ಮಾದಕ ದ್ರವ್ಯ

ಮಾದಕ ದ್ರವ್ಯ ಉತ್ತೇಜಿಸುವವರು ಮನುಷ್ಯರಲ್ಲ: ಡಾ. ಜಿ.ಪರಮೇಶ್ವರ್
ಮಾದಕ ದ್ರವ್ಯಗಳನ್ನು ಉತ್ತೇಜಿಸುವವರು ಅಥವಾ ಬೆಂಬಲಿಸುವವರು ಮನುಷ್ಯರಲ್ಲ. ಇಂತಹವರು ಜನರ ಜೀವನ, ಭವಿಷ್ಯ ಮತ್ತು ಆರೋಗ್ಯವನ್ನು ನಾಶಪಡಿಸುತ್ತಾರೆ.

ಅಪ್ರಾಪ್ತನ ಮೇಲೆ ಹಲ್ಲೆ ನಡೆಸಿ, ಮಾದಕ ವಸ್ತು ಸೇವಿಸುವಂತೆ ಒತ್ತಾಯಿಸಿದ ವಿಡಿಯೋ: ಆರು ಬಾಲಕರ ಬಂಧನ
ವಿಡಿಯೋವನ್ನು ಸ್ಟೇಷನ್ ಹೌಸ್ ಆಫೀಸರ್‌ಗೆ ತೋರಿಸಲಾಗಿದ್ದು, ಅವರು ಅದನ್ನು ಪರಿಶೀಲಿಸಿದ ನಂತರ, ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು.

ಬೆಂಗಳೂರು: ಮಾದಕ ದ್ರವ್ಯ ವಿರುದ್ಧ ಪೊಲೀಸರ ತೀವ್ರ ಕ್ರಮ; ಪತ್ತೆಹಚ್ಚಲು ಶ್ವಾನ ದಳ ನಿಯೋಜನೆ
ಕೊರಿಯರ್ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಶ್ವಾನ ದಳಗಳನ್ನು ನಿಯೋಜಿಸಲಾಗುತ್ತಿದೆ.

Bengaluru: ನಗರದ ವಿವಿಧೆಡೆ CCB ದಾಳಿ: 81.82 ಲಕ್ಷ ರೂ ಮೌಲ್ಯದ ಮಾದಕ ದ್ರವ್ಯ ವಶ
ಮತ್ತೊಂದು ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ನಿಗ್ರಹ ದಳ (ಸಿಸಿಬಿ) 2ನೇ ಹಂತದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಅಂಗಡಿಯಲ್ಲಿ ಇ-ಸಿಗರೇಟ್‌ಗಳು, ಹುಕ್ಕಾ ಫ್ಲೇವರ್‌ಗಳು ಮತ್ತು ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಅಂಗಡಿ ಕೆಲಸಗಾರನನ್ನು ಬಂಧನಕ್ಕೊಳಪಡಿಸಿದೆ.

ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತಿದೆ: ಗೃಹ ಸಚಿವ ಅಮಿತ್ ಶಾ
ಹೆಚ್ಚಿನ ಮಾದಕ ದ್ರವ್ಯಗಳನ್ನು ಪಾಕಿಸ್ತಾನದಿಂದ ರವಾನಿಸಲಾಗುತ್ತದೆ ಮತ್ತು ಇರಾನ್ ಮೂಲಕ ಶ್ರೀಲಂಕಾ ಮತ್ತು ಆಫ್ರಿಕಾಕ್ಕೆ ಹೋಗುವುದರಿಂದ ಸಾಗರದಲ್ಲಿ ಭದ್ರತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಡ್ರಗ್ ಪ್ರಕರಣ: ತನಿಖೆಯಲ್ಲಿ ಆಘಾತಕಾರಿ ವಿಚಾರ; ಫುಡ್ ಡೆಲಿವರಿ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ
ಕರಾವಳಿ ಕರ್ನಾಟಕದ ವೈದ್ಯಕೀಯ, ಇತರ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಒಳಗೊಂಡಿರುವ ಡ್ರಗ್ಸ್ ಪ್ರಕರಣದ ತನಿಖೆಯು ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಆನ್‌ಲೈನ್ ಫುಡ್ ಡೆಲಿವರಿಗಳ ಮೂಲಕ ವಿದ್ಯಾರ್ಥಿಗಳ ಕೊಠಡಿಗಳಿಗೆ ಈ ಪದಾರ್ಥಗಳು ಪ್ರವೇಶಿಸಿವೆ ಮತ್ತು ವಾಚ್ ವಿವರಣೆ ಟ್ಯಾಗ್‌ಗಳ ರೂಪದಲ್ಲಿ ಎಲ್‌ಎಸ್‌ಡಿಯನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾರುಖ್ ಮನೆ ಮೇಲೆ ರೈಡ್ ಆಗಿಲ್ಲ: ಎನ್ ಸಿ ಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ನೀಡಿದ್ದು ಆರ್ಯನ್ ಖಾನ್ ಪ್ರಕರಣ ಸಂಬಂಧ ಪೇಪರ್ ವರ್ಕ್ ಗಾಗಿ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿ ಬಿ) ಅಧಿಕಾರಿಗಳು ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.

ನನ್ನ ಪಾರ್ಟಿಯಲ್ಲಿ ಯಾವ ಮಾದಕವಸ್ತುಗಳ ಸೇವನೆ ಇರಲಿಲ್ಲ: ಎನ್‌ಸಿಬಿಗೆ ಕರಣ್ ಜೋಹರ್ ಉತ್ತರ
ನನ್ನ ಪಾರ್ಟಿಗಳಲ್ಲಿ ಯಾವುದೇ ಬಗೆಯ ಮಾದಕವಸ್ತು ಬಳಕೆ ಇರುವುದಿಲ್ಲ ಎಂದು ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ತಮ್ಮ ಹೇಳಿಕೆ ಸಲ್ಲಿಸಿದ್ದಾರೆ,

ನಾನೆಂದೂ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ, ಸೇವಿಸಿಲ್ಲ: ದಿಯಾ ಮಿರ್ಜಾ
ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

