ಬಾಲಿವುಡ್

ಮೊಮ್ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಬಚ್ಚನ್: ಆರಾಧ್ಯಳ ಸ್ವಗತಕ್ಕೆ ಬಿಗ್ ಬಿ ಫುಲ್ ಖುಷ್ 

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊಮ್ಮಗಳು ಆರಾಧ್ಯಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳ ನೃತ್ಯ, ಮಾತು ನೋಡಿ ಸಂತೋಷಪಟ್ಟಿದ್ದಾರೆ.ಆ

ಮೊಮ್ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಬಚ್ಚನ್: ಆರಾಧ್ಯಳ ಸ್ವಗತಕ್ಕೆ ಬಿಗ್ ಬಿ ಫುಲ್ ಖುಷ್ 
ಮೊಮ್ಮಗಳ ಜೊತೆ ಅಮಿತಾಬ್ ಬಚ್ಚನ್
Published On :

ಮುಂಬೈ: ಇಳಿ ವಯಸ್ಸಿನಲ್ಲಿ ಮೊಮ್ಮಕ್ಕಳ ಆಟ-ಪಾಠ ನೋಡುವುದೆಂದರೆ ಅಜ್ಜ-ಅಜ್ಜಿಯಂದಿರಿಗೆ ಖುಷಿಯ ಸಂಗತಿ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ತಮ್ಮ ಮೊಮ್ಮಗಳು ಆರಾಧ್ಯಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವಳ ನೃತ್ಯ, ಮಾತು ನೋಡಿ ಸಂತೋಷಪಟ್ಟಿದ್ದಾರೆ.


ಆರಾಧ್ಯ ಬಚ್ಚನ್ ಶಾಲಾ ವಾರ್ಷಿಕೋತ್ಸವದಲ್ಲಿ ಹೇಳಿದ್ದ ಮಹಿಳಾ ಸಶಕ್ತೀಕರಣದ ಸ್ವಗತ ಮಾತಿನ ತುಣುಕನ್ನು ಯಾರೋ ಅಭಿಮಾನಿಗಳು ವಿಡಿಯೊ ಶೇರ್ ಮಾಡಿ ಕುಟುಂಬದ ಹೆಮ್ಮೆ ಎಂದು ಬರೆದಿದ್ದರು. ಇದನ್ನು ರಿಟ್ವೀಟ್ ಮಾಡಿರುವ ಬಿಗ್ ಬಿ, ಕುಟುಂಬದ ಹೆಮ್ಮೆ, ಹೆಣ್ಣಿನ ಹೆಮ್ಮೆ, ಎಲ್ಲಾ ಮಹಿಳೆಯರ ಹೆಮ್ಮೆ, ನಮ್ಮ ಪ್ರೀತಿಯ ಆರಾಧ್ಯ ಎಂದು ಬರೆದುಕೊಂಡಿದ್ದಾರೆ.


ಮುಂಬೈಯ ಧೀರುಬಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿರುವ 8 ವರ್ಷದ ಆರಾಧ್ಯ ಬಚ್ಚನ್ ವಾರ್ಷಿಕೋತ್ಸವದಲ್ಲಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್, ಮಗಳು ಶ್ವೇತಾ ನಂದ ಜೊತೆ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.