ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ..: 'ಟಾಕ್ಸಿಕ್' ಬಿಡುಗಡೆಗೂ ಮುನ್ನ ಯಶ್ ಹಾಡಿ ಹೊಗಳಿದ ಅನುಪಮ್ ಖೇರ್
ಯಶ್ ಭೇಟಿ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅನುಪಮ್ ಖೇರ್ ಅವರು, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಪಯಣವನ್ನು ಹಾಡಿ ಹೊಗಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'(Toxic: A Fairy Tale for Grown-Ups) ಚಿತ್ರ ಬಿಡುಗಡೆ ಸಿದ್ಧವಾಗಿದ್ದು, ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರು ಯಶ್ ಅವರನ್ನು ಭೇಟಿಯಾಗಿ ʻಟಾಕ್ಸಿಕ್ʼ ಸಿನಿಮಾಗೆ ಶುಭ ಹಾರೈಸಿದ್ದಾರೆ.
ಯಶ್ ಭೇಟಿ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅನುಪಮ್ ಖೇರ್ ಅವರು, ರಾಕಿಂಗ್ ಸ್ಟಾರ್ ಯಶ್ ಅವರ ಸಿನಿ ಪಯಣವನ್ನು ಹಾಡಿ ಹೊಗಳಿದ್ದಾರೆ.
ಯಶ್ ಭೇಟಿಯಾಗಿದ್ದು ನನಗೆ ತುಂಬಿ ಖುಷಿ ಕೊಟ್ಟಿತು. ಅವರು ‘ಕೆಜಿಎಫ್’ ಸರಣಿಯ ಮೂಲಕ ರಾಕಿ ಭಾಯ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಈ ಸಿನಿ ಪ್ರಯಾಣ ನನಗೆ ತುಂಬಾ ಇಷ್ಟವಾಗಿದೆ. ನಾವು ವಿಭಿನ್ನ ತಲೆಮಾರುಗಳಿಗೆ ಸೇರಿದವರಾಗಿರಬಹುದು, ಆದರೆ ನಮ್ಮ ಕನಸುಗಳು ಒಂದೇ ಭಾಷೆಯನ್ನು ಮಾತನಾಡುತ್ತವೆ ಎಂದು ಬಾಲಿವುಡ್ ನಟ ಹೇಳಿದ್ದಾರೆ.
ತೆರೆಮೇಲೆ ಸಕತ್ ಪವರ್ಫುಲ್ ಆಗಿ ಅಬ್ಬರಿಸುವ ಯಶ್ ನಿಜ ಜೀವನದಲ್ಲಿ ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಇಂತಹ ಪ್ರತಿಭಾವಂತ ನಟರ ಉತ್ಸಾಹ ಮತ್ತು ಶ್ರಮ ತಮಗೂ ಹೊಸ ಶಕ್ತಿ ನೀಡುತ್ತದೆ ಎಂದು ಎಂದು ಹಾಡಿಹೊಗಳಿದ್ದಾರೆ.
ನಾವು ಇಬ್ಬರೂ ನಾವು ಒಂದು ಸ್ಟುಡಿಯೋದಲ್ಲಿ ಭೇಟಿಯಾಗಿ, ನಮ್ಮ ಸಿನಿಮಾ, ಜೀವನ, ಹೆತ್ತವರು, ಕುಟುಂಬ ಹಾಗೂ ಭವಿಷ್ಯದ ಕನಸುಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದೆವು. ಬಳಿಕ ಟಾಕ್ಸಿಕ್ ತನ್ನದೇ ಆದ ಛಾಪು ಮೂಡಿಸಲಿ, ಚಿತ್ರ ಯಶಸ್ಸನ್ನು ಪಡೆಯಲಿ ಎಂದು ಶುಭ ಹಾರೈಸಿರುವುದಾಗಿ ಅನುಪಮ್ ಖೇರ್ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




