ವಾಹನ ಸವಾರರಿಗೆ ಗುಡ್ ನ್ಯೂಸ್: E20 ಪೆಟ್ರೋಲ್‌ನಿಂದ ಎಂಜಿನ್ ಹಾಳಾಗಲ್ಲ, ಮೈಲೇಜೂ ಕಮ್ಮಿಯಾಗಲ್ಲ; IIT ಸಂಶೋಧನೆ
ಕಳೆದ ವಾರ ಇಂಧನ ಸಚಿವಾಲಯವು, E20 ಬಳಕೆಯಿಂದ ಕೆಲವು ವಾಹನಗಳಲ್ಲಿ ಮೈಲೇಜ್ ಅನ್ನು ಶೇಕಡಾ 5 ರಷ್ಟು ಕಡಿಮೆ ಮಾಡಬಹುದು ಎಂದು ಹೇಳಿತ್ತು.

ಕಾನ್ಪುರ: ದೇಶದಲ್ಲಿ E20 ಪೆಟ್ರೋಲ್(ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್) ಮಾರಾಟ ಕಡ್ಡಾಯ ಮಾಡುವುದಕ್ಕೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಅದರಿಂದ ಎಂಜಿನ್ ಹಾಳಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಿರುವ ಐಐಟಿ ಕಾನ್ಪುರದ ಸಂಶೋಧಕರು, ತಮ್ಮ ಅಧ್ಯಯನಗಳು ಇಂಧನ ದಕ್ಷತೆಯಲ್ಲಿ ಯಾವುದೇ ಗಮನಾರ್ಹ ಕುಸಿತವನ್ನು ತೋರಿಸಿಲ್ಲ ಮತ್ತು E20 ಎಂಜಿನ್‌ಗಳಿಗೆ ಹಾನಿ ಮಾಡುತ್ತದೆ ಎಂಬುದಕ್ಕೆ 'ಯಾವುದೇ ಪುರಾವೆ ಇಲ್ಲ' ಎಂದು ಹೇಳಿದ್ದಾರೆ.
ಕಳೆದ ವಾರ ಇಂಧನ ಸಚಿವಾಲಯವು, E20 ಬಳಕೆಯಿಂದ ಕೆಲವು ವಾಹನಗಳಲ್ಲಿ ಮೈಲೇಜ್ ಅನ್ನು ಶೇಕಡಾ 5 ರಷ್ಟು ಕಡಿಮೆ ಮಾಡಬಹುದು ಎಂದು ಸ್ಪಷ್ಟಪಡಿಸಿದ ನಂತರ ಈ ಸಂಶೋಧನಾ ವರದಿ ಬಂದಿದೆ.
ಐಐಟಿ ಕಾನ್ಪುರದಿಂದ E20 ಸಂಶೋಧನೆ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಂಜಿನ್ ಸಂಶೋಧನಾ ಪ್ರಯೋಗಾಲಯದ ಯೋಜನಾ ವಿಜ್ಞಾನಿ ಧ್ರುವ್ ರಾಜ್ ಕರಣಾ ಅವರು, E20 ಪೆಟ್ರೋಲ್ ಬಳಕೆಯಿಂದ ಎಂಜಿನ್ ದಕ್ಷತೆಗೆ ಯಾವುದೇ ಪೆಟ್ಟು ಬೀಳುವುದಿಲ್ಲ ಎಂದು ಹೇಳಿದ್ದಾರೆ.
ಶೇ.5ರಷ್ಟು ಮೈಲೇಜ್ ಕಡಿಮೆಯಾಗಲಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಶುದ್ಧ ಪೆಟ್ರೋಲ್ ಬಳಕೆಯಲ್ಲೂ ಹೀಗೆ ಆಗುತ್ತದೆ. ವಾಹನದ ಬಳಕೆ ರೀತಿ ಮತ್ತು ಅದರ ದಕ್ಷತೆಯಿಂದಾಗಿ ಮೈಲೇಜ್ ಇಳಿಕೆಯಾಗುತ್ತದೆಯೇ ಹೊರತು, E20 ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
E20 ಇಂಧನದಿಂದ ಎಂಜಿನ್ಗೆ ಹಾನಿ, ತುಕ್ಕು ಅಥವಾ ಇತರ ತಾಂತ್ರಿಕ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ನಮ್ಮ ಪರೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಕರಣಾ ಹೇಳಿದ್ದಾರೆ.
E20 ಇಂಧನ ವಾಹನಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ವದಂತಿಗಳಿಗೆ ಯಾವುದೇ ವೈಜ್ಞಾನಿಕವಾಗಿ ಆಧಾರಗಳಿಲ್ಲ. ಪರಿಶೀಲಿಸದ ಆನ್‌ಲೈನ್ ಪೋಸ್ಟ್‌ಗಳ ಬದಲಿಗೆ ವಾಹನ ಚಾಲಕರು ತಮ್ಮ ವಾಹನ ತಯಾರಕರ ಕೈಪಿಡಿ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




