'ಥಗ್ಸ್ ಆಫ್ ಹಿಂದೋಸ್ತಾನ್'ನಲ್ಲಿ ಕತ್ರಿನಾ ಕೈಫ್ ಸಿಪಾಯಿ ರಾಣಿ!
ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾಲ್ಟಾದಲ್ಲಿ 'ಥಗ್ಸ್ ಆಫ್ ಹಿಂದೋಸ್ತಾನ್' ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮತ್ತು ಫಾತಿಮಾ ಸನ ಶೇಕ್

Published On :
ಬಾಲಿವುಡ್ ನಟಿ ಕತ್ರಿನಾ ಕೈಫ್ ಮಾಲ್ಟಾದಲ್ಲಿ 'ಥಗ್ಸ್ ಆಫ್ ಹಿಂದೋಸ್ತಾನ್' ಸಿನೆಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಅಮಿತಾಬ್ ಬಚ್ಚನ್, ಅಮೀರ್ ಖಾನ್ ಮತ್ತು ಫಾತಿಮಾ ಸನ ಶೇಕ್ ನಟಿಸುತ್ತಿರುವ ಈ ಸಿನೆಮಾದಲ್ಲಿ ಕತ್ರಿನಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯಿತ್ತು. ಅವರ ಪಾತ್ರದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಆದರೆ ಮೂಲಗಳು ತಿಳಿಸುವ ಪ್ರಕಾರ "ಸಿನೆಮಾದಲ್ಲಿ ಕತ್ರಿನಾ ಭಾರತೀಯ ಸಿಪಾಯಿ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದಲ್ಲಿ ನಟಿಯ ನೋಟವನ್ನು ಗುಪ್ತವಾಗಿ ಕಾಪಾಡಿಕೊಂಡಿದ್ದು, ಯಾರಿಗೂ ಅವರ ಫೋಟೋ ಕ್ಲಿಕ್ಕಿಸುವ ಅನುಮತಿ ನೀಡಿಲ್ಲ" ಎನ್ನುತ್ತಾರೆ.
ಯಶ್ ರಾಜ್ ಫಿಲಂಸ್ ನಿರ್ಮಿಸುತ್ತಿರುವ ಈ ಸಿನೆಮಾ ಕನ್ಫೆಶನ್ಸ್ ಆಫ್ ಥಗ್ಸ್ ಕಾದಂಬರಿ ಆಧಾರಿತ ಚಿತ್ರ. ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ಥಗ್ಸ್ ಆಫ್ ಹಿಂದೋಸ್ತಾನ್' ೨೦೧೮ ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ.
ಇದರ ಬಗ್ಗೆ ಈ ಮೊದಲು ಟ್ವೀಟ್ ಮಾಡಿದ್ದ ನಟ ಅಮಿತಾಬ್ ಬಚ್ಚನ್ ಈ ಸಿನೆಮಾ ಒರಟು ಮತ್ತು ಗಟ್ಟಿಯಾದದ್ದು ಎಂದು ಬಣ್ಣಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Amitabh Bachchanಅಮಿತಾಬ್ ಬಚ್ಚನ್Katrina Kaifಕತ್ರಿನಾ ಕೈಫ್Aamir Khanಅಮೀರ್ ಖಾನ್Thugs Of Hindostanಥಗ್ಸ್ ಆಫ್ ಹಿಂದೋಸ್ತಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


