Gold ಮೇಲೆ Investment ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಬೆಸ್ಟ್ ಆಪ್ಷನ್‌ಗಳು!
ಹಬ್ಬದ ಸೀಸನ್ ಬಂದರೆ ಸಾಕು ಚಿನ್ನ ಖರೀದಿಗೆ ಮುಗಿಬೀಳುತ್ತೇವೆ! ಆದರೆ, ಚಿನ್ನ ಕೇವಲ ಆಭರಣವಲ್ಲ, ಅದೊಂದು ಉತ್ತಮ ಹೂಡಿಕೆ ಕೂಡ. ಹಾಗಾದರೆ, ಚಿನ್ನವನ್ನು ಹೇಗೆಲ್ಲ ಖರೀದಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.! ಹಾಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವ 5 ಸುಲಭ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:

Gold Investment: ಚಿನ್ನದ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಎಲ್ಲರಿಗೂ ಸಾವಿರಾರು ರೂಪಾಯಿ ಕೊಟ್ಟು ಗ್ರಾಂ ಗಟ್ಟಲೇ ಖರೀದಿಸಲು ಸಾಧ್ಯವಿಲ್ಲ. ಆದರೆ, ನಿಮಗೆ ಗೊತ್ತಾ? ಕೇವಲ ನೂರು ರೂಪಾಯಿಗೆ ನೀವು ಚಿನ್ನ ಖರೀದಿಸಬಹುದು ಎಂದು? ಹೌದು, ಕಾಲ ಬದಲಾದಂತೆ ಬಂಗಾರ ಖರೀದಿ ಮಾಡುವ ಶೈಲಿಯೂ ಬದಲಾಗಿದೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಆಸ್ತಿಯಾಗಿದ್ದ ಹಳದಿ ಲೋಹ ಇಂದು ಎಲ್ಲ ಸಾಮಾನ್ಯ ಜನರಿಗೂ ಸುಲಭವಾಗಿ ಕೈಗೆಟುಕುವ ಹೂಡಿಕೆ ಆಸ್ತಿಯಾಗಿ ಮಾರ್ಪಟ್ಟಿದೆ. ಅದರಂತೆ, ನೀವು ಅಂದುಕೊಂಡಂತೆ ಬರೀ ಫಿಸಿಕಲ್ ಚಿನ್ನ ಹಾಗೂ ಡಿಜಿಟಲ್ ಚಿನ್ನ ಮಾತ್ರವಲ್ಲ! ಈ ದೇಶದಲ್ಲಿ ಒಟ್ಟು 5 ರೀತಿಯಲ್ಲಿ ನೀವು ಚಿನ್ನವನ್ನು ಖರೀದಿಸಬಹುದು. ಹೌದು, ಒಂದಲ್ಲಾ ಎರಡಲ್ಲಾ, ಒಟ್ಟು 5 ವಿಧಾನದಲ್ಲಿ ಚಿನ್ನ ಖರೀದಿಸಬಹುದಾದ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:
ಫಿಸಿಕಲ್ ಚಿನ್ನ:
ಸಾಮಾನ್ಯವಾಗಿ, ಇದು ನಾಣ್ಯಗಳು, ಬಿಸ್ಕತ್‌ಗಳು ಅಥವಾ ಆಭರಣಗಳ ರೂಪದಲ್ಲಿ ಚಿನ್ನವನ್ನು ಖರೀದಿಸುವ ಸಾಂಪ್ರದಾಯಿಕ ವಿಧಾನವಾಗಿದೆ.
ಆಭರಣಗಳು: ಇದನ್ನು ಧರಿಸಲು ಬಳಸಬಹುದಾದರೂ, ಹೂಡಿಕೆಯ ದೃಷ್ಟಿಯಿಂದ ಇದು ಅಷ್ಟೊಂದು ಲಾಭದಾಯಕವಲ್ಲ. ಏಕೆಂದರೆ ಮರುಮಾರಾಟ ಮಾಡುವಾಗ ತಯಾರಿಕಾ ವೆಚ್ಚ ಮತ್ತು ವೇಸ್ಟೇಜ್ (ಸೇದರ) ಹಣ ನಷ್ಟವಾಗುತ್ತದೆ.
ನಾಣ್ಯ ಮತ್ತು ಬಿಸ್ಕತ್‌ಗಳು: ಹೂಡಿಕೆಗಾಗಿ ಭೌತಿಕ ಚಿನ್ನವನ್ನೇ ಖರೀದಿಸುವುದಾದರೆ ಬ್ಯಾಂಕ್‌ಗಳು ಅಥವಾ ನೋಂದಾಯಿತ ಜ್ವೆಲ್ಲರ್ಸ್‌ಗಳಿಂದ 24 ಕ್ಯಾರೆಟ್ ಶುದ್ಧತೆಯ ನಾಣ್ಯಗಳನ್ನು ಖರೀದಿಸುವುದು ಉತ್ತಮ.
ಕೇವಲ 100 ರೂಪಾಯಿಗೆ ಡಿಜಿಟಲ್ ಗೋಲ್ಡ್
ತಕ್ಷಣವೇ ಮತ್ತು ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಹೂಡಿಕೆ ಆರಂಭಿಸಲು ಡಿಜಿಟಲ್ ಚಿನ್ನ ಅತ್ಯಂತ ಜನಪ್ರಿಯ ಆಪ್ಷನ್ ಆಗಿದೆ. ವಿವಿಧ ಮೊಬೈಲ್ ಪೇಮೆಂಟ್ ಆಪ್‌ಗಳು ಮತ್ತು ನಂಬಿಕಸ್ಥ ಜ್ಯುವೆಲ್ಲರಿ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಕೇವಲ ನೂರು ರೂಪಾಯಿಗೂ ಅಪ್ಪಟ 24 ಕ್ಯಾರೆಟ್ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಕೊಳ್ಳಬಹುದು. ಈ ಚಿನ್ನವನ್ನು ಸುರಕ್ಷಿತ ಕಂಪನಿಗಳ ಲಾಕರ್‌ನಲ್ಲಿ ಇಡಲಾಗುತ್ತದೆ ಮತ್ತು ನಿಮಗೆ ಬೇಕಾದಾಗ ಹಣವಾಗಿ ಬದಲಾಯಿಸಿಕೊಳ್ಳಬಹುದು.
ಸೊವರೇನ್ ಗೋಲ್ಡ್ ಬಾಂಡ್‌ಗಳು (SGB)
ಇದು ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಜಂಟಿಯಾಗಿ ಹೊರಡಿಸುವ ಡಿಜಿಟಲ್ ಬಾಂಡ್ ಆಗಿದೆ.
ಲಾಭಗಳು: ಇದರಲ್ಲಿ ಚಿನ್ನ ಕಳವಾಗುವ ಭಯವಿರುವುದಿಲ್ಲ. ಚಿನ್ನದ ಬೆಲೆ ಏರಿಕೆಯ ಲಾಭದ ಜೊತೆಗೆ ವರ್ಷಕ್ಕೆ 2.5% ಸ್ಥಿರ ಬಡ್ಡಿ ಸಿಗುತ್ತದೆ.
ತೆರಿಗೆ ವಿನಾಯಿತಿ: 8 ವರ್ಷಗಳ ಅವಧಿ ಮುಗಿದ ನಂತರ ಸಿಗುವ ಲಾಭಕ್ಕೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ.
ಗೋಲ್ಡ್ ETF ಮತ್ತು ಮ್ಯೂಚುವಲ್ ಫಂಡ್‌ಗಳು
ಷೇರು ಮಾರುಕಟ್ಟೆಯ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡುವ ಅತ್ಯಾಧುನಿಕ ವಿಧಾನಗಳಿವು.
ಹೇಗೆ ಕೆಲಸ ಮಾಡುತ್ತದೆ?: ಇದಕ್ಕಾಗಿ ಡಿಮ್ಯಾಟ್ ಖಾತೆ ಅಗತ್ಯವಿರುತ್ತದೆ. ನೀವು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೆ ಅನುಗುಣವಾಗಿ ಯೂನಿಟ್‌ಗಳನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.
ಕಡಿಮೆ ಹೂಡಿಕೆ: ಮ್ಯೂಚುವಲ್ ಫಂಡ್‌ಗಳ ಮೂಲಕ ಕೇವಲ ₹100 ಅಥವಾ ₹500 ದಿಂದಲೂ ಹೂಡಿಕೆಯನ್ನು ಆರಂಭಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




