ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದ್ದೀರಾ? ITR ಸಲ್ಲಿಸಿದ ನಂತರವೂ ಈ ದಾಖಲೆಗಳನ್ನು 6 ವರ್ಷ ಕಡ್ಡಾಯವಾಗಿ ಇಟ್ಟುಕೊಳ್ಳಿ! ಯಾಕೆ ಗೊತ್ತಾ?
ಜುಲೈ 31 ಒಳಗೆ ITR ಸಲ್ಲಿಸಿ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತೀರಾ? ಅಲ್ಲಿಗೆ ಕೆಲಸ ಮುಗಿದಿಲ್ಲ. ತಜ್ಞರ ಪ್ರಕಾರ, ITR ಸಲ್ಲಿಸಿದ ನಂತರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕನಿಷ್ಠ 6 ವರ್ಷಗಳ ಕಾಲ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಡ್ಡಾಯ. ಹಾಗಾದ್ರೆ, ಆ ದಾಖಲೆಗಳು ಯಾವುವು?

ITR Filing 2026: ಅಬ್ಬಾ, ಜುಲೈ 31ರ ಒಳಗೆ ಆದಾಯ ತೆರಿಗೆ ರಿಟರ್ನ್ ಅಂದ್ರೆ ITR ಫೈಲ್ ಮಾಡಾಯಿತು! ನನ್ನ ಕೆಲಸ ಮುಗಿಯಿತು ಎಂದು ನಿಟ್ಟುಸಿರು ಬಿಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಗಮನಕ್ಕೆ.. ಅದುವೇ ತಜ್ಞರ ಪ್ರಕಾರ, ITR ಫೈಲ್ ಮಾಡಿದ ನಂತರವೂ ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳನ್ನು ಕನಿಷ್ಠ 6 ವರ್ಷಗಳ ಕಾಲ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕಡ್ಡಾಯ.! ಹಾಗಾದ್ರೆ, ITR ಸರಿಯಾಗಿ ಫೈಲ್ ಮಾಡಿದ ನಂತರವೂ ಬರಬಹುದಾದ ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಂದ ಬಚಾವಾಗಲು ಯಾವ ದಾಖಲೆಗಳನ್ನು ನೀವು ಡಿಲೀಟ್ ಮಾಡಬಾರದು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
ITR ಸಲ್ಲಿಸಿದ ನಂತರ 6 ವರ್ಷ ಇಡಬೇಕಾದ 8 ಮುಖ್ಯ ದಾಖಲೆಗಳು
1. ಫಾರ್ಮ್ 16:
ಸಂಬಳ ಪಡೆಯುವವರಿಗೆ ಕಂಪನಿ ಕೊಡುವ ಪ್ರಮುಖ ದಾಖಲೆ. ಇದರಲ್ಲಿ TDS, ವೇತನ, ವಿನಾಯಿತಿಗಳ ವಿವರ ಇರುತ್ತದೆ. ಉದ್ಯೋಗ ಬದಲಾಯಿಸಿದರೂ ಎಲ್ಲಾ ಕಂಪನಿಯ Form 16 ಇಡಿ.
2. ಫಾರ್ಮ್ 26AS ಮತ್ತು AIS/TIS:
ಇದೇ ನಿಮ್ಮ Tax Passbook. ವರ್ಷದಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು TDS ಕಟ್ ಆಗಿದೆ, ಯಾವ ಷೇರು ಮಾರಾಟವಾಗಿದೆ, ದೊಡ್ಡ ಡೆಪಾಸಿಟ್ ಇದ್ಯಾ ಎಂಬುದು ಇಲ್ಲಿ ಇರುತ್ತದೆ. ITR ನಲ್ಲಿ ತೋರಿಸಿದ ಅಂಕಿಅಂಶ ಇದಕ್ಕೆ ಹೊಂದಾಣಿಕೆ ಆಗಬೇಕು.
3. ಬ್ಯಾಂಕ್ ಸ್ಟೇಟ್‌ಮೆಂಟ್ ಮತ್ತು ಪಾಸ್‌ಬುಕ್:
ವರ್ಷದ ಎಲ್ಲಾ ಬ್ಯಾಂಕ್ ಖಾತೆಗಳ ಸ್ಟೇಟ್‌ಮೆಂಟ್. FD ಬಡ್ಡಿ, ಸೇವಿಂಗ್ಸ್ ಬಡ್ಡಿ, ದೊಡ್ಡ ಮೊತ್ತದ ಠೇವಣಿ-ಹಿಂಪಡೆಯುವಿಕೆಗೆ ಪುರಾವೆ ಇದು.
4. ಹೂಡಿಕೆ ಮತ್ತು ಕಡಿತದ ಪುರಾವೆಗಳು:
80C, 80D ಅಡಿಯಲ್ಲಿ ಕ್ಲೇಮ್ ಮಾಡಿದ ಎಲ್ಲಾ ರಸೀದಿಗಳು.
ಉದಾ: LIC ಪ್ರೀಮಿಯಂ, PPF, ELSS, ಮನೆ ಸಾಲದ ಬಡ್ಡಿ, ಆರೋಗ್ಯ ವಿಮೆ ಪ್ರೀಮಿಯಂ ರಸೀದಿ, ಮಕ್ಕಳ ಶಾಲಾ ಫೀಸ್.
5. ಬಂಡವಾಳ ಲಾಭದ ಲೆಕ್ಕಾಚಾರ:
ಷೇರು, ಮ್ಯೂಚುವಲ್ ಫಂಡ್, ಮನೆ ಅಥವಾ ಜಮೀನು ಮಾರಾಟ ಮಾಡಿದ್ದರೆ Capital Gain Statement, ಖರೀದಿ-ಮಾರಾಟದ ದಾಖಲೆ ಇಡಬೇಕು.
6. ಬಾಡಿಗೆ ಒಪ್ಪಂದ ಮತ್ತು HRA ರಸೀದಿ:
HRA ಕ್ಲೇಮ್ ಮಾಡಿದ್ದರೆ ಮನೆ ಮಾಲೀಕರಿಂದ ಪಡೆದ ಬಾಡಿಗೆ ರಸೀದಿ ಮತ್ತು ಬಾಡಿಗೆ ಒಪ್ಪಂದದ ಪ್ರತಿಯನ್ನು ಇಡಿ.
7. ITR ವೆರಿಫಿಕೇಷನ್ ಪ್ರತಿಗಳು:
ಆನ್‌ಲೈನ್ ಸಲ್ಲಿಸಿದ ITR-V ಪ್ರತಿಯನ್ನು ಡೌನ್‌ಲೋಡ್ ಮಾಡಿ. E-Verify ಮಾಡಿದ Confirmation Mail/SMS ಸ್ಕ್ರೀನ್‌ಶಾಟ್ ಕೂಡ ಸೇವ್ ಮಾಡಿ.
8. ಹಿಂದಿನ ವರ್ಷದ ITR ಪ್ರತಿಗಳು:
ಕಳೆದ 6 ವರ್ಷದ ರಿಟರ್ನ್ ಪ್ರತಿಗಳು. ಲೋನ್ ಅಪ್ಲೈ ಮಾಡುವಾಗಲೂ ಇದು ಬೇಕಾಗುತ್ತದೆ.

ಯಾಕೆ 6 ವರ್ಷ ಇಡಬೇಕು?
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 149 ರ ಪ್ರಕಾರ, IT ಇಲಾಖೆ ಕಳೆದ 6 ವರ್ಷದ ಆದಾಯವನ್ನು ಮರು-ಪರಿಶೀಲನೆ ಮಾಡಬಹುದು. ನೀವು ಯಾವುದಾದರೂ ಆದಾಯ ಮುಚ್ಚಿಟ್ಟಿದ್ದೀರಿ ಎಂಬ ಅನುಮಾನ ಬಂದರೆ Notice u/s 148 ಕಳುಹಿಸಬಹುದು. ಆಗ ಈ ದಾಖಲೆಗಳು ಇಲ್ಲದಿದ್ದರೆ ನೀವು ತಪ್ಪು ಮಾಡದಿದ್ದರೂ ಸಾಬೀತುಪಡಿಸಲು ಕಷ್ಟವಾಗಬಹುದು.
ದಾಖಲೆಗಳನ್ನು ಹೇಗೆ ಸೇವ್ ಮಾಡಬೇಕು?
Digital Copy: ಎಲ್ಲವನ್ನೂ PDF ಸ್ಕ್ಯಾನ್ ಮಾಡಿ Google Drive ಅಥವಾ Email ನಲ್ಲಿ ಇಡಿ.
Physical File: ಮೂಲ ರಸೀದಿಗಳನ್ನು ಒಂದು ಫೋಲ್ಡರ್‌ನಲ್ಲಿ ವರ್ಷದ ಹೆಸರಿನಲ್ಲಿ ಇಡಿ.
Backup: Pen Drive ಅಥವಾ Hard Disk ನಲ್ಲೂ Backup ಇರಲಿ.
ಒಟ್ಟರೆಯಾಗಿ, ITR ಫೈಲ್ ಮಾಡುವುದು ಅರ್ಧ ಕೆಲಸ. ದಾಖಲೆಗಳನ್ನು ಸರಿಯಾಗಿ ಇಡುವುದು ಪೂರ್ಣ ಕೆಲಸ. 6 ವರ್ಷ ಎನ್ನುವುದು ತುಂಬಾ ದೊಡ್ಡ ಸಮಯವಲ್ಲ. ಒಂದು ವರ್ಷಕ್ಕೆ ಒಂದು ಫೋಲ್ಡರ್ ಮಾಡಿ ಇಟ್ಟರೆ ಮುಂದೆ ನೋಟಿಸ್ ಬಂದಾಗಲೂ ನೀವು ಟೆನ್ಷನ್ ಇಲ್ಲದೆ ಉತ್ತರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




