ಬಾಲಿವುಡ್

Amir Khan ಮ್ಯಾರೇಜ್ ಸ್ಟೋರಿ! ಗರ್ಲ್​ಫ್ರೆಂಡ್ ಗೌರಿ ಜೊತೆ ಮದುವೆ ಖಚಿತಪಡಿಸಿದ ಆಮಿರ್ ಖಾನ್

ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿರುವುದಾಗಿ ಸ್ವತಃ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ದೃಢಪಡಿಸಿದ್ದಾರೆ.

Amir Khan ಮ್ಯಾರೇಜ್ ಸ್ಟೋರಿ! ಗರ್ಲ್​ಫ್ರೆಂಡ್ ಗೌರಿ ಜೊತೆ ಮದುವೆ ಖಚಿತಪಡಿಸಿದ ಆಮಿರ್ ಖಾನ್
ಗೌರಿ ಜತೆ ಆಮಿರ್ ಖಾನ್
Published On :

ಮುಂಬೈ: ಕೆಲವು ವರ್ಷಗಳ ಹಿಂದಷ್ಟೇ ಕಿರಣ್ ರಾವ್ ಅವರಿಗೆ ಡಿವೋರ್ಸ್‌ ಕೊಟ್ಟಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರು ಈಗ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ.

ಜುಲೈ 5 ರಂದು ಖಾಸಗಿ ಸಮಾರಂಭದಲ್ಲಿ ಬೆಂಗಳೂರಿನ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮದುವೆಯಾಗುತ್ತಿರುವುದಾಗಿ ಸ್ವತಃ 61 ವರ್ಷದ ಬಾಲಿವುಡ್ ನಟ ಅಮಿರ್ ಖಾನ್ ಅವರು ದೃಢಪಡಿಸಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಅವರು ಮುಂದಿನ ತಿಂಗಳು ಮದುವೆಯಾಗುತ್ತಿದ್ದಾರೆ ಎಂದು ಬುಧವಾರ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಅಮಿರ್ ಖಾನ್, "ನಾನು ಪ್ರಸ್ತುತ ಅಮೆರಿಕದಲ್ಲಿದ್ದೇನೆ. ಮದುವೆಯ ಸುದ್ದಿ ನಿಜ. ಅದು ಜುಲೈ 5 ರಂದು" ಎಂದು ವೆರೈಟಿ ಇಂಡಿಯಾಗೆ ತಿಳಿಸಿದ್ದಾರೆ.

ಸೂಪರ್ ಸ್ಟಾರ್ ಅಮಿರ್ ಖಾನ್ ಅವರು ಈ ಹಿಂದೆ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಇದೀಗ ಮೂರನೇ ಬಾರಿ ಗೌರಿ ಸ್ಪ್ರಾಟ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. 47 ವರ್ಷದ ಗೌರಿ ಸ್ಪ್ರಾಟ್ ಅವರು ಏಳು ವರ್ಷದ ಮಗುವಿನ ತಾಯಿ ಆಗಿದ್ದಾರೆ.

ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಖಾನ್ ತಮ್ಮ ಬೆಂಗಳೂರಿನ ಗೆಳತಿಯನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ, ಗೌರಿ ತಮ್ಮ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.