ಬಾಲಿವುಡ್

ಮಹಿಳೆಯರ ಆಯ್ಕೆಯಲ್ಲೂ ಉತ್ತಮ ಟೇಸ್ಟ್ ಇದೆ: 3ನೇ ಮದುವೆಗೆ ಸಿದ್ಧವಾದ ಆಮಿರ್ ಖಾನ್ ಕಾಲೆಳೆದ ಕಾಜೋಲ್

ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿರುವುದಾಗಿ ಸ್ವತಃ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ಇತ್ತೀಚಿಗೆ ದೃಢಪಡಿಸಿದ್ದಾರೆ.

ಮಹಿಳೆಯರ ಆಯ್ಕೆಯಲ್ಲೂ ಉತ್ತಮ ಟೇಸ್ಟ್ ಇದೆ: 3ನೇ ಮದುವೆಗೆ ಸಿದ್ಧವಾದ ಆಮಿರ್ ಖಾನ್ ಕಾಲೆಳೆದ ಕಾಜೋಲ್
ಆಮಿರ್ ಖಾನ್ - ಕಾಜೋಲ್ ಹಾಗೂ ಗೌರಿ
Published On :

ಮುಂಬೈ: ಕೆಲವು ವರ್ಷಗಳ ಹಿಂದಷ್ಟೇ ಕಿರಣ್ ರಾವ್ ಅವರಿಗೆ ಡಿವೋರ್ಸ್‌ ಕೊಟ್ಟಿದ್ದ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರು ಈಗ ಮೂರನೇ ಮದುವೆಗೆ ಸಿದ್ಧವಾಗಿದ್ದಾರೆ.

ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿರುವುದಾಗಿ ಸ್ವತಃ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ಇತ್ತೀಚಿಗೆ ದೃಢಪಡಿಸಿದ್ದಾರೆ.

ಈ ಬಗ್ಗೆ ಬಾಲಿವುಡ್ ಹಿರಿಯ ನಟಿ ಕಾಜೋಲ್ ಅವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಮೀರ್ ಖಾನ್ ಪ್ರೊಡಕ್ಷನ್ಸ್‌ಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಜೋಲ್ ಅವರು, ಅಮೀರ್ ಖಾನ್‌ ಅವರ ಮೂರನೇ ಮದುವೆ ಕುರಿತು ಹಾಸ್ಯಮಯವಾಗಿ ರಿಯಾಕ್ಷನ್‌ ಕೊಟ್ಟಿದ್ದಾರೆ.

ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ಉತ್ತಮ ಸಿನಿಮಾಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕಾಜೋಲ್, ಅವರಿಗೆ ಸಿನಿಮಾಗಳ ಆಯ್ಕೆಯಲ್ಲಿ ಅದ್ಭುತ ಅಭಿರುಚಿ ಇದೆ. ‘ಲಗಾನ್’ ಚಿತ್ರದ ಮೂಲಕ ಆರಂಭವಾದ ಅವರ ಪಯಣ ಇಂದಿಗೂ ಯಶಸ್ವಿಯಾಗಿ ಮುಂದುವರಿದಿದೆ ಎಂದು ಹೇಳಿದರು.

“ಸಿನಿಮಾಗಳಷ್ಟೇ ಅಲ್ಲ, ಮಹಿಳೆಯರ ಆಯ್ಕೆಯಲ್ಲೂ ಅವರಿಗೆ ಉತ್ತಮ ಅಭಿರುಚಿ ಇದೆ” ಎಂದು ಹೇಳಿ ಅಮೀರ್ ಖಾನ್ ಅವರನ್ನು ಕೆಣಕಿದರು. ಕಾಜೋಲ್ ಅವರ ಈ ಮಾತಿಗೆ ಸಭಾಂಗಣದಲ್ಲಿ ಎಲ್ಲರೂ ಜೋರಾಗಿ ನಕ್ಕರು, ಅಮೀರ್ ಕೂಡ ಮುಜುಗರದಿಂದ ನಗುತ್ತ ಸುಮ್ಮನಾದರು.

ಅಮೀರ್ ಖಾನ್ ಅವರು ಮೊದಲು ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಬಳಿಕ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಎರಡೂ ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯಗೊಂಡಿದ್ದರೂ, ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಇದೀಗ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ಜುಲೈ 5ರಂದು ಮೂರನೇ ಮದುವೆಯಾಗಲು ಅಮೀರ್ ಖಾನ್ ಸಿದ್ಧವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.