ಉಪ್ಪಿ೨ ಹವಾ ಆಂಧ್ರ ಮತ್ತು ತೆಲಂಗಾಣಕ್ಕೂ
ನಟ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಹಿಂದಿನ ಸಿನೆಮಾಗಳಂತೆ ಉಪ್ಪಿ೨ ಕೂಡ ಪ್ರೇಕ್ಷಕರ ಅಪಾರ ಗಮನ ಸೆಳೆದಿದೆ. ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ ಉಪೇಂದ್ರ

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ಅವರ ನಿರ್ದೇಶನದ ಹಿಂದಿನ ಸಿನೆಮಾಗಳಂತೆ ಉಪ್ಪಿ೨ ಕೂಡ ಪ್ರೇಕ್ಷಕರ ಅಪಾರ ಗಮನ ಸೆಳೆದಿದೆ. ಕನ್ನಡ ಪ್ರೇಕ್ಷಕರಷ್ಟೇ ಅಲ್ಲದೆ ಉಪೇಂದ್ರ ಅವರಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಅಭಿಮಾನಿಗಳಿದ್ದು ಅಲ್ಲೂ ಕೂಡ ಉಪ್ಪಿ ಮೇನಿಯಾ ಪ್ರಾರಂಭವಾಗಿದೆಯಂತೆ.
ಅಲ್ಲೂ ಅರ್ಜುನ್ ಅವರ 'ಗುರ್ರಂ ರೇಸ್' ಸಿನೆಮಾಗೆ ಹಣ ಹೂಡಿದ್ದ ನಿರ್ಮಾಪಕ ನಲ್ಲಮಳುಪು ಬುಜ್ಜಿ ತೆಲುಗಿಗೆ ಡಬ್ ಆಗಲಿರುವ ಈ ಸಿನೆಮಾದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಉಪ್ಪಿ೨ ತೆಲುಗಿನಲ್ಲಿ ಉಪೇಂದ್ರ೨ ಎಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ.
ಸದ್ಯಕ್ಕೆ ಡಬ್ಬಿಂಗ್ ಕೆಲಸ ಮುಂಚೂಣಿಯಲ್ಲಿದ್ದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಸಿನೆಮಾ ಬಿಡುಗಡೆ ಕಾಣಲಿದೆಯಂತೆ. ಕರ್ನಾಟಕದಲ್ಲಿ ೨೫೦ ಥಿಯೇಟರ್ ಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದ್ದು ತೆಲುಗು ಮಾರುಕಟ್ಟೆಯಲ್ಲಿ ೨೦೦ ಸಿನೆಮಾಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


