ಇಂಜಿನಿಯರಿಂಗ್ ಪದವಿಧರರಿಗೆ ಸುವರ್ಣ ಅವಕಾಶ; 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಭಾರತೀಯ ರೈಲ್ವೆ ಅರ್ಜಿ ಆಹ್ವಾನ
ಇಂಜಿನಿಯರ್ ಪದವಿಧರರಿಗೆ ಗುಡ್ ನ್ಯೂಸ್; ಯಾಕಂದ್ರೆ, ಭಾರತೀಯ ರೈಲ್ವೆ ಇಲಾಖೆಯ, ರೈಲ್ವೆ ನೇಮಕಾತಿ ಮಂಡಳಿಯು ಬರೋಬ್ಬರಿ 3993 ಇಂಜಿನಿಯರ್ ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ಇದು ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

Railway JE Recruitment 2026: ಇಂಜಿನಿಯರ್ ಪದವಿಧರರಿಗೆ ಗುಡ್ ನ್ಯೂಸ್; ಯಾಕಂದ್ರೆ, ಭಾರತೀಯ ರೈಲ್ವೆ ಇಲಾಖೆಯ, ರೈಲ್ವೆ ನೇಮಕಾತಿ ಮಂಡಳಿಯು ಬರೋಬ್ಬರಿ 3993 ಇಂಜಿನಿಯರ್ ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ಇದು ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 3,993 ಹುದ್ದೆಗಳು
ಜೂನಿಯರ್ ಇಂಜಿನಿಯರ್ (JE): ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಇತ್ಯಾದಿ.
ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS).
ಕೆಮಿಕಲ್ & ಮೆಟಲರ್ಜಿಕಲ್ ಅಸಿಸ್ಟೆಂಟ್ (CMA).
ಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 14 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಸೆಪ್ಟೆಂಬರ್ 2026
ಅರ್ಜಿ ತಿದ್ದುಪಡಿ ವಿಂಡೋ: 16 ಸೆಪ್ಟೆಂಬರ್ನಿಂದ 25 ಸೆಪ್ಟೆಂಬರ್ 2026 ರವರೆಗೆ
ಅರ್ಹತೆ:
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಸಂಬಂಧಿಸಿದ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.
ಕೆಲವು ನಿರ್ದಿಷ್ಟ ಹುದ್ದೆಗಳಿಗೆ B.Sc ಪದವೀಧರರೂ ಸಹ ಅರ್ಹರಾಗಿರುತ್ತಾರೆ.
ಅಂತಿಮ ವರ್ಷದ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಯಾಕಂದ್ರೆ, ಕೊನೆಯ ದಿನಾಂಕ 13.09.2026 ರೊಳಗೆ ತೇರ್ಗಡೆಯಾಗಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷಗಳುಗರಿಷ್ಠ ವಯಸ್ಸು: 33 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹500 (CBT-1 ಪರೀಕ್ಷೆಗೆ ಹಾಜರಾದ ನಂತರ ₹400 ರೀಫಂಡ್ ಮಾಡಲಾಗುತ್ತದೆ).
SC / ST / ಮಾಜಿ ಸೈನಿಕರು / ಮಹಿಳೆಯರು / ಅಂಗವಿಕಲರು: ₹250 (CBT-1 ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ಮೊತ್ತ ರೀಫಂಡ್ ಆಗುತ್ತದೆ).
ಮೊದಲ ಹಂತದ CBT ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಬ್ಯಾಂಕ್ ಶುಲ್ಕ ಕಡಿತಗೊಳಿಸಿ ಹಣ ಮರುಪಾವತಿ ಮಾಡಲಾಗುತ್ತದೆ. ಅರ್ಜಿ ತಿರಸ್ಕೃತಗೊಂಡರೆ ಅಥವಾ CBT-1 ಗೆ ಗೈರುಹಾಜರಾದರೆ ಯಾವುದೇ ಮರುಪಾವತಿ ಇರುವುದಿಲ್ಲ.
ಸಂಬಳ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ಪೇ ಲೆವೆಲ್-6ರಂತೆ ಆರಂಭಿಕ ಮೂಲ ವೇತನ ₹35,400 ಇರಲಿದೆ. ಇದರೊಂದಿಗೆ ಡಿಎ, ಹೆಚ್ಆರ್ಎ ಮುಂತಾದ ಭತ್ಯೆಗಳೂ ಸಿಗಲಿವೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಒಟ್ಟು 4 ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ - ಹಂತ 1 (CBT 1)
ಕಂಪ್ಯೂಟರ್ ಆಧಾರಿತ ಪರೀಕ್ಷೆ - ಹಂತ 2 (CBT 2)
ದಾಖಲಾತಿ ಪರಿಶೀಲನೆ
ವೈದ್ಯಕೀಯ ತಪಾಸಣೆ
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಕೇವಲ ಒಂದು RRB ಮಂಡಳಿಯನ್ನು ಮಾತ್ರ ಆಯ್ಕೆ ಮಾಡಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಹು ಅರ್ಜಿಗಳನ್ನು ಸಲ್ಲಿಸಿದರೆ ಅರ್ಜಿಯನ್ನು ರದ್ದುಪಡಿಸಲಾಗುತ್ತದೆ.
ಅರ್ಜಿಯಲ್ಲಿ ಲೈವ್ ಫೋಟೋ (Live Photo Capture) ಸೆರೆಹಿಡಿಯಲಾಗುತ್ತದೆ ಮತ್ತು ಕಪ್ಪು ಶಾಯಿಯ ಪೆನ್ನಿನಲ್ಲಿ ಸಹಿ ಮಾಡಿದ ಸ್ಕ್ಯಾನ್ ಪ್ರತಿಯನ್ನು (30 KB - 49 KB) ಅಪ್ಲೋಡ್ ಮಾಡಬೇಕು.
SC / ST ಅಭ್ಯರ್ಥಿಗಳು ಉಚಿತ ಪ್ರಯಾಣ ಪಾಸ್ಗಾಗಿ ಜಾತಿ ಪ್ರಮಾಣಪತ್ರವನ್ನು (PDF, 400 KB ಒಳಗೆ) ಅಪ್ಲೋಡ್ ಮಾಡಬೇಕು.
ಪರೀಕ್ಷೆಯ ಪ್ರಶ್ನೆಪತ್ರಿಕೆಯು ಇಂಗ್ಲಿಷ್, ಹಿಂದಿ ಸೇರಿದಂತೆ ಕನ್ನಡ ಹಾಗೂ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ.
ನೇಮಕಾತಿ ಅಧಿಸೂಚನೆ ಲಿಂಕ್:
ಅರ್ಜಿ ಸಲ್ಲಿಸುವ ಲಿಂಕ್:
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




