ಟ್ವೀಟರ್‌ನಲ್ಲಿ ಅಮಿರ್, ಶಾರುಖ್ ಖಾನ್‌ನನ್ನು ಅನ್‍ಫಾಲೋ ಮಾಡಿದ ರಜನಿ!
ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @superstarrajini ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ...

ಕೆಲ ದಿನಗಳ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಟ್ವೀಟರ್ @superstarrajini ಅಕೌಂಟ್ ಅನ್ನು ಯಾರೋ ಹ್ಯಾಕ್ ಮಾಡಿದ್ದು ಇದೀಗ ಹ್ಯಾಕ್ ಆಗಿದ್ದ ಆಕೌಂಟನ್ನು ಮರಳಿ ಸಂಪಾದಿಸಿರುವ ರಜನಿ ಬಾಲಿವುಡ್ ನಟರಾದ ಅಮಿರ್ ಖಾನ್ ಹಾಗೂ ಶಾರುಖ್ ಖಾನ್ ರನ್ನು ಅನ್‍ಫಾಲೋ ಮಾಡಿದ್ದಾರೆ ಎನ್ನಲಾಗಿದೆ.
ರಜನಿ ಹ್ಯಾಕ್ ಮಾಡಿದ್ದವರು “HitToKill” ಅಂತಾ ಟ್ವೀಟ್ ಮಾಡಿದ್ದು, ಈ ಅಕೌಂಟ್ ಮೂಲಕ ಬಾಲಿವುಡ್ ನಟರಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ರನ್ನು ಫಾಲೋ ಮಾಡಿದ್ದಾರೆ. ತಮ್ಮ ಅಕೌಂಟ್ ಪುನ ಸಂಪಾದಿಸಿದ ರಜನಿಕಾಂತ್ ಅವರು ಈ ಇಬ್ಬರು ನಟರನ್ನು ಅನ್‍ಫಾಲೋ ಮಾಡಿದ್ದಾರೆ ಎನ್ನಲಾಗಿದೆ.
ರಜನಿ ಅವರು ಇಲ್ಲಿಯವರೆಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಹೊರತು ಪಡಿಸಿ ಯಾವುದೇ ವ್ಯಕ್ತಿಯನ್ನು ಫಾಲೋ ಮಾಡಿರಲಿಲ್ಲ.
ಟ್ವೀಟರ್ ಅಕೌಂಟ್ ಹ್ಯಾಕ್ ಕುರಿತಂತೆ ರಜನಿ ಪುತ್ರಿ ಐಶ್ವರ್ಯ ''@superstarrajini appa's account was hacked..handle retrieved. Thank you all :) #AllIsWell '' ಅಂತಾ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


