ITR ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ? ಲೇಟ್ ಆದ್ರೆ ಫೈನ್ ಎಷ್ಟು?
ಅಂದಾಜು 10 ಕೋಟಿ ಭಾರತೀಯರು ಪ್ರತಿ ವರ್ಷ ITR ಸಲ್ಲಿಸುತ್ತಾರೆ. ಅದರಂತೆ, ಈ ವರ್ಷವೂ ಕೋಟ್ಯಂತರ ಭಾರತೀಯರು ITR ಸಲ್ಲಿಸಲಿದ್ದು, ಅದಕ್ಕೆ ಜುಲೈ 31 ಕಡೆಯ ದಿನವಾಗಿದೆ. ಆದರೆ, ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ಎಷ್ಟು ಫೈನ್ ಕಟ್ಟಬೇಕು?

ಅಂದಾಜು 10 ಕೋಟಿ ಭಾರತೀಯರು ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುತ್ತಾರೆ. ಅದರಂತೆ, ಈ ವರ್ಷವೂ ಕೋಟ್ಯಂತರ ಭಾರತೀಯರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿದ್ದು, ಅದಕ್ಕೆ ಜುಲೈ 31 ಕಡೆಯ ದಿನವಾಗಿದೆ. ಆದರೆ, ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ಎಷ್ಟು ಫೈನ್ ಕಟ್ಟಬೇಕು?
ಫೈನ್ ಎಷ್ಟು?
ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಅನ್ನು ಕೊನೆಯ ದಿನವಾಗಿ ಗಡುವು ನಿಗದಿ ಪಡಿಸಿದೆ. ಅಕಸ್ಮಾತ್, ಜುಲೈ 31ರೊಳಗೆ ITR ಸಲ್ಲಿಕೆ ಮಾಡದಿದ್ದರೆ, ಭಾರೀ ದಂಡ ಮತ್ತು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ..
ತಡವಾಗಿ ITR ಸಲ್ಲಿಕೆ ಮಾಡಿದರೆ:
ಜುಲೈ 31ರ ನಂತರ ಸಲ್ಲಿಸುವ ರಿಟರ್ನ್ಸ್ ಅನ್ನು Belated ITR ಎಂದು ಕರೆಯಲಾಗುತ್ತದೆ. ಈ Belated ITR ಅನ್ನು ದಂಡದೊಂದಿಗೆ ಸಲ್ಲಿಕೆ ಮಾಡಲು ಕೊನೆಯ ದಿನ 31 ಡಿಸೆಂಬರ್ 2026. ಅದರಂತೆ ಇದಕ್ಕೆ ನಿಮ್ಮ ವಾರ್ಷಿಕ ಒಟ್ಟು ಆದಾಯವು 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ 5,000 ರೂಪಾಯಿ ದಂಡ ಹಾಗೂ ಅದಕ್ಕಿಂತ ಕಮ್ಮಿ ಇದ್ದರೆ, 1,000 ರೂಪಾಯಿ ದಂಡ ಇರಲಿದೆ. ಅದರಲ್ಲೂ, ನಿಮ್ಮ ಹಳೆಯ ತೆರಿಗೆ ಪದ್ಧತಿಯಲ್ಲಿ ₹2.5 ಲಕ್ಷ, ಹೊಸ ಪದ್ಧತಿಯಲ್ಲಿ ₹3 ಲಕ್ಷಕ್ಕಿಂತಲೂ ಕೆಡಿಮೆ ಇದ್ದರೆ ಯಾವುದೇ ದಂಡವಿಲ್ಲ.
ಏತನ್ಮಧ್ಯೆ, ಜುಲೈ 31ರ ನಂತರವೂ ನೀವು ಸರ್ಕಾರಕ್ಕೆ ತೆರಿಗೆ ಪಾವತಿಸುವುದು ಇನ್ನು ಬಾಕಿ ಇದ್ದರೆ, ಆ ನಂತರದ ಪ್ರತಿ ತಿಂಗಳಿಗೆ ಶೇ. 1 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅದರಲ್ಲೂ, ತಿಂಗಳಿನ ಒಂದು ದಿನ ಲೇಟ್ ಆದರೂ ಇಡೀ ತಿಂಗಳ ಬಡ್ಡಿಯನ್ನ ಕಟ್ಟ ಬೇಕು.
ಮುಂದುವರೆದು, ಶೇರು ಮಾರುಕಟ್ಟೆ, ವ್ಯಾಪಾರ ಅಥವಾ ಆಸ್ತಿ ಮಾರಾಟದಿಂದ ಉಂಟಾದ ನಷ್ಟಗಳನ್ನು ಮುಂದಿನ ವರ್ಷದ ಲಾಭದಲ್ಲಿ ಸರಿಹೊಂದಿಸಲು ಆದಾಯ ತೆರಿಗೆ ಕಾಯ್ದೆ ಅವಕಾಶ ನೀಡುತ್ತದೆ. ಆದರೆ, ಜುಲೈ 31 ರೊಳಗೆ ITR ಸಲ್ಲಿಸದಿದ್ದರೆ, ಈ ನಷ್ಟಗಳನ್ನು ಮುಂದಿನ ವರ್ಷಕ್ಕೆ ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಆದರೆ, ಆಸ್ತಿ ಮಾರಾಟದಿಂದ ಆದ ನಷ್ಟಕ್ಕೆ ಮಾತ್ರವೇ ಮಾತ್ರ ವಿನಾಯಿತಿ ಇದೆ.
ಲೇಟ್ ITR ಲೇಟ್ ಹಣ
ನೀವು ITR ಸಲ್ಲಿಸುವುದು ಲೇಟ್ ಆದಷ್ಟೂ ರಿಫಂಡ್ ಬರುವುದೂ ಕೂಡ ಲೇಟ್ ಆಗುತೆ ಮತ್ತು ಆ ಹಣದ ಮೇಲಿನ ಬಡ್ಡಿಯನ್ನೂ ಕೂಡ ನೀವು ಕಳೆದುಕೊಳ್ಳಬಹುದು. ಏತನ್ಮಧ್ಯೆ, ಉದ್ದೇಶಪೂರ್ವಕವಾಗಿ ತೆರಿಗೆ ವಂಚಿಸಲು ITR ಸಲ್ಲಿಸದೆ ಇದ್ದರೆ ಮತ್ತು ಬಾಕಿ ಇರುವ ತೆರಿಗೆ ಮೊತ್ತ ₹10,000 ಕ್ಕಿಂತ ಹೆಚ್ಚಿದ್ದರೆ ಐಟಿ ಇಲಾಖೆ ಕಾನೂನು ಕ್ರಮ ಜರುಗಿಸಬಹುದು. ಇಂತಹ ಸಂದರ್ಭಗಳಲ್ಲಿ 3 ತಿಂಗಳಿಂದ ಹಿಡಿದು 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




