ವೃತ್ತಿ & ಉದ್ಯೋಗ ಅವಕಾಶಗಳು

ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 3,548 ಹುದ್ದೆಗಳಿಗೆ RRB ಅರ್ಜಿ ಆಹ್ವಾನ; ಪದವಿ ಇದ್ದರೆ ಸಾಕು

ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ದೇಶದ ಪದವೀಧರ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿಯು ಬಂಪರ್ ಕೊಡುಗೆಯನ್ನು ನೀಡಿದೆ. ನಾನ್-ಟೆಕ್ನಿಕಲ್ ಕ್ಯಾಟಗರಿ ಅಡಿಯಲ್ಲಿ ಒಟ್ಟು 3,548 ಹುದ್ದೆಗಳಿಗೆ ಹೆಚ್ಚಿಸಿ, ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ನೇಮಕಾತಿ ಕುರಿತ ವರದಿ ಇಲ್ಲಿದೆ:

ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 3,548 ಹುದ್ದೆಗಳಿಗೆ RRB ಅರ್ಜಿ ಆಹ್ವಾನ; ಪದವಿ ಇದ್ದರೆ ಸಾಕು
ರೈಲು ಸಾಂದರ್ಭಿಕ ಚಿತ್ರ — Online Desk
Published On :

Railway Recruitment 2026: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ದೇಶದ ಪದವೀಧರ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿಯು ಬಂಪರ್ ಕೊಡುಗೆಯನ್ನು ನೀಡಿದೆ. ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ ಅಡಿಯಲ್ಲಿ ಒಟ್ಟು 3,548 ಹುದ್ದೆಗಳಿಗೆ ಹೆಚ್ಚಿಸಿ, ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಪಡೆಯಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣಾವಕಾಶವಾಗಿದ್ದು, ನೇಮಕಾತಿ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಒಟ್ಟು 3,548 ಹುದ್ದೆಗಳು

    • ಚೀಫ್ ಕಮರ್ಷಿಯಲ್-ಕಮ್-ಟಿಕೆಟ್ ಸೂಪರ್‌ವೈಸರ್: 127 ಹುದ್ದೆಗಳು

    • ಗೂಡ್ಸ್ ಟ್ರೈನ್ ಮ್ಯಾನೇಜರ್: 2,750 ಹುದ್ದೆಗಳು

    • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: ಒಟ್ಟು 300 ಹುದ್ದೆಗಳು

    • ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: ಒಟ್ಟು 371 ಹುದ್ದೆಗಳು

ಬೆಂಗಳೂರು ಆರ್‌ಆರ್‌ಬಿ ವಲಯಕ್ಕೆ ಒಟ್ಟು 346 ಹುದ್ದೆಗಳು ಲಭ್ಯವಿವೆ (ಗೂಡ್ಸ್ ಟ್ರೈನ್ ಮ್ಯಾನೇಜರ್ 301, ಸೀನಿಯರ್ ಕ್ಲರ್ಕ್ 32, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ 10, ಚೀಫ್ ಕಮರ್ಷಿಯಲ್ ಸೂಪರ್‌ವೈಸರ್ 3)

ಅರ್ಹತೆ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

  • ವಯೋಮಿತಿ (01 ಜನವರಿ 2027 ಕ್ಕೆ ಅನ್ವಯಿಸುವಂತೆ): ಅಭ್ಯರ್ಥಿಗಳ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು. ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 8, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6, 2026 (ರಾತ್ರಿ 11:59 ರವರೆಗೆ)

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಯಾವುದೇ ಆಫ್‌ಲೈನ್/ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ರೈಲ್ವೆ ನೇಮಕಾತಿಯ ಅಧಿಕೃತ ವೆಬ್‌ಸೈಟ್ ಆದ RRB Apply Portal ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು.

  • ಅರ್ಜಿ ಶುಲ್ಕ

    • ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹500 (ಮೊದಲ ಹಂತದ CBT ಪರೀಕ್ಷೆಗೆ ಹಾಜರಾದ ನಂತರ ₹400 ರೀಫಂಡ್ ಆಗುತ್ತದೆ).

    • SC / ST / ಮಹಿಳೆಯರು / ಅಂಗವಿಕಲ ಅಭ್ಯರ್ಥಿಗಳಿಗೆ: ₹250 (ಮೊದಲ ಹಂತದ ಪರೀಕ್ಷೆಯ ನಂತರ ಪೂರ್ಣ ಹಣ ರೀಫಂಡ್ ಆಗುತ್ತದೆ).

ಆಯ್ಕೆ ವಿಧಾನ

ಈ ಬಾರಿಯ ನೇಮಕಾತಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಟೈಪಿಂಗ್ ಟೆಸ್ಟ್ ಅಥವಾ ಆಪ್ಟಿಟ್ಯೂಡ್ ಟೆಸ್ಟ್ ಹಂತವನ್ನು ತೆಗೆದುಹಾಕಲಾಗಿದೆ. ಆಯ್ಕೆಯು ಕೇವಲ ಇವುಗಳ ಮೇಲೆ ಆಧಾರಿತವಾಗಿರುತ್ತದೆ:

ಪರೀಕ್ಷಾ ಮಾದರಿ (ತಲಾ 1/3 ನೆಗೆಟಿವ್ ಅಂಕಗಳು, 90 ನಿಮಿಷಗಳ ಕಾಲಾವಕಾಶ)

  • ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 1 (ಒಟ್ಟು 100 ಪ್ರಶ್ನೆಗಳು, 100 ಅಂಕಗಳು): ಸಾಮಾನ್ಯ ಅರಿವು 40 ಪ್ರಶ್ನೆಗಳು, ಗಣಿತ 30 ಪ್ರಶ್ನೆಗಳು, ರೀಸನಿಂಗ್ 30 ಪ್ರಶ್ನೆಗಳು)

  • ದ್ವಿತೀಯ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 2 (ಒಟ್ಟು 120 ಪ್ರಶ್ನೆಗಳು, 120 ಅಂಕಗಳು): ಸಾಮಾನ್ಯ ಅರಿವು 50 ಪ್ರಶ್ನೆಗಳು, ಗಣಿತ 35 ಪ್ರಶ್ನೆಗಳು, ರೀಸನಿಂಗ್ 35 ಪ್ರಶ್ನೆಗಳು)

  • ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.