ಬಾಲಿವುಡ್

ಲಕ್ನೋ: ಗೌರಿ ಖಾನ್ ವಿರುದ್ಧ ವಂಚನೆ ಕೇಸ್; ಶಾರುಖ್ ಪತ್ನಿ ಮೇಲೆ ಎಫ್ ಐ ಆರ್ ದಾಖಲು!

ಬಾಲಿವುಡ್​ ನಟ ಶಾರುಖ್ ಖಾನ್ ಅವ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್​ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್​ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ಲಕ್ನೋ: ಗೌರಿ ಖಾನ್ ವಿರುದ್ಧ ವಂಚನೆ ಕೇಸ್; ಶಾರುಖ್ ಪತ್ನಿ ಮೇಲೆ ಎಫ್ ಐ ಆರ್ ದಾಖಲು!
ಗೌರಿ ಮತ್ತು ಶಾರೂಕ್ ಖಾನ್
Published On :

ಬಾಲಿವುಡ್​ ನಟ ಶಾರುಖ್ ಖಾನ್ ಅವ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್​ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್​ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ಮುಂಬೈನ ಅಂಧೇರಿ ಪೂರ್ವ ಪ್ರದೇಶದ ನಿವಾಸಿ ಕಿರಿತ್ ಜಸ್ವಂತ್ ಸಾಹ್ ಎಂಬುವರು ತುಳಸಿಯಾನಿ ಕಂಪನಿಯ ನಿರ್ಮಾಣದ ಬಹುಮಹಡಿ ಕಟ್ಟಡದಲ್ಲಿ ಫ್ಲ್ಯಾಟ್​ ಖರೀದಿಸಿದ್ದರು. ಇದಕ್ಕಾಗಿ ಅವರು 86 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರು. ಕಂಪನಿ ನಿರ್ಮಿಸುತ್ತಿರುವ ಟೌನ್​ಶಿಪ್​ಗೆ ಶಾರೂಖ್​ ಖಾನ್​ ಅವರ ಪತ್ನಿ ಗೌರಿ ಖಾನ್​ ರಾಯಭಾರಿಗಳಾಗಿದ್ದಾರೆ.

ಗ್ರಾಹಕ ಕಿರಿತ್ ಜಸ್ವಂತ್ ಸಾಹ್ ಪ್ರಕಾರ, 2015 ರಲ್ಲಿ ಗೌರಿ ಖಾನ್ ಅವರು ಲಖನೌದ ತುಳಸಿಯಾನಿ ಕಂಪನಿಯ ಪ್ರಚಾರ ಮಾಡುವುದನ್ನು ನೋಡಿದ್ದೆ. ಅದರಲ್ಲಿ ತುಳಸಿಯಾನಿ ಕಂಪನಿಯು ಸುಶಾಲ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ಗಾಲ್ಫ್ ವ್ಯೂ ಎಂಬ ಹೆಸರಿನಲ್ಲಿ ಟೌನ್​ಶಿಪ್​ ನಿರ್ಮಾಣ ಮಾಡುತ್ತಿದೆ ಎಂದು ಪ್ರಚಾರ ಮಾಡಲಾಗಿತ್ತು. ಈ ಜಾಹೀರಾತು ನೋಡಿದ ನಂತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಕುಮಾರ್ ತುಳಸಿಯಾನಿ ಮತ್ತು ನಿರ್ದೇಶಕ ಮಹೇಶ್ ತುಳಸಿಯಾನಿ ಅವರನ್ನು ಸಂಪರ್ಕಿಸಿ ಒಂದು ಫ್ಲ್ಯಾಟ್​ ಖರೀದಿಗೆ ಮಾತುಕತೆ ನಡೆಸಿದೆ. ಇದಕ್ಕೆ  86 ಲಕ್ಷ ಹಣವನ್ನು ಪಾವತಿ ಮಾಡಿದ್ದೇನೆ. ಆದರೆ ಕಂಪನಿಯವರು ನನಗೆ ನೀಡಬೇಕಾದ ಪ್ಲಾಟ್‌ ಅನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಗೌರಿ ಖಾನ್‌ ಮಾತ್ರವಲ್ಲದೇ ಕಂಪನಿ ಎಂಡಿ ಅನಿಲ್ ಕುಮಾರ್ ತುಳಸಿಯಾನಿ, ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧವೂ ಜಸ್ವಂತ್ ಶಾ ದೂರು ದಾಖಲಿಸಿದ್ದಾರೆ.  ಬ್ರಾಂಡ್ ಅಂಬಾಸಿಡರ್ ಗೌರಿ ಖಾನ್ ಅವರ ಪ್ರಭಾವದಿಂದಾಗಿಯೇ ನಾನು ಲಖನೌದಲ್ಲಿರುವ ಸುಶಾಂತ್ ಗಾಲ್ಫ್ ಸಿಟಿಯಲ್ಲಿ ಫ್ಲಾಟ್ ಮಾಡಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.