ದೇಶ

ಶಾರುಖ್ ಮನೆ ಮೇಲೆ ರೈಡ್ ಆಗಿಲ್ಲ: ಎನ್ ಸಿ ಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ನೀಡಿದ್ದು ಆರ್ಯನ್ ಖಾನ್ ಪ್ರಕರಣ ಸಂಬಂಧ ಪೇಪರ್ ವರ್ಕ್ ಗಾಗಿ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿ ಬಿ) ಅಧಿಕಾರಿಗಳು ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಶಾರುಖ್ ಮನೆ ಮೇಲೆ ರೈಡ್ ಆಗಿಲ್ಲ: ಎನ್ ಸಿ ಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ನೀಡಿದ್ದು ಆರ್ಯನ್ ಖಾನ್ ಪ್ರಕರಣ ಸಂಬಂಧ ಪೇಪರ್ ವರ್ಕ್ ಗಾಗಿ
ಶಾರೂಖ್ ಖಾನ್ ಮತ್ತು ಆರ್ಯನ್ ಖಾನ್ (ಸಂಗ್ರಹ ಚಿತ್ರ)
Published On :

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್ ಸಿ ಬಿ) ಅಧಿಕಾರಿಗಳು ಶಾರುಖ್ ಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಎನ್ ಸಿ ಬಿ ಅಧಿಕಾರಿಗಳು ಗುರುವಾರ ಶಾರುಖ್ ಖಾನ್ ಮನೆಗೆ ಭೇಟಿ ನೀಡಿದ್ದು ಪುತ್ರ ಆರ್ಯನ್ ಖಾನ್ ಪ್ರಕರಣ ಸಂಬಂಧದ ಪೇಪರ್ ವರ್ಕ್ ಕೆಲಸಕ್ಕಾಗಿ ಎಂದು ತಿಳಿದುಬಂಡಿದೆ.

ಕ್ರೂಸ್ ಹಡಗಿನಲ್ಲಿ ಮಾದಕ ದ್ರವ್ಯ ಪಾರ್ಟಿ ನಡೆಯುತ್ತಿರುವುದಾಗಿ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭ ಅಲ್ಲಿ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಕೂಡಾ ಹಾಜರಿದ್ದರು.ಆಕ್ಟೋಬರ್ 3ರಂದು ಅವರನ್ನು ಎನ್ ಸಿ ಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. 

ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯ ಆರ್ಯನ್ ಖಾನ್ ಬೇಲ್ ಅರ್ಜಿಯನ್ನು ತಳ್ಳಿಹಾಕಿದೆ. ಆದರೆ ಬಾಂಬೆ ಹೈಕೋರ್ಟಿನಲ್ಲಿ ಆರ್ಯನ್ ಖಾನ್ ಬೇಲ್ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 26ರಂದು ಅರ್ಜಿ ವಿಚಾರಣೆ ನಡೆಯಲಿದೆ. 

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.