ಮೋಹಕ ತಾರೆ ದಿ. ಶ್ರೀದೇವಿಯಂತೆ ದಕ್ಷಿಣ ಭಾರತದಲ್ಲಿ ಮಿಂಚು ಹರಿಸುತ್ತಾರಾ ಜಾಹ್ನವಿ ಕಪೂರ್?
ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಬಾಹುಬಲಿ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಇದೀಗ ಆರ್‌ಆರ್‌ಆರ್ ಟೈಟಲ್ ನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ...

Published On :
ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಬಾಹುಬಲಿ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಇದೀಗ ಆರ್‌ಆರ್‌ಆರ್ ಟೈಟಲ್ ನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇನ್ನು ಆರ್‌ಆರ್‌ಆರ್ ಚಿತ್ರದಲ್ಲಿ ಜ್ಯೂ.ಎನ್‍ಟಿಆರ್ ಹಾಗೂ ರಾಮ್ ಚರಣ್ ತೇಜಾ ಇಬ್ಬರು ನಟಿಸುತ್ತಿದ್ದಾರೆ. ಇದೀಗ ಬಂದ ಸುದ್ದಿ ಏನೆಂದರೆ ರಾಜಮೌಳಿ ಅವರು ಬಾಲಿವುಡ್ ಮೋಹಕ ತಾರೆ ದಿವಂಗತ ಶ್ರೀದೇಶಿ ಪುತ್ರಿ ಜಾಹ್ನವಿ ಕಪೂರ್ ರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.
ಧಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ಜಾಹ್ನವಿ ಕಪೂರ್ ಇದೀಗ ಆರ್‌ಆರ್‌ಆರ್ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರದಲ್ಲಿ ನಟಿಸಲಿದ್ದಾರೆ. ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರೀದೇವಿಯಂತೆ ಪುತ್ರಿಯೂ ಮಿಂಚು ಹರಿಸುತ್ತಾರಾ ಕಾದು ನೋಡಬೇಕಿದೆ.
ಜಾಹ್ನವಿ ಕಪೂರ್ ಅಭಿನಯದ ಧಡಕ್ ಚಿತ್ರ ಬಿಡುಗಡೆಯಾಗಿದ್ದು ಉತ್ತಮ ಕಲೆಕ್ಷನ್ ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್Ram Charan TejaSS Rajamouliಜಾಹ್ನವಿ ಕಪೂರ್ಎಸ್ಎಸ್ ರಾಜಮೌಳಿರಾಮ್ ಚರಣ್ ತೇಜಾJr. NTRJanhvi KapoorRRRಆರ್ಆರ್ಆರ್ಜ್ಯೂ.ಎನ್‍ಟಿಆರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


