ವೃತ್ತಿ & ಉದ್ಯೋಗ ಅವಕಾಶಗಳು

ಇಂಜಿನಿಯರಿಂಗ್ ಪದವೀಧರರಿಗೆ ಜ್ಯಾಕ್‌ಪಾಟ್: ಪರೀಕ್ಷೆಯಿಲ್ಲದೆ ಭಾರತೀಯ ಸೇನೆಯಲ್ಲಿ ಆಫೀಸರ್ ಆಗುವ ಸುವರ್ಣಾವಕಾಶ! 350 ಲೆಫ್ಟಿನೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

B.E ಅಥವಾ B.Tech ಮುಗಿಸಿದ್ದೀರಾ? ಯೂನಿಫಾರ್ಮ್ ಹಾಕಿ ದೇಶ ಸೇವೆ ಮಾಡಬೇಕು ಅಂತ ಕನಸಿದೆಯಾ? ಹಾಗಾದ್ರೆ, ಭಾರತೀಯ ಸೇನೆ SSC-Techಗಾಗಿ ಅರ್ಜಿ ಆಹ್ವಾನಿಸಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಇಂಟರ್ವ್ಯೂ ಮೂಲಕ ಸೇನೆಗೆ ಸೇರುವ ನೇರ ಆಯ್ಕೆ; ಆ ಕುರಿತ ವರದಿ ಇಲ್ಲಿದೆ:

ಇಂಜಿನಿಯರಿಂಗ್ ಪದವೀಧರರಿಗೆ ಜ್ಯಾಕ್‌ಪಾಟ್: ಪರೀಕ್ಷೆಯಿಲ್ಲದೆ ಭಾರತೀಯ ಸೇನೆಯಲ್ಲಿ ಆಫೀಸರ್ ಆಗುವ ಸುವರ್ಣಾವಕಾಶ! 350 ಲೆಫ್ಟಿನೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ಸೇನೆ — Online Desk
Published On :

B.E ಅಥವಾ B.Tech ಮುಗಿಸಿದ್ದೀರಾ? ಯೂನಿಫಾರ್ಮ್ ಹಾಕಿ ದೇಶ ಸೇವೆ ಮಾಡಬೇಕು ಅಂತ ಕನಸಿದೆಯಾ? ಹಾಗಾದ್ರೆ, ಭಾರತೀಯ ಸೇನೆ SSC-Techಗಾಗಿ ಅರ್ಜಿ ಆಹ್ವಾನಿಸಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಇಂಟರ್ವ್ಯೂ ಮೂಲಕ ಸೇನೆಗೆ ಸೇರುವ ನೇರ ಆಯ್ಕೆ; ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

ಒಟ್ಟು ಹುದ್ದೆಗಳು: 381 ಹುದ್ದೆಗಳು

  • ಸಿವಿಲ್ / ಬಿಲ್ಡಿಂಗ್ ಕನ್‌ಸ್ಟ್ರಕ್ಷನ್: 75 ಹುದ್ದೆಗಳು

  • ಮೆಕ್ಯಾನಿಕಲ್ / ಪ್ರೊಡಕ್ಷನ್ / ಆಟೋಮೊಬೈಲ್: 101 ಹುದ್ದೆಗಳು

  • ಎಲೆಕ್ಟ್ರಾನಿಕ್ಸ್ / ಟೆಲಿಕಾಂ / ಕಮ್ಯುನಿಕೇಷನ್: 64 ಹುದ್ದೆಗಳು

  • ಕಂಪ್ಯೂಟರ್ ಸೈನ್ಸ್ / ಐಟಿ / AI ಮತ್ತು ಡಾಟಾ ಸೈನ್ಸ್: 60 ಹುದ್ದೆಗಳು

  • ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್: 33 ಹುದ್ದೆಗಳು

  • ಇತರೆ ತಾಂತ್ರಿಕ ವಿಭಾಗಗಳು (Plastics, Remote Sensing, Metallurgy, etc.): 17 ಹುದ್ದೆಗಳು

ಅರ್ಹತೆ:

  1. ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು. (ಎಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ)

  2. ವೈವಾಹಿಕ ಸ್ಥಿತಿ:

    ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

  3. ವಯೋಮಿತಿ:

    1 ಏಪ್ರಿಲ್ 2027 ಕ್ಕೆ ಅನ್ವಯಿಸುವಂತೆ 20 ರಿಂದ 27 ವರ್ಷಗಳು (ಅಂದರೆ, 1 ಏಪ್ರಿಲ್ 2000 ರಿಂದ 31 ಮಾರ್ಚ್ 2007 ರ ನಡುವೆ ಜನಿಸಿರಬೇಕು).

  4. ಕನಿಷ್ಠ ಶಾರೀರಿಕ ಕ್ಷಮತೆ:

    ಅಭ್ಯರ್ಥಿಗಳು ತರಬೇತಿ ಕೇಂದ್ರಕ್ಕೆ ಸೇರುವ ಮೊದಲು ಕೆಳಗಿನ ಶಾರೀರಿಕ ಸಾಮರ್ಥ್ಯಗಳನ್ನು ಹೊಂದಿರಬೇಕು:

    • 2.4 ಕಿ.ಮೀ ಓಟ: 10 ನಿಮಿಷ 30 ಸೆಕೆಂಡುಗಳಲ್ಲಿ

    • ಪುಷ್-ಅಪ್ಸ್ (Push-ups): 40 ಬಾರಿಗೆ

    • ಪುಲ್-ಅಪ್ಸ್ (Pull-ups): 06

    • ಸಿಟ್-ಅಪ್ಸ್ (Sit-ups): 30

    • ಜೊತೆಗೆ ಸ್ವಿಮ್ಮಿಂಗ್

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಶಾರ್ಟ್‌ಲಿಸ್ಟಿಂಗ್: ಅಭ್ಯರ್ಥಿಗಳು ಇಂಜಿನಿಯರಿಂಗ್‌ ಪದವಿಯಲ್ಲಿ ಗಳಿಸಿದ ಅಂಕಗಳ (Cut-off %) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

  • SSB ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಪ್ರಯಾಗ್‌ರಾಜ್, ಭೋಪಾಲ್, ಬೆಂಗಳೂರು ಅಥವಾ ಜಲಂಧರ್ ಕೇಂದ್ರಗಳಲ್ಲಿ 5 ದಿನಗಳ SSB ಸಂದರ್ಶನ ನಡೆಯುತ್ತದೆ.

  • ವೈದ್ಯಕೀಯ ತಪಾಸಣೆ ಮತ್ತು ಮೆರಿಟ್ ಪಟ್ಟಿ: SSB ಯಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ತಪಾಸಣೆ ನಡೆಸಿ, ಅಂತಿಮ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಸಂಬಳ:

  • ತರಬೇತಿಯ ಸಮಯದಲ್ಲಿ ಸ್ಟೈಫಂಡ್: ₹56,100 (ಪ್ರತಿ ತಿಂಗಳು)

  • ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡ ನಂತರ: Level 10 ಅಡಿಯಲ್ಲಿ ₹56,100 ರಿಂದ ₹1,77,500 ಮೂಲ ವೇತನ + ₹15,500 ಪ್ರತಿ ತಿಂಗಳು ಮಿಲಿಟರಿ ಸರ್ವಿಸ್ ಪೇ ಹಾಗೂ ಇತರೆ ಭತ್ಯೆಗಳು ಸಿಗಲಿವೆ.

ಪ್ರಮುಖ ದಿನಾಂಕ:

  1. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ:

    • ಪುರುಷರಿಗೆ: 9 ಜುಲೈ 2026 (ಮಧ್ಯಾಹ್ನ 3:00 ರಿಂದ)

    • ಮಹಿಳೆಯರಿಗೆ: 8 ಜುಲೈ 2026 (ಮಧ್ಯಾಹ್ನ 3:00 ರಿಂದ)

  2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

    • ಮಹಿಳೆಯರಿಗೆ: 6 ಆಗಸ್ಟ್ 2026 (ಮಧ್ಯಾಹ್ನ 3:00 ಗಂಟೆಯವರೆಗೆ)

    • ಪುರುಷರಿಗೆ: 7 ಆಗಸ್ಟ್ 2026 (ಮಧ್ಯಾಹ್ನ 3:00 ಗಂಟೆಯವರೆಗೆ)

  3. ಎಸ್‌ಎಸ್‌ಬಿ (SSB) ಸಂದರ್ಶನ ಸಮಯ: ಅಕ್ಟೋಬರ್ ರಿಂದ ಡಿಸೆಂಬರ್ 2026

  4. ತರಬೇತಿ ಪ್ರಾರಂಭ: ಏಪ್ರಿಲ್ 2027 (ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ - OTA, ಚೆನ್ನೈ)

ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ ಭೇಟಿ ನೀಡಿ, 'Officers Entry Apply/Login' ವಿಭಾಗದಲ್ಲಿ ಉಚಿತವಾಗಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.