ಜುಲೈ 31ರ ನಂತರವೂ ITR ಫೈಲ್ ಮಾಡುವುದು ಹೇಗೆ? IT ನೋಟಿಸ್ ಬಂದ್ರೆ ಹೀಗೆ ಮಾಡಿ!
ITR ಡೆಡ್ಲೈನ್ ಮಿಸ್ ಆಗಿದೆಯಾ? ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಾಗ ಏನು ಮಾಡಬೇಕು? ಇಲ್ಲಿದೆ ಆ ಕುರಿತ ಸಂಪೂರ್ಣ ಮಾಹಿತಿ:

ITR Deadline Missed: ಜುಲೈ 31ರ ಗಡುವು ತಪ್ಪಿಹೋಯ್ತಾ ಇನ್ನೂ ITR ಫೈಲ್ ಮಾಡಿಲ್ಲವಾ? ಈಗ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದ್ಯಾ? ಆದ್ರೆ, ನಿಮಗೆ ಗೊತ್ತಾ ಡೆಡ್ಲೈನ್ ಮುಗಿದ ಮೇಲೂ ITR ಫೈಲ್ ಮಾಡಲು ಟೈಮ್ ಇದೆ ಅಂತಾ? ಹಾಗಾದ್ರೆ, ಅದೇಗೆ ITR ಫೈಲ್ ಮಾಡ ಬೇಕು? ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಗೆ ಉತ್ತರ ಕೊಡುವುದು ಹೇಗೆ? ಎಂಬುದಕ್ಕೆ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ:
ಆದಾಯ ತೆರಿಗೆ ರಿಟರ್ನ್ ಅಂದ್ರೆ ITR ಫೈಲ್ ಮಾಡಲು ನಿಗದಿಪಡಿಸಿದ್ದ ಕೊನೆಯ ದಿನಾಂಕ ಅಂದ್ರೆ ಜುಲೈ 31 ಮುಗಿದುಹೋಗಿದೆ. ಒಂದು ವೇಳೆ ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವುದು ತಡವಾಗಿದ್ದರೆ ಅಥವಾ ಫೈಲ್ ಮಾಡದೇ ಇದ್ದರೆ ಜುಲೈ 31 ರ ಬಳಿಕವೂ ಫೈಲ್ ಮಾಡಬಹುದು ಇದನ್ನೇ ಬಿಲೇಟೆಡ್ ITR ಎನ್ನುತಾರೆ! ಆ ಕುರಿತ ಮಾಹಿತಿ ಇಲ್ಲಿದೆ:
ಬಿಲೇಟೆಡ್ ITR ಎಂದರೇನು?
ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕ ಜುಲೈ 31 ಆಗಿತ್ತು. ಈ ದಿನದ ಒಳಗೆ ಫೈಲ್ ಮಾಡದಿದ್ದರೆ ನೀವು ಬಿಲೇಟೆಡ್ ITR ಸಲ್ಲಿಸಬಹುದು. ಹಣಕಾಸು ವರ್ಷ 2024 25 ಕ್ಕೆ ಸಂಬಂಧಿಸಿದ ಬಿಲೇಟೆಡ್ ರಿಟರ್ನ್ ಸಲ್ಲಿಸಲು ಮಾರ್ಚ್ 31 2026 ರವರೆಗೆ ಸಮಯವಿದೆ. ಆದರೆ ಇದಕ್ಕೆ ಲೇಟ್ ಫೀಸ್ ಮತ್ತು ಬಡ್ಡಿ ಕಟ್ಟುವುದು ಕಡ್ಡಾಯ.
ಲೇಟ್ ಫೀಸ್ ಎಷ್ಟು?
ನಿಮ್ಮ ಒಟ್ಟು ಆದಾಯ 5 ಲಕ್ಷಕ್ಕಿಂತ ಕಡಿಮೆ ಇದ್ದರೆ 1000 ರೂಪಾಯಿ ಲೇಟ್ ಫೀಸ್ ಇರುತ್ತದೆ. 5 ಲಕ್ಷಕ್ಕಿಂತ ಹೆಚ್ಚು ಇದ್ದರೆ 5 ಸಾವಿರ ರೂಪಾಯಿ ದಂಡ ಕಟ್ಟಬೇಕು. ಜೊತೆಗೆ ತೆರಿಗೆ ಪಾವತಿಯಲ್ಲಿ ತಡವಾದರೆ ಸೆಕ್ಷನ್ 234A ಅಡಿಯಲ್ಲಿ ಪ್ರತಿ ತಿಂಗಳಿಗೆ 1% ಬಡ್ಡಿ ಕೂಡ ಅನ್ವಯವಾಗುತ್ತದೆ. ರಿಫಂಡ್ ಇದ್ದರೂ ಬಿಲೇಟೆಡ್ ರಿಟರ್ನ್ ಸಂದರ್ಭದಲ್ಲಿ ಅದಕ್ಕೆ ಬಡ್ಡಿ ಸಿಗುವುದಿಲ್ಲ.
ಅಕಸ್ಮಾತ್, IT ನೋಟಿಸ್ ಬಂದರೆ ಏನು ಮಾಡಬೇಕು?
ನೋಟಿಸ್ ಬಂದ 15 ರಿಂದ 30 ದಿನದ ಒಳಗೆ ಆನ್‌ಲೈನ್‌ನಲ್ಲಿ ಉತ್ತರಿಸಬೇಕು. ಮೊದಲು ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ e-ಪ್ರೊಸೀಡಿಂಗ್ಸ್ ವಿಭಾಗದಲ್ಲಿ ನೋಟಿಸ್ ಡೌನ್‌ಲೋಡ್ ಮಾಡಿ. ಅದು 139(9) ದೋಷಪೂರಿತ ರಿಟರ್ನ್ ಆಗಿದೆಯೇ ಅಥವಾ 142(1) ರಿಟರ್ನ್ ಸಲ್ಲಿಸಿಲ್ಲ ಎಂಬ ನೋಟಿಸ್ ಆಗಿದೆಯೇ ಎಂದು ನೋಡಿ. ನಂತರ ರೆಸ್ಪಾಂಡ್ ಟು ನೋಟಿಸ್ ಆಯ್ಕೆಯಲ್ಲಿ ಫಾರ್ಮ್ 16 ಫಾರ್ಮ್ 26ಎಸ್ ಎಐಎಸ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ಅಪ್ಲೋಡ್ ಮಾಡಿ.
ಉತ್ತರಿಸದಿದ್ದರೆ...
ಸಮಯಕ್ಕೆ ಸರಿಯಾಗಿ ನೋಟಿಸ್‌ಗೆ ಉತ್ತರಿಸದಿದ್ದರೆ ಅಥವಾ ITR ಸಲ್ಲಿಸದಿದ್ದರೆ ಹೆಚ್ಚಿನ ದಂಡ ವಿಧಿಸಬಹುದು. ಮುಂದಿನ ವರ್ಷ ನಷ್ಟವನ್ನು ಸೇರಿಸಲು ಕೂಡ ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಕೂಡ ಸಾಧ್ಯತೆ ಇರುತ್ತದೆ. ಆದ್ದರಿಂದ ITR ಸಲ್ಲಿಕೆ ಮಾಡಿದದ್ದರೆ ಕೂಡಲೇ ಬಿಲೇಟೆಡ್ ರಿಟರ್ನ್ ಸಲ್ಲಿಸಿ ನೋಟಿಸ್‌ಗೆ ರಿಪ್ಲೈ ನೀಡುವುದು ಉತ್ತಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




