ಬಾಲಿವುಡ್

ಮದುವೆ ಮನೆಯಲ್ಲಿ ಕುಣಿಯಲು 4 ಕೋಟಿ ಸಂಭಾವನೆ ಪಡೆದ ಜಾಕ್ವಲಿನ್ ಫರ್ನಾಂಡಿಸ್‌!

ಮದುವೆ ಮನೆಯಲ್ಲಿ ಕುಣಿಯಲು 4 ಕೋಟಿ ಸಂಭಾವನೆ ಪಡೆದ ಜಾಕ್ವಲಿನ್ ಫರ್ನಾಂಡಿಸ್‌!
ಜಾಕ್ವಲಿನ್ ಫರ್ನಾಂಡಿಸ್
Published On :

ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಅವರು ಲಂಡನ್‌ನಲ್ಲಿ ನಡೆಯುವ ಎನ್‌ಆರ್‌ಐ ಒಬ್ಬರ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಬರೋಬ್ಬರಿ ನಾಲ್ಕು ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಭಾರತೀಯ ಮೂಲದ ಉದ್ಯಮಿಯೊಬ್ಬರು ತಮ್ಮ ಪುತ್ರನ ಮದುವೆಯನ್ನು ಮೇ ಅಂತ್ಯಕ್ಕೆ ಲಂಡನ್‌ನಲ್ಲಿ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದು, ಈ ಸಂಬಂಧ ಕೆಲವು ಬಾಲಿವುಡ್ ನಟಿಯರನ್ನು ಸಂಪರ್ಕಿಸಿದ್ದರು. ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಜಾಕ್ವಲಿನ್ ಒಪ್ಪಿಕೊಂಡಿದ್ದು, ತನ್ನ ಚಿತ್ರಗಳ ಹಾಗೂ ಕೆಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಬಾಲಿವುಡ್ ನಟಿ ಎರಡು ದಿನಗಳ ಕಾಲ ಲಂಡನ್‌ನಲ್ಲಿ ತಂಗಲಿದ್ದು, ಉದ್ಯಮಿಯ ಕುಟುಂಬ ನಟಿಯ ವಸತಿ ಹಾಗೂ ಇತರೆ ಸೌಲಭ್ಯಗಳ ವ್ಯವಸ್ಥೆ ಮಾಡಿದೆ.

ಉದ್ಯಮಿಯ ಕುಟುಂಬ ಸಹ ಜಾಕ್ವಲಿನ್ ಡ್ಯಾನ್ಸ್‌ಗಾಗಿ 4 ಕೋಟಿ ರುಪಾಯಿ ಸಂಭಾವನೆ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಬಾಲಿವುಡ್ ನಟಿಯ ವಕ್ತಾರರು ಖಚಿತಪಡಿಸಿದ್ದಾರೆ.

ಈ ಹಿಂದೆ ಖ್ಯಾತ ವಾಣಿಜ್ಯೋದ್ಯಮಿ ಜಿವಿಕೆ ರೆಡ್ಡಿ ಅವರ ಮೊಮ್ಮಗಳ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡ್ಯಾನ್ಸ್ ಮಾಡಿದ್ದ ಬಾಲಿವುಡ್ ಬಾದಷಾ ಶಾರುಕ್ ಖಾನ್ ಎರಡು ಕೋಟಿ ರುಪಾ.ಯಿ ಸಂಭಾವನೆ ಪಡೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.