ನಟಿಯಾಗಿ, ನನಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ: ನಟಿ ರೇವತಿ
ನಟಿಯಾಗಿ ತಮಗೆ ಸಿಗುತ್ತಿರುವ ಪಾತ್ರವನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿದ್ದ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಗೆದ್ದಿದ್ದ ರೇವತಿಗೆ ಇದೀಗ ತಮಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ...

ಮುಂಬೈ: ನಟಿಯಾಗಿ ತಮಗೆ ಸಿಗುತ್ತಿರುವ ಪಾತ್ರವನ್ನು ಯಾವುದೇ ಅಂಜಿಕೆ ಇಲ್ಲದೆ ಮಾಡುತ್ತಿದ್ದ, ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಗೆದ್ದಿದ್ದ ರೇವತಿಗೆ ಇದೀಗ ತಮಗೆ ಸಿಗುತ್ತಿರುವ ಪಾತ್ರ ತೃಪ್ತಿ ತರುತ್ತಿಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ವಯಸ್ಸಿಗೆ ತಕ್ಕಂತೆ ನನಗೆ ಪಾತ್ರಗಳು ಸಿಗುತ್ತಿವೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆದರೆ ಸಿಗುತ್ತಿರುವ ಪಾತ್ರ ಸವಾಲು ಎಂಬ ಭಾವನೆ ಹುಟ್ಟಿಸುತ್ತಿಲ್ಲ. ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದಕ್ಕಿಂತ ಪಾತ್ರಗಳ ಮೌಲ್ಯ ಮುಖ್ಯವಾಗುತ್ತದೆ. ಅಂತಹ ಮೌಲ್ಯಯುತ ಪಾತ್ರ ಮಾಡಲು ನನಗೆ ಬಹಳ ಇಷ್ಟ.ಅಂತಹ ಪಾತ್ರಗಳನ್ನು ಹುಡುಕುತ್ತಿರುವುದರಿಂದಲೇ ಇಂದು ನಾನು 2 ವರ್ಷಗಳಿಗೊಮ್ಮೆ 1 ಚಿತ್ರದಲ್ಲಿ ಅಭಿನಯಿಸುತ್ತಿರುವುದು.
ಬಾಲಿವುಡ್ ಕಲ್ಕಿ ಕೊಚ್ಲಿನ್ರ ಮಾರ್ಗರಿಟಾ ಚಿತ್ರದ ಯಶಸ್ಸಿ ಸಂತೋಷದಲ್ಲಿರುವ ರೇವತಿ, ಇದೇ ವೇಳೆ ತಮ್ಮ ಚಿತ್ರದ ಕುರಿತಂತೆ ಮಾತನಾಡಿದ್ದು, ಕಲ್ಕಿ ಕೊಚ್ಲಿನ್ ಅವರೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವವನ್ನು ನೀಡಿದೆ. ಕಲ್ಕಿ ಚಿತ್ರದಲ್ಲಿ ನಟನೆ ಕಷ್ಟಕರ ಅನಿಸಲಿಲ್ಲ. ಪಾತ್ರದೊಂದಿಗೆ ನಮ್ಮನ್ನು ತೊಡಗಿಸಿಕೊಂಡಾಗ ನಟನೆ ಸಾಧಾರಣವಾಗಿಯೇ ಬಂದುಬಿಡುತ್ತದೆ. ಪ್ರಸ್ತುತ ನನ್ನ ಕೈಯಲ್ಲಿ 2 ಚಿತ್ರಗಳಿವೆ. ಇದರಲ್ಲಿ ಒಂದು ಚಿತ್ರ 45 ವಯಸ್ಸಿನ ಮಹಿಳೆಗೆ ಸಂಬಂಧಿಸಿದ್ದು ಎಂದು ರೇವತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


