ಬಾಲಿವುಡ್

ಪ್ರವಾಹಪೀಡಿತ ತಮಿಳುನಾಡಿಗೆ 'ದಿಲ್ವಾಲೆ' ತಂಡದಿಂದ ೧ ಕೋಟಿ ದೇಣಿಗೆ

ಪ್ರವಾಹಪೀಡಿತ ತಮಿಳುನಾಡಿಗೆ ನಟ ಶಾರುಕ್ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಸಿನೆಮಾ 'ದಿಲ್ವಾಲೆ' ತಂಡ ೧ ಕೋಟಿ ರೂ ಸಹಾಯಧನ

ಪ್ರವಾಹಪೀಡಿತ ತಮಿಳುನಾಡಿಗೆ 'ದಿಲ್ವಾಲೆ' ತಂಡದಿಂದ ೧ ಕೋಟಿ ದೇಣಿಗೆ
ದಿಲ್ವಾಲೆ ಸಿನೆಮಾದಲ್ಲಿ ಶಾರುಕ್ ಖಾನ್ ಮತ್ತು ಕಾಜೋಲ್
Published On :

ಮುಂಬೈ: ಪ್ರವಾಹಪೀಡಿತ ತಮಿಳುನಾಡಿಗೆ ನಟ ಶಾರುಕ್ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಸಿನೆಮಾ 'ದಿಲ್ವಾಲೆ' ತಂಡ ೧ ಕೋಟಿ ರೂ ಸಹಾಯಧನ ನೀಡಿದೆ.

ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಪ್ರವಾಹದಿಂದ ಸುಮಾರು ೩೨೫ ಜನ ಮೃತಪಟ್ಟು ಲಕ್ಷಕ್ಕೂ ಹೆಚ್ಚು ಜನಕ್ಕೆ ಹಾನಿಯಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಶಾರುಕ್ ಖಾನ್ ಬರೆದಿರುವ ಪತ್ರದಲ್ಲಿ "ಪ್ರಕೃತಿಯ ಮುನಿಸಿನಿಂದ ಚೆನ್ನೈ ನಗರಕ್ಕೆ ಉಂಟಾಗಿರುವ ಹಾನಿಯಿಂದ ನಮಗೆ ಬೇಸರವಾಗಿದೆ.

"ಇದೇ ಸಮಯದಲ್ಲಿ, ಚೆನ್ನೈ ಜನ ಧೈರ್ಯ ತೋರಿ ಪರಸ್ಪರ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಮತ್ತು ಹೆಮ್ಮೆ ಎನಿದುತ್ತದೆ.

"ಈ ವಿಪತ್ತು ನಿರ್ವಹಣೆಗಾಗಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಭಾರಿ ಕ್ರಮಗಳಿಗೆ ಪ್ರಶಂಸೆ ವ್ಯುಕ್ತಪಡಿಸುತ್ತ ನಟ-ನಿರ್ಮಾಪಕ ಮತ್ತು ಚಿತ್ರತಂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧ ಕೋಟಿ ರೂ ದೇಣಿಗೆ ನೀಡುತ್ತಿದ್ದೇವೆ" ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.