ಕಿಸ್‌ನಿಂದ ಪ್ರೆಗ್ನೆಂಟ್ ಆಗಲ್ಲ: ಬಿಗ್‌ಬಾಸ್ ಸ್ಪರ್ಧಿ
ಮುತ್ತಿನಿಂದ ಗರ್ಭ ಧರಿಸಲು ಸಾಧ್ಯವಿಲ್ಲ....

ಮುಂಬೈ: ಮುತ್ತಿನಿಂದ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಮಾಡೆಲ್ ಡಿಯಾಂಡ್ರಾ ಸೋರ್ಸೆ ಅವರು ಹೇಳಿದ್ದಾರೆ.
ಕಲರ್ಸ್ ಚಾನಲ್‌ನ ಪ್ರಸಿದ್ಧ ಕಾರ್ಯಕ್ರಮ ಬಿಗ್ ಬಾಸ್ 8 ಆವೃತ್ತಿಯ ರಿಯಾಲಿಟಿ ಶೋನ ಅಭ್ಯರ್ಥಿಯಾಗಿದ್ದ 35 ವರ್ಷದ ಡಿಯಾಂಡ್ರಾ ಅವರು ಕಳೆದ ವಾರ ಹೊರಬಂದಿದ್ದಾರೆ.
ಡಿಯಾಂಡ್ರಾ ಅವರು ಹೊರ ಬಂದಿರುವುದಕ್ಕೆ ಕಾರಣ ಅವರು ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಗರ್ಭಿಣಿಯಾಗಿಲ್ಲ. ಚುಂಬನದ ಮೂಲಕ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಿಯಾಲಿಟಿ ಶೋನಲ್ಲಿ ನನ್ನ ಆರೋಗ್ಯ ಹದಗೆಟ್ಟಿತ್ತು ಇದರಿಂದಾಗಿ ನನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ ಅಷ್ಟೇ. ಸದ್ಯ ನಾನು ಆರೋಗ್ಯದಿಂದ ಇದ್ದೇನೆ. ಅಲ್ಲದೆ ಶೋನಲ್ಲಿ ನನ್ನ ಪ್ರತಿಸ್ಪರ್ಧಿ ಹಾಗೂ ನಟ ಗೌತಮ್ ಗುಲಾತಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ ಎಂಬುದೆಲ್ಲ ಗಾಳಿ ಸುದ್ದಿ ಎಂದು ಹೇಳಿದ್ದಾರೆ.
ರಿಯಾಲಿಟಿ ಶೋನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದ ಡಿಯಾಂಡ್ರಾ ಅವರು ತಮ್ಮ ಆಕ್ರಮಣಕಾರಿ ಹಾಗೂ ಮನರಂಜನೆ ನೀಡುವುದರ ಮೂಲಕ ರಂಚಿಸುತ್ತಿದ್ದರು. ಅಲ್ಲದೆ ವಿಭಿನ್ನ ಹೇರ್‌ಸ್ಟೈಲ್ ಮೂಲಕ ಪ್ರಸಿದ್ಧಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


