ರೈತ ಕುಟುಂಬಗಳಿಗೆ ನಟ ಪುನೀತ್ ಸಾಂತ್ವನ
ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆಯ ರೈತರ ಕುಟುಂಬಗಳಿಗೆ ಚಿತ್ರನಟ ಪುನೀತ್ ರಾಜ್‍ಕುಮಾರ್ ಬುಧವಾರ...

ಪಾಂಡವಪುರ: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆಯ ರೈತರ ಕುಟುಂಬಗಳಿಗೆ ಚಿತ್ರನಟ ಪುನೀತ್ ರಾಜ್‍ಕುಮಾರ್ ಬುಧವಾರ ಸಾಂತ್ವನ ಹೇಳಿದರು. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಪ್ರವಾಸಿ ಮಂದಿರದಲ್ಲಿ ರೈತ
ಕುಟುಂಬಗಳ ಸದಸ್ಯರನ್ನು ಭೇಟಿಯಾದ ನಟ ಪುನೀತ್ ಅವರು, ತಮ್ಮ ನಿರ್ಮಾಣ ಸಂಸ್ಥೆ ಪರವಾಗಿ ಪರಿಹಾರ ನೀಡಿ ಧೈರ್ಯ ತುಂಬಿದರು.
ಪಾಂಡವಪುರ ತಾಲೂಕಿನ ಗಾಣದಹೊಸೂರು ರೈತ ನಿಂಗೇಗೌಡ, ಶ್ರೀರಂಗಪಟ್ಟಣ ತಾಲೂಕಿನ ಚಿನ್ನೇನಹಳ್ಳಿ ರಾಜೇಂದ್ರ, ಸಬ್ಬನಕುಪ್ಪೆ ಕುಮಾರ್, ಮಂಡ್ಯ ತಾಲೂಕಿನ ಮಾಚನಹಳ್ಳಿ ಸಿದ್ದರಾಮು, ಮದ್ದೂರು ತಾಲೂಕಿನ ಕೊಣಸಾಲೆ ಗ್ರಾಮದ ರಮೇಶ್ ಅವರ ಕುಟುಂಬಸ್ಥರೊಂದಿಗೆ ಪುನೀತ್ ಕೆಲಕಾಲ ಮಾತುಕತೆ ನಡೆಸಿದರು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರ ಹೋರಾಟಕ್ಕೆ ಚಿತ್ರರಂಗ ಬೆಂಬಲವಾಗಿ ನಿಲ್ಲಲು ಸಿದ್ಧವಿದೆ. ಹಾಗಾಗಿ ಧೈರ್ಯವಾಗಿ ಬದುಕು ನಡೆಸಬೇಕು ಎಂದು ಪುನೀತ್ ಆತ್ಮಸ್ಥೈರ್ಯ ತುಂಬಿದರು.
ಪಿಎಸ್‍ಎಸ್‍ಕೆ ಕಾರ್ಖಾನೆಯ ಒಳ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಟ ಪುನೀತ್ ರಾಜ್‍ಕುಮಾರ್ ನಾಯಕ ನಟರಾಗಿ ನಡೆಸಿರುವ ದೊಡ್ಮನೆ ಹುಡುಗ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬುಧವಾರ ಚಿತ್ರೀಕರಣ ಮುಗಿದ ನಂತರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಸ್ಥರನ್ನು ಕಾರ್ಖಾನೆ ಪ್ರವಾಸಿಮಂದಿರಕ್ಕೆ ಕರೆಸಿಕೊಂಡು ಪೂರ್ಣಿಮಾ ಎಂಟರ್ ಪ್ರೈಸಸ್ ವತಿಯಿಂದ ಪರಿಹಾರ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


