E20 ಬೇಡ ಅಂದ್ರೆ 100% Pure Petrol ಎಂದ ಗಡ್ಕರಿ; XP100 ಪೆಟ್ರೋಲ್ ಬೆಲೆ ಎಷ್ಟು?
E20 ಪೆಟ್ರೋಲ್ ತಮ್ಮ ವಾಹನದ ಮೈಲೇಜ್ ಕಡಿಮೆ ಮಾಡುತ್ತಿದೆ ಮತ್ತು ಎಂಜಿನ್ ಆಗುತ್ತಿದೆ ಎಂದು ದೂರುತ್ತಿರುವವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ನವದೆಹಲಿ: ದೇಶದಲ್ಲಿ ಪ್ರಸ್ತುತ E20 (20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಸಂಬಂಧಿತ ವಿವಾದ ದೊಡ್ಡದಾಗುತ್ತಿದೆ. ಒಂದೆಡೆ E20 ಪೆಟ್ರೋಲ್ ತಮ್ಮ ವಾಹನದ ಮೈಲೇಜ್ ಕಡಿಮೆ ಮಾಡುತ್ತಿದೆ ಮತ್ತು ಎಂಜಿನ್ ಆಗುತ್ತಿದೆ ಎಂದು ಅನೇಕ ಜನರು ದೂರುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ, E20 ಪೆಟ್ರೋಲ್ ವಾಹನಗಳಿಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳುತ್ತಿದೆ. ಇದರ ನಡುವೆ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರಣದಿಂದ ತಮ್ಮ ಗಾಡಿ ಹಾಳಾಗುತ್ತಿದೆ ಎನ್ನುವವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
E20 ಬೇಡ ಅಂದ್ರೆ ಪ್ಯೂರ್ ಪೆಟ್ರೋಲ್
E20 ಪೆಟ್ರೋಲ್ ಕಾರಣದಿಂದ ತಮ್ಮ ವಾಹನ ಹಾಳಾಗುತ್ತಿದೆ ಎನ್ನುವರು, ಪ್ಯೂರ್ ಪೆಟ್ರೋಲ್ ಅನ್ನೇ ಖರೀದಿಸಬಹುದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಅದರಂತೆ, ದೇಶದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ E20 ಪೆಟ್ರೋಲ್ ಜೊತೆಗೆ, ಯಾವುದೇ ಎಥೆನಾಲ್ ಮಿಶ್ರಣವಿಲ್ಲದ 100% ಪ್ಯೂರ್ ಪೆಟ್ರೋಲ್ ಅನ್ನು XP100 ಹೆಸರಿನಲ್ಲಿ ಮಾರಾಟ ಮಾಡಲು ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ವಾಹನ ಸವಾರರಿಗೆ, ಅದರಲ್ಲೂ ವಿಶೇಷವಾಗಿ ಹಳೆಯ ಕಾರು ಮತ್ತು ಬೈಕ್ ಹೊಂದಿರುವ ಮಾಲೀಕರಿಗೆ ಭಾರಿ ನೆಮ್ಮದಿ ಸಿಕ್ಕಿದೆ.
100% ಪ್ಯೂರ್ ಪೆಟ್ರೋಲ್ ಬೆಲೆ ಎಷ್ಟು?
E20 ಪೆಟ್ರೋಲ್ ವಿವಾದವಾಗುತ್ತಿರುವುದರಿಂದ, ಜೊತೆಗೆ, ವಾಹನ ಸವಾರರು ಇದನ್ನು ಬಳಸಲೇಬೇಕು ಎಂದು ಯಾವುದೇ ಕಡ್ಡಾಯ ನಿಯಮ ಇಲ್ಲದ ಕಾರಣ ಕೇಂದ್ರ ಸರ್ಕಾರ ಎಥೆನಾಲ್ ಮುಕ್ತ ಪ್ಯೂರ್ ಪೆಟ್ರೋಲ್ ಅನ್ನು ಮಾರುಕಟ್ಟೆಗೆ ತರಲಿದೆ. ಅದರಂತೆ ಇದನ್ನ ಪ್ರೀಮಿಯಂ ಇಂಧನದ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನೂ ಇದರ ಬೆಲೆಯು ಸಾಮಾನ್ಯ E20 ಪೆಟ್ರೋಲ್‌ಗಿಂತ ಲೀಟರ್‌ಗೆ ₹5 ರಿಂದ ₹10 ರಷ್ಟು ದುಬಾರಿಯಾಗಿರಲಿದೆ.
E20 ಪೆಟ್ರೋಲ್ ಸಂಪೂರ್ಣವಾಗಿ ಸುರಕ್ಷಿತ
ಮುಂದುವರೆದು ಮಾತನಾಡಿದ ಗಡ್ಕರಿ, ಸಂಪೂರ್ಣ ಪರೀಕ್ಷೆಯ ನಂತರವೇ E20 ಪೆಟ್ರೋಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, E20 ಕಾರಣದಿಂದಾಗಿ ಎಂಜಿನ್ ಹಾನಿಗೊಳಗಾದ ಯಾವುದೇ ಪ್ರಕರಣ ವರದಿಯಾಗಿಲ್ಲ. ಜೊತೆಗೆ, ಮಾರುತಿ ಸುಜುಕಿಯಂತಹ ಪ್ರಮುಖ ಕಂಪನಿಗಳು ಸಹ ಇದನ್ನು ದೃಢಪಡಿಸಿವೆ ಎಂದು ತಿಳಿಸಿದ್ದಾರೆ. ಅದ್ರಲ್ಲೂ, E10 ನಲ್ಲಿ ಚಲಿಸುವ ಎಲ್ಲಾ ವಾಹನಗಳು E20 ಗೆ ಸಂಪೂರ್ಣವಾಗಿ ಸೂಕ್ತವಾಗಿವೆ ಎಂದು ಪುನರುಚ್ಚರಿಸಿದ್ದಾರೆ.
ಏತನ್ಮಧ್ಯೆ, ಶೀಘ್ರದಲ್ಲೇ ಫ್ಲೆಕ್ಸ್-ಇಂಧನ ವಾಹನ ಅಂದ್ರೆ ಪೆಟ್ರೋಲ್, ಎಥೆನಾಲ್ ಅಥವಾ ಎರಡರ ಯಾವುದೇ ಮಿಶ್ರಣದಲ್ಲಿ ಚಲಿಸಬಲ್ಲ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಎಂದರು. ಇವುಗಳಿಗಾಗಿ, ಕೆಲವು ಪಂಪ್‌ಗಳಲ್ಲಿ E85 (85% ಎಥೆನಾಲ್ ಮಿಶ್ರಣ) ಪೆಟ್ರೋಲ್ ಸಹ ಲಭ್ಯವಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




