ಬಾಲಿವುಡ್

ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ 3 ಭಾರತೀಯರು

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ ಭಾರತದ ಮೂವರು ನಟರು ಸ್ಥಾನ ಪಡೆದಿದ್ದಾರೆ...

ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ 3 ಭಾರತೀಯರು
ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್
Published On :
ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ವಿಶ್ವದ ಶ್ರೀಮಂತ ನಟರ ಟಾಪ್ 10 ಪಟ್ಟಿಯಲ್ಲಿ ಭಾರತದ ಮೂವರು ನಟರು ಸ್ಥಾನ ಪಡೆದಿದ್ದಾರೆ. 
ಹಾಲಿವುಡ್ ನ ಸೂಪರ್ ಸ್ಟಾರ್ ಗಳಿಗೆ ಸೆಡ್ಡು ಹೊಡೆದಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ಇಬ್ಬರು ನಟರು ಈ ವರ್ಷ 33.5 ಮಿಲಿಯನ್ ಅಮೆರಿಕನ್ ಡಾಲರ್ (213 ಕೋಟಿ ರುಪಾಯಿ) ಆದಾಯವನ್ನು ಹೊಂದಿದ್ದರೆ, 32.5 ಮಿಲಿಯನ್ ಅಮೆರಿಕನ್ ಡಾಲರ್ (203.97ಕೋಟಿ ರೂಪಾಯಿ) ಆದಾಯದೊಂದಿಗೆ ನಟ ಅಕ್ಷಯ್ ಕುಮಾರ್ ಗೆ 8ನೇ ಸ್ಥಾನದಲ್ಲಿದ್ದಾರೆ. 
ಈ ವರ್ಷ ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಈ ಬಾರಿಯೂ ಐರನ್ ಮ್ಯಾನ್ ಸ್ಟಾರ್ ರಾಬರ್ಟ್ ಡೌನಿ ಪಾಲಾಗಿದೆ. ಈತನ ಆದಾಯ 80 ಮಿಲಿಯನ್ ಅಮೆರಿಕನ್ ಡಾಲರ್ (509 ಕೋಟಿ ರುಪಾಯಿ).  ಇನ್ನು ಎರಡನೇ ಸ್ಥಾನದಲ್ಲಿರುವ ಆಕ್ಷನ್ ಕಿಂಗ್ ಜಾಕಿ ಚಾನ್ 50 ಮಿಲಿಯನ್ ಅಮೆರಿಕನ್ ಡಾಲರ್ ಆದಾಯ (318 ಕೋಟಿ ರುಪಾಯಿ). ಹೊಂದಿದ್ದಾರೆ. ಫಾಸ್ಟ್ ಅಂಡ್ ಫ್ಯೂರಿಯಸ್ ಖ್ಯಾತಿಯ ನಟ ವ್ಯಾನ್ ಡೀಸಲ್ ಮೂರನೇ ಸ್ಥಾನದಲ್ಲಿದ್ದು, ಅವರ ಆದಾಯ 47 ಮಿಲಿಯನ್ ಅಮೆರಿಕನ್ ಡಾಲರ್ (299 ಕೋಟಿ ರುಪಾಯಿ) ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.