ಅಕ್ಟೋಬರ್ 1 ರಿಂದ ಬ್ಯಾಂಕ್ FD ನಿಯಮದಲ್ಲಿ ಭಾರಿ ಬದಲಾವಣೆ; RBI ಹೊಸ ನಿಯಮ
ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವವರಿಗೆ ಪ್ರಮುಖ ಸೂಚನೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1 2026 ರಿಂದ ಎಫ್‌ಡಿ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡುವವರಿಗೆ ಪ್ರಮುಖ ಸೂಚನೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ 1 2026 ರಿಂದ ಎಫ್‌ಡಿ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಸಾಮಾನ್ಯ ಹೂಡಿಕೆದಾರರಿಂದ ಹಿಡಿದು ದೊಡ್ಡ ಮೊತ್ತ ಠೇವಣಿ ಇಡುವವರವರೆಗೆ ಎಲ್ಲರ ಮೇಲೂ ಪರಿಣಾಮ ಬೀರಲಿದೆ. ಆ ಕುರಿತ ವರದಿ ಇಲ್ಲಿದೆ:
ಹೊಸ ನಿಯಮದಲ್ಲಿ ಏನಿದೆ?
ಆರ್‌ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್‌ಗಳು ಬೃಹತ್ ಠೇವಣಿಗಳ ಮೇಲೆ ಬಡ್ಡಿ ದರವನ್ನು ವಿಭಿನ್ನವಾಗಿ ನೀಡಬಹುದು. ಲಿಕ್ವಿಡಿಟಿ ಕವರೇಜ್ ರೇಶಿಯೋ ಅಡಿಯಲ್ಲಿ ಬರುವ ರನ್ ಆಫ್ ರೇಟ್ ಆಧರಿಸಿ ಬ್ಯಾಂಕ್‌ಗಳಿಗೆ ಈ ಅವಕಾಶ ಸಿಗುತ್ತದೆ. ಅಂದರೆ ಹೆಚ್ಚಿನ ಹಣದ ಅಗತ್ಯವಿರುವ ಬ್ಯಾಂಕ್‌ಗಳು ದೊಡ್ಡ ಮೊತ್ತದ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ನೀಡಬಹುದು. ಆದರೆ ಒಂದೇ ಮೊತ್ತಕ್ಕೆ ಒಂದೇ ರೀತಿಯ ಠೇವಣಿಗಳ ನಡುವೆ ತಾರತಮ್ಯ ಮಾಡುವಂತಿಲ್ಲ.
ಇದರ ಜೊತೆಗೆ ಅಕ್ಟೋಬರ್ 1 ರಿಂದ ಪ್ರತಿ ವ್ಯವಹಾರ ದಿನದ ಬೆಳಿಗ್ಗೆ ಬ್ಯಾಂಕ್‌ಗಳು ತಮ್ಮ ಬೃಹತ್ ಠೇವಣಿ ಬಡ್ಡಿ ದರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ. ಇದರಿಂದ ಪಾರದರ್ಶಕತೆ ಹೆಚ್ಚಾಗಲಿದೆ.
ಸಾಮಾನ್ಯ ಎಫ್‌ಡಿ ಗ್ರಾಹಕರಿಗೆ ಏನು ಪರಿಣಾಮ?
ತಜ್ಞರ ಪ್ರಕಾರ ಈ ನಿಯಮಗಳು ತಕ್ಷಣವೇ ಸಾಮಾನ್ಯ ಚಿಲ್ಲರೆ ಎಫ್‌ಡಿ ಹೂಡಿಕೆದಾರರ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇದು ಮುಖ್ಯವಾಗಿ ಬೃಹತ್ ಠೇವಣಿಗಳಿಗೆ ಸಂಬಂಧಿಸಿದೆ. ಆದರೆ ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳ ನಡುವೆ ಬಡ್ಡಿ ದರದಲ್ಲಿ ವ್ಯತ್ಯಾಸ ಕಾಣಬಹುದು. ಠೇವಣಿ ಮೊತ್ತ ಅವಧಿ ಮತ್ತು ಬ್ಯಾಂಕ್‌ಗೆ ಹಣದ ಅಗತ್ಯವನ್ನು ಆಧರಿಸಿ ದರ ಬದಲಾಗಬಹುದು.
ಮತ್ತೊಂದು ಪ್ರಮುಖ ನಿಯಮ ಎಂದರೆ ಎಫ್‌ಡಿ ಮುಕ್ತಾಯವಾದ ನಂತರ ಹಣವನ್ನು ಹಿಂಪಡೆಯದಿದ್ದರೆ ಅದಕ್ಕೆ ಸೇವಿಂಗ್ ಖಾತೆ ಬಡ್ಡಿ ಅಥವಾ ಒಪ್ಪಂದದ ಬಡ್ಡಿ ಯಾವುದು ಕಡಿಮೆಯಿದೆಯೋ ಅದನ್ನು ನೀಡಲಾಗುತ್ತದೆ. ಈ ಹಿಂದೆ ಕೇವಲ ಸೇವಿಂಗ್ ಬಡ್ಡಿ ಅನ್ವಯಿಸುತ್ತಿತ್ತು. ಹೀಗಾಗಿ ಮುಕ್ತಾಯದ ದಿನದಂದು ಹಣವನ್ನು ಹಿಂಪಡೆಯುವುದು ಅಥವಾ ಮರು ಹೂಡಿಕೆ ಮಾಡುವುದು ಮುಖ್ಯವಾಗಿದೆ.
ಜೂನ್ 2026 ರಂತೆ ಬ್ಯಾಂಕ್‌ಗಳು ನೀಡುತ್ತಿರುವ ಎಫ್‌ಡಿ ಬಡ್ಡಿ ದರಗಳು ಶೇ 2.50 ರಿಂದ ಶೇ 8.10 ರವರೆಗೆ ಇವೆ. ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಇನ್ನೂ ಹೆಚ್ಚಿನ ದರ ನೀಡುತ್ತಿವೆ. ಹಿರಿಯ ನಾಗರಿಕರಿಗೆ ಕೆಲವು ಬ್ಯಾಂಕ್‌ಗಳಲ್ಲಿ ಶೇ 8 ರವರೆಗೆ ಬಡ್ಡಿ ಸಿಗುತ್ತಿದೆ.
ನೀವು ಏನು ಮಾಡಬೇಕು?
ಎಫ್‌ಡಿ ನವೀಕರಿಸುವ ಮೊದಲು ವಿವಿಧ ಬ್ಯಾಂಕ್‌ಗಳ ದರಗಳನ್ನು ಹೋಲಿಕೆ ಮಾಡಿ. ದೊಡ್ಡ ಮೊತ್ತವಿದ್ದರೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ಉತ್ತಮ ದರ ಪಡೆಯಲು ಪ್ರಯತ್ನಿಸಿ. ಜೊತೆಗೆ ಕೇವಲ ಹೆಚ್ಚಿನ ಬಡ್ಡಿ ನೋಡದೆ ಮುಂಚಿತವಾಗಿ ಹಿಂಪಡೆಯುವ ದಂಡ ಲಿಕ್ವಿಡಿಟಿ ಮತ್ತು ಪೇಔಟ್ ಆಯ್ಕೆಗಳನ್ನೂ ಗಮನಿಸಿ.
ಒಟ್ಟಾರೆಯಾಗಿ, ಆರ್‌ಬಿಐನ ಈ ಹೊಸ ನಿಯಮಗಳು ಎಫ್‌ಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪರ್ಧೆ ತರುವ ಉದ್ದೇಶ ಹೊಂದಿವೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವ ಈ ಬದಲಾವಣೆಗಳ ಬಗ್ಗೆ ತಿಳಿದುಕೊಂಡು ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




