ನಾನೆಂದೂ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ, ಸೇವಿಸಿಲ್ಲ: ದಿಯಾ ಮಿರ್ಜಾ
ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
“ಡ್ರಗ್ಸ್ ಸೇವನೆ ಕುರಿತು ನನ್ನ ವಿರುದ್ಧ ಕೇಳಿಬರುತ್ತಿರುವ ಕ್ಷುಲ್ಲಕ ಹಾಗೂ ತಳಬುಡವಿಲ್ಲದ ವರದಿಗಳು ಜೀವನಕ್ಕೆ ಕಂಟಕವಾಗಲಿದೆ” ಎಂದು ದಿಯಾ ಬೇಸರ ವ್ಯಕ್ತಪಡಿಸಿದ್ದು, ಒಂದು ವೇಳೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಿದಲ್ಲಿ ಅದನ್ನು ಎದುರಿಸುವ ಸಂಬಂಧ ಕಾನೂನು ಸಲಹೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
“ನಾನು ಈ ಸುದ್ದಿಯನ್ನು ಸುಳ್ಳು, ಆಧಾರರಹಿತ ಮತ್ತು ನನ್ನ ಮೇಲೆ ಸುಳ್ಳು ಆರೋಪ ಹೊರಿಸ;ಉ ಮಾಡಲಾಗಿದೆ ಎಂದು ಬಲವಾಗಿ ಅಲ್ಲಗಳೆಯಲು ಬಯಸುತ್ತೇನೆ. ಅಂತಹ ಕ್ಷುಲ್ಲಕ ವರದಿಗಾರಿಕೆಯ ಮೂಲಕ ನನ್ನ ಖ್ಯಾತಿಗೆ ಧಕ್ಕೆ ತರುವವರ ಮೇಲೆ ಕಠೀನ ಪರಿಣಾಮ ಬೀರುತ್ತದೆ. ನಾನು ಈ ವೃತ್ತಿಬದುಕಿನಲ್ಲಿ ವರ್ಷಗಳ ಕಠಿಣ ಪರಿಶ್ರಮದಿಂದ ಇಷ್ಟು ದೂರ ಬಂದಿದ್ದೇನೆ.
“ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ ಅಥವಾ ಸೇವಿಸಿಲ್ಲ. ಭಾರತದ ಕಾನೂನು ಪಾಲಿಸುವ ಪ್ರಜೆಯಾಗಿ ನನಗೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯಲು ನಾನು ಉದ್ದೇಶಿಸಿದೆ. ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ನನ್ನ ಬೆಂಬಲಿಗರಿಗೆ ಧನ್ಯವಾದಗಳು, ”ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


