ವಾಣಿಜ್ಯ

Gold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!

ಚಿನ್ನದಲ್ಲಿ ಬೇರೆ ಬೇರೆ ವಿಧ ಇರೋದಕ್ಕೆ ಮುಖ್ಯ ಕಾರಣ ಅದರಲ್ಲಿ ಬೆರೆಸುವ ಲೋಹದ ಪ್ರಮಾಣ. ಶುದ್ಧ ಚಿನ್ನ ತುಂಬಾ ಮೃದುವಾಗಿರೋದ್ರಿಂದ ಆಭರಣ ಮಾಡೋಕೆ ಸ್ವಲ್ಪ ಬೆಳ್ಳಿ, ತಾಮ್ರ, ಜಿಂಕ್ ಬೆರಸುತ್ತಾರೆ. ಇಲ್ಲಿದೆ ನೋಡಿ ಚಿನ್ನದ ಕ್ಯಾರೆಟ್ ಗಳ ಕುರಿತ ಪಕ್ಕಾ ಮಾಹಿತಿ.!

Gold Types: ಯಾವ ಕ್ಯಾರೆಟ್ ಚಿನ್ನ ಪರಿಶುದ್ಧ ಗೊತ್ತಾ? ಈ ವಿಷಯ ಗೊತ್ತಿಲ್ಲದೆ ಬಂಗಾರ ಖರೀದಿಸಲೇಬೇಡಿ!
ಚಿನ್ನ (ಸಾಂದರ್ಭಿಕ ಚಿತ್ರ) — Online Desk
Published On :

ಚಿನ್ನ (Gold) ಅಂದ್ರೆ ಯಾರ್ ತಾನೇ ಸುಮ್ಮನಿರುತ್ತಾರೆ ಹೇಳಿ? ಅದ್ರಲ್ಲೂ ಇತ್ತೀಚೆಗೆ ಬಂಗಾರದ ಬೆಲೆ (Gold Price) ಜಾಸ್ತಿ ಆಗುತ್ತಿರುವುದರಿಂದ ಗ್ರಾಹಕರು ಕೂಡ ಚಿನ್ನ ಖರೀದಿಗೆ ಮುಗಿಬೀಳುತ್ತಿದ್ದಾರೆ. ಅದ್ರಂತೆ ಇಂದಿನ ಚಿನ್ನದ ದರ 14,981 ರೂಪಾಯಿ. ಆದ್ರೆ, ಈ ಚಿನ್ನದ ಖರೀದಿ (Gold Purchase) ವೇಳೆ ಅದೆಷ್ಟೋ ಜನರು ಚಿನ್ನದ ಕ್ಯಾರೆಟ್ (Gold Karat) ಅನ್ನು ಸರಿಯಾಗಿ ತಿಳಿಯದೆ ಕೆಡಿಮೆ ಬೆಲೆ ಕಂಡಂತೆ ಖರೀದಿ ಮಾಡುತ್ತಾರೆ. ಅದ್ರಲ್ಲೂ ಯಾವ ಕ್ಯಾರೆಟ್ ಚಿನ್ನ ತಗೊಂಡ್ರೆ ಎಷ್ಟು ಪ್ರಮಾಣದ ನೈಜ ಚಿನ್ನ ಇರುತ್ತದೆ ಅನ್ನೋದೇ ಗೊತಿರಲ್ಲ! ಹಾಗಾಗಿ, ಇಲ್ಲಿದೆ ನೋಡಿ ಚಿನ್ನದ ಕ್ಯಾರೆಟ್ ಗಳ ಕುರಿತ ಪಕ್ಕಾ ಮಾಹಿತಿ.

24 ಕ್ಯಾರೆಟ್ ಚಿನ್ನ ಅಂದ್ರೆ ಏನು?
24 ಕ್ಯಾರೆಟ್ ಚಿನ್ನ ಅಂದ್ರೆ ಪರಿಶುದ್ದವಾದ 99.99% ಪ್ರಮಾಣದ ಚಿನ್ನ! ಈ ಚಿನ್ನದಲ್ಲಿ ಯಾವುದೇ ಇತರ ಲೋಹಗಳು ಬೇರೆಯದ ಕಾರಣ, ಮಾರುಕಟ್ಟೆಯಲ್ಲಿ ಇದರ ಬೆಲೆಯು ಎಲ್ಲಾ ಕ್ಯಾರೆಟ್ ಚಿನ್ನಗಳಿಗೆ ಹೋಲಿಕೆ ಮಾಡಿದ್ರೆ ಅತಿ ಹೆಚ್ಚು. ಇನ್ನು ಈ ಚಿನ್ನದಲ್ಲಿ ಯಾವುದೇ ರೀತಿಯ ಆಭರಣ ಮಾಡಲು ಸಾಧ್ಯವಿಲ್ಲ. ಅದ್ರಂತೆ ಇದ್ರಲ್ಲಿ ಕೇವಲ ಚಿನ್ನದ ನಾಣ್ಯ, ಚಿನ್ನದ ಬಿಸ್ಕೆಟ್ ನಂತಹ ಹೂಡಿಕೆಗೆ ಸಂಬಂಧಿಸಿದ ವಸ್ತುಗಳನ್ನ ಮಾಡಬಹದು.

22 ಕ್ಯಾರೆಟ್ ಚಿನ್ನ ಅಂದ್ರೆ ಏನು?
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬಂಗಾರ ಅಂದ್ರೆ 22 ಕ್ಯಾರೆಟ್ ಚಿನ್ನ! ಯಾಕಂದ್ರೆ ಇದರಲ್ಲಿ 91.6% ಪರಿಶುದ್ದ ಚಿನ್ನ ಹಾಗೂ ಇನ್ನುಳಿದ 8.4%, ಇತರೆ ಲೋಹಗಳಾದ ತಾಮ್ರ, ಬೆಳ್ಳಿಯಂತಹವುಗಳಿಂದ ತಯಾರಿಸಲಾಗುತ್ತದೆ. ಹಾಗಾಗಿಯೇ ಇದನ್ನ 916 ಚಿನ್ನ ಎನ್ನುತಾರೆ. ಏತನ್ಮದ್ಯೆ ಈ ಚಿನ್ನದಲೇ ಸರ, ಉಂಗುರ, ಬಳೆಯಂತಹ ಆಭರಣ ತಯಾರಿಕೆ ಹೆಚ್ಚು.

18 ಕ್ಯಾರೆಟ್ ಚಿನ್ನ ಅಂದ್ರೆ ಏನು?
18 ಕ್ಯಾರೆಟ್ ಚಿನ್ನದಲ್ಲಿ 75% ಪರಿಶುದ್ದ ಚಿನ್ನ ಹಾಗೂ ಇನ್ನುಳಿದ 25% ತಾಮ್ರ ಮತ್ತು ಬೆಳ್ಳಿಯಂತಹವುಗಳಿಂದ ಮಾಡುತಾರೆ. ಅದ್ರಂತೆ, ಈ ಚಿನ್ನವು ಹೆಚ್ಚು ಗಟ್ಟಿಯಾಗಿರುವುದರಿಂದ ವಜ್ರ ಮತ್ತು ಕಲ್ಲಿನ ಆಭರಣಗಳನ್ನು ಮಾಡಲು ಬಳಸಲಾಗುತ್ತದೆ. ಅದ್ರಲ್ಲೂ, ಇದರ ಬಣ್ಣವು ಸ್ವಲ್ಪ ಮಸುಕಾಗಿರುತ್ತದೆ ಅಂದ್ರೆ ಹೊಳಪು ಸ್ವಲ್ಪ ಕಡಿಮೆ ಹಾಗಾಗಿ ಇದರ ಬೆಲೆಯೂ 22 ಕ್ಯಾರೆಟ್ ಚಿನ್ನಕಿಂತಲೂ ಕಡಿಮೆ ಇರುತ್ತದೆ. ಹಾಗಾಗಿಯೇ ಇದನ್ನ750 ಚಿನ್ನ ಎನ್ನುತಾರೆ.

14 ಕ್ಯಾರೆಟ್ ಚಿನ್ನ
14 ಕ್ಯಾರೆಟ್ ಚಿನ್ನವನ್ನ ಹೆಚ್ಚಾಗಿ ಅಮೆರಿಕ ಹಾಗು ಯುರೋಪ್ ನಂತಹ ದೇಶಗಳಲ್ಲಿ ಜನರು ದೈನಂದಿನ ಬಳಕೆಗೆ ಹೆಚ್ಚು ಉಪಯೋಗಿಸುತಾರೆ. ಇನ್ನು ಈ ಬಂಗಾರದಲ್ಲಿ 58.5% ರಷ್ಟು ಮಾತ್ರವೇ ಪರಿಶುದ್ದ ಚಿನ್ನ ಇರುತ್ತದೆ. ಇನ್ನುಳಿದವು ತಾಮ್ರ ಮತ್ತು ಬೆಳ್ಳಿಯಂತಹವುಗಳಿಂದ ಕೂಡಿರುತ್ತದೆ. ಹಾಗಾಗಿ ಈ ಚಿನ್ನವು ತುಂಬಾ ಗಟ್ಟಿಯಾಗಿರುತದೆ ಜೊತೆಗೆ ಜಾಸ್ತಿ ಸವಿಯುವುದಿಲ್ಲ.

9 ಕ್ಯಾರೆಟ್ ಚಿನ್ನ
9 ಕ್ಯಾರೆಟ್ ಚಿನ್ನವು ಅತಿ ಕಡಿಮೆ ಪ್ರಮಾಣದ ಪರಿಶುದ್ದ ಚಿನ್ನ ಹೊಂದಿದೆ. ಅದ್ರಂತೆ ಇದು 37.5% ಪರಿಶುದ್ದ ಬಂಗಾರ ಹಾಗೂ ಇನ್ನುಳಿದ 62.5% ಲೋಹವು ತಾಮ್ರ, ಬೆಳ್ಳಿ, ಜಿಂಕ್ ಸೇರಿಸಿ ಮಾಡಲಾಗಿರುತದೆ. ಅದ್ರಲ್ಲೂ ಇದು ಹೆಚ್ಚು ಗಟ್ಟಿಯಾಗಿರುವುದರಿಂದ ಇದರ ಬಳಿಕೆಯು ಕೂಡ ಹೆಚ್ಚು. ಇದರೊಂದಿಗೆ ಈ ಚಿನ್ನವನ್ನ ಹೆಚ್ಚಾಗಿ ದೈನಂದಿನ ವಸ್ತುಗಳಲ್ಲಿ ಬಳಕೆ ಮಾಡುತಾರೆ. ಉದಾ: ವಾಚ್, ಸರ, ಉಂಗುರ ಇತ್ಯಾದಿ. ಹಾಗಾಗಿ ಯಾವಾಗಲು BIS ಮಾರ್ಕ್ ಇರುವ ಚಿನ್ನವನ್ನ ನೋಡಿ ಪರಿಶೀಲಿಸಿ ಖರೀದಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.