ವಿರಾಟ್ ಕೊಹ್ಲಿಗೆ ಸುಲ್ತಾನ್ ಚಿತ್ರದ ವಿಶೇಷ ಪ್ರದರ್ಶನ ನೀಡಲು ಅನುಷ್ಕಾ ಪ್ಲಾನ್!
ಅನುಷ್ಕಾ ಶರ್ಮಾ ತಮ್ಮ ಬಾಯ್ ಫ್ರೆಂಡ್ ವಿರಾಟ್ ಕೊಹ್ಲಿಗಾಗಿ ಸುಲ್ತಾನ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ...

ಮುಂಬೈ: ಅನುಷ್ಕಾ ಶರ್ಮಾ ತಮ್ಮ ಬಾಯ್ ಫ್ರೆಂಡ್ ವಿರಾಟ್ ಕೊಹ್ಲಿಗಾಗಿ ಸುಲ್ತಾನ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಅನುಶ್ಕಾ ಶರ್ಮಾ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಚಿತ್ರದಲ್ಲಿ ನಟಿಸುವ ಮೂಲಕ ತನ್ನ ವೃತ್ತಿ ಜೀವನದಲ್ಲೇ ಸವಾಲಿನ ಪಾತ್ರ ಮಾಡಿದ್ದಾರೆ. ಹಲವು ವಿಶೇಷತೆಗಳಿಂದ ಈಗಾಗಲೇ ಸುದ್ದಿಯಾಗಿರುವ ಸುಲ್ತಾನ್ ಚಿತ್ರವನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ದರಿಂದ ಚಿತ್ರದ ವಿಶೇಷ ಪ್ರದರ್ಶನವನ್ನು ಕೊಹ್ಲಿ ಜತೆಗೆ ನೋಡಲು ಅನುಷ್ಕಾ ಬಯಸಿದ್ದು, ಈ ಕುರಿತು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಜುಲೈ 5 ರಂದು ಬಿಡುಗಡೆಯಾಗುವ ಸುಲ್ತಾನ್ ಚಿತ್ರವನ್ನು ವಿರಾಟ್ ಕೊಹ್ಲಿ ಹೊರತುಪಡಿಸಿ, ಸಿನಿಮಾ ತಂಡದ ಐದು ಜನ ಸದಸ್ಯರಿಗೂ ವಿಶೇಷ ಪ್ರದರ್ಶನ ನೀಡಲು ಆಮಂತ್ರಣ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಅನುಷ್ಕಾ ಚಿತ್ರ ನಿರ್ಮಾಣ ತಂಡದ ಜೊತೆಗೆ ಮೊದಲ ಹಂತದ ಮಾತುಕತೆ ನಡೆಸಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


