ಚಿರಂಜೀವಿ ಹುಟ್ಟುಹಬ್ಬಕ್ಕೆ ಬಿಗ್ ಬಿ, ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ
ಶನಿವಾರ, (ಆ.22 ) ರಂದು ನಡೆಯಲಿರುವ ಮೇಘಾ ಸ್ಟಾರ್ ಚಿರಂಜೀವಿ 60 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹೈದರಾಬಾದ್: ಶನಿವಾರ, (ಆ.22 ) ರಂದು ನಡೆಯಲಿರುವ ಮೇಘಾ ಸ್ಟಾರ್ ಚಿರಂಜೀವಿ 60 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ತಂದೆಯ ಹುಟ್ಟುಬದ ಅಂಗವಾಗಿ ಟಾಲಿವುಡ್ ನ ನಟ ರಾಮ್ ಚರಣ್ ತೇಜ್ ಔತಣಕೂಟ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಗೆ ಆಮಂತ್ರಣ ನೀಡಲಾಗಿದ್ದು, ಬರುವಿಕೆಯನ್ನು ಇಬ್ಬರೂ ನಟರು ಖಚಿತಪಡಿಸಿದ್ದಾರೆ ಎಂದು ರಾಮ್ ಚರಣ್ ಅವರ ಆಪ್ತರು ಸುದ್ದಿ ಸಂಸ್ಥೆಗಳಿಗೆ ತಿಳಸಿದ್ದಾರೆ.
ಬಚ್ಚನ್ ಕುಟುಂಬದೊಂದಿಗೆ ರಾಮ್ ಚರಣ್ ತೇಜ್ ನಿಕಟ ಸಂಪರ್ಕಹೊಂದಿದ್ದು ಸ್ವತಃ ಆಹ್ವಾನಿಸಿದ ಕೂಡಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮಿತಾಬ್ ಬಚ್ಚನ್ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಿರಂಜೀವಿ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಟಾಲಿವುಡ್ ನ ಇತರ ನಟರಾದ ವೆಂಕಟೇಶ್, ನಾಗಾರ್ಜುನ, ಜಗಪತಿ ಬಾಬು ಹಾಗೂ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಅವರೂ ಔತಣಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದೇ ವೇಳೆ ರಾಮ್ ಚರಣ್ ತೇಜ್ ನಟನೆಯ ಚಿತ್ರದಲ್ಲಿ ಚಿರಂಜೀವಿ ಕಿರು ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಚಿತ್ರ ತಂಡ ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


