ಒಡೆತನದ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲೇ ಈ ಚಿತ್ರವನ್ನೂ ಕೂಡ  ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಚಿತ್ರದ ಕಥೆಗೆ ಇಬ್ಬರು ನಾಯಕಿಯರ ಅವಶ್ಯಕತೆ ಇದ್ದು, ಹೊಸ ಮುಖಗಳ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ. ಆ ಮೂಲಕ ವಜ್ರೇಶ್ವರಿ  ಕಂಬೈನ್ಸ್ ಮೂಲಕ ಮತ್ತೆ ಎರಡು ಹೊಸ ಮುಖಗಳು ಚಿತ್ರರಂಗಕ್ಕೆ ಪರಿಚಯವಾಗುತ್ತಿವೆ. ಇದೇ ಡಿಸೆಂಬರ್ 14ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿದುಬಂದಿದೆ.

ಗುರು ರಾಜ್ ಕುಮಾರ್ ಅವರು ಸಹೋದರನ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ನಿಜವೇ ಆದರೂ ಅದರ ಮೇಲ್ವಿಚಾರಣೆಯನ್ನು ಮಾತ್ರ ಅವರ ತಂದೆ ರಾಘವೇಂದ್ರ ರಾಜ್ ಕುಮಾರ್ ಅವರು ಮಾಡಲಿದ್ದಾರೆ. ಈ ಹಿಂದೆ ವಿನಯ್ ರಾಜ್ ಕುಮಾರ್ ಅವರ ಸಿದ್ಧಾರ್ಥ ಚಿತ್ರವನ್ನು ಪ್ರಕಾಶ್ ನಿರ್ದೇಶನ ಮಾಡಿದ್ದರು. ಎರಡನೇ ಚಿತ್ರವನ್ನು ನಿರ್ದೇಶಕ ಪ್ರೇಮ್ ಮಾಡಬೇಕಿತ್ತು. ಆದರೆ  ಚಿತ್ರಕಥೆ ಹೊಂದಾಣಿಕೆಯಾಗದ ಕಾರಣ ಆ ಚಿತ್ರವನ್ನು ಮುಂದೂಡಲಾಗಿತ್ತು. ಇದೀಗ ವಿನಯ್ ರಾಜ್ ಕುಮಾರ್ ಅವರ ಎರಡನೇ ಚಿತ್ರವನ್ನು ನಿರ್ದೇಶಿಸುವ ಅವಕಾಶ ರಘುಶಾಸ್ತ್ರಿ ಅವರಿಗೆ ದೊರೆತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.