KPSCಯಿಂದ ಭರ್ಜರಿ ಉದ್ಯೋಗಾವಕಾಶ; 319 KAS ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ
KPSC Recruitment 2026: ಕರ್ನಾಟಕ ಸರ್ಕಾರವು 319 ಗ್ರೂಪ್ A ಮತ್ತು ಗ್ರೂಪ್ B ವೃಂದದ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

KPSC Recruitment 2026: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆಯಂತೆ ಕರ್ನಾಟಕ ಸರ್ಕಾರವು 72,186 ಕ್ಕೂ ಹೆಚ್ಚು ಖಾಲಿ ಹುದ್ದೆಗಳ ಬೃಹತ್ ನೇಮಕಾತಿ ನೆಡಸುತಿದೆ. ಅದರ ಅಂಗವಾಗಿ, KPSC ಒಟ್ಟು 319 ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 319 ಹುದ್ದೆಗಳಲ್ಲಿ ಗ್ರೂಪ್ A ವೃಂದದ 117 ಹುದ್ದೆಗಳು ಮತ್ತು ಗ್ರೂಪ್ B ವೃಂದದ 202 ಹುದ್ದೆಗಳು ಸೇರಿವೆ.
ಗ್ರೂಪ್ A ಹುದ್ದೆಗಳು:
ಅಸಿಸ್ಟೆಂಟ್ ಕಮಿಷನರ್ (ಡಿಪಿಎಆರ್): 39
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು: 50
ಸಹಾಯಕ ನಿರ್ದೇಶಕರು (ಖಜಾನೆ ಇಲಾಖೆ): 02
ಕಾರ್ಯನಿರ್ವಾಹಕ ಅಧಿಕಾರಿ (ಗ್ರೇಡ್-1): 15
ಸಹಾಯಕ ನಿರ್ದೇಶಕರು (ಗ್ರೇಡ್-1): 112
ಗ್ರೂಪ್ B ಹುದ್ದೆಗಳು:
ತಹಶೀಲ್ದಾರ್ (ಗ್ರೇಡ್-2): 25
ವಾಣಿಜ್ಯ ತೆರಿಗೆ ಅಧಿಕಾರಿ: 74
ಸಹಾಯಕ ನೋಂದಣಾಧಿಕಾರಿ: 06
ಕಾರ್ಮಿಕ ಅಧಿಕಾರಿ: 21
ಸಹಾಯಕ ನಿರ್ದೇಶಕರು (ಆಹಾರ ಮತ್ತು ನಾಗರಿಕ ಸರಬರಾಜು): 12
ಉದ್ಯೋಗಾಧಿಕಾರಿ: 05
ಸಹಕಾರ ಅಭಿವೃದ್ಧಿ ಅಧಿಕಾರಿ: 03
ಮುನ್ಸಿಪಲ್ ಕಮಿಷನರ್ (ಗ್ರೇಡ್-1): 20
ಸಹಾಯಕ ಸಾರಿಗೆ ಆಯುಕ್ತರು: 12
ಸಹಾಯಕ ನಿರ್ದೇಶಕರು (ಆಡಿಟ್): 04
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ: 05
ಅರ್ಹತೆ:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು. (ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು (ಆದರೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪದವಿ ಪೂರ್ಣಗೊಳಿಸಿದ ದಾಖಲೆ ಒದಗಿಸಬೇಕು).
ವಯೋಮಿತಿ: ಕನಿಷ್ಠ 21 ವರ್ಷ ಗರಿಷ್ಠ 40 ವರ್ಷ ತುಂಬಿರಬೇಕು (ಸರ್ಕಾರದ ಆದೇಶದಂತೆ ಪ್ರವರ್ಗ 2A / 2B / 3A / 3B: 3 ವರ್ಷ ಹಾಗೂ SC / ST / Cat-1ಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ).
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ (GM): ₹600/-
ಪ್ರವರ್ಗ 2(A), 2(B), 3(A), 3(B): ₹300/-
ಮಾಜಿ ಸೈನಿಕರು (Ex-Servicemen): ₹50/-
SC / ST / Cat-1 / ಅಂಗವಿಕಲ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ ನೀಡಲಾಗಿದೆ (ಉಚಿತ)
ಅರ್ಜಿ ಸಲ್ಲಿಸುವ ವಿಧಾನ:
KPSC ಅಧಿಕೃತ ವೆಬ್‌ಸೈಟ್ kpsconline.karnataka.gov.in ಗೆ ಭೇಟಿ ನೀಡಿ.
OTR (One Time Registration) ಪ್ರಕ್ರಿಯೆ ಪೂರ್ಣಗೊಳಿಸಿ.
ಪ್ರೊಫೈಲ್‌ನಲ್ಲಿ ಫೋಟೋ (ಗರಿಷ್ಠ 200KB) ಮತ್ತು ಸಹಿ (ಗರಿಷ್ಠ 70KB) ಅಪ್‌ಲೋಡ್ ಮಾಡಿ.
"Apply to Post" ವಿಭಾಗಕ್ಕೆ ಹೋಗಿ ಅರ್ಜಿ ಭರ್ತಿ ಮಾಡಿ.
ಶುಲ್ಕವನ್ನು Net Banking / Debit Card / Credit Card / UPI ಮೂಲಕ ಪಾವತಿಸಿ ಸ್ವೀಕೃತಿ ಪ್ರತಿಯನ್ನು (Receipt) ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯನ್ನು 3 ಹಂತಗಳಲ್ಲಿ ನಡೆಸಲಾಗುತ್ತದೆ:
ಪ್ರಾಥಮಿಕ ಪರೀಕ್ಷೆ (Preliminary Examination): ವಸ್ತುನಿಷ್ಠ ಮಾದರಿಯ ಪರೀಕ್ಷೆ.
ಮುಖ್ಯ ಪರೀಕ್ಷೆ (Main Examination): ವಿವರಣಾತ್ಮಕ ಮಾದರಿಯ ಲಿಖಿತ ಪರೀಕ್ಷೆ.
ವ್ಯಕ್ತಿತ್ವ ಪರೀಕ್ಷೆ (Personality Test / Interview): ಸಂದರ್ಶನ ಹಂತ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 1 ಆಗಸ್ಟ್ 2026 (ಈಗಾಗಲೇ ಪ್ರಾರಂಭವಾಗಿದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026 (ಕೊನೆಯ ದಿನದ ತನಕ ಕಾಯಬೇಡಿ)
ಪ್ರೆಲಿಮ್ಸ್ ಪರೀಕ್ಷೆ ದಿನಾಂಕ: 15 ನವೆಂಬರ್ 2026 (ತಾತ್ಕಾಲಿಕ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




