ಭಾನುವಾರವೂ ಬ್ಯಾಂಕ್ಗಳು ಓಪನ್! ಸತತ 5 ದಿನ ಬ್ಯಾಂಕ್ ಮುಷ್ಕರ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27 ರಂದು ಕೆಲಸ ಮಾಡಲು ಆದೇಶ
Bank Strike Alert: ದೇಶಾದ್ಯಂತ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ 3 ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ತಡೆಯಲು, ಸೆಪ್ಟೆಂಬರ್ 27ರ ಭಾನುವಾರದಂದು ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಕಾರ್ಯನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ದೇಶಾದ್ಯಂತ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ ಮೂರು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ತಡೆಯಲು, ಬರುವ ಸೆಪ್ಟೆಂಬರ್ 27ರ ಭಾನುವಾರದಂದು ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಸತತ 5 ದಿನಗಳ ಬಂದ್
ಬ್ಯಾಂಕ್ ನೌಕರರ ಒಕ್ಕೂಟಗಳ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸೆಪ್ಟೆಂಬರ್ 28ರಿಂದ 30ರವರೆಗೆ (ಸೋಮವಾರ, ಮಂಗಳವಾರ, ಬುಧವಾರ) 3 ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರದ ರಜಾ ದಿನಗಳಾಗಿದ್ದವು. ಒಂದು ವೇಳೆ ಭಾನುವಾರ ರಜೆ ನೀಡಿದ್ದರೆ ಸತತ 5 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುತ್ತಿದ್ದವು. ಅದರಲ್ಲೂ, ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಆರ್ಥಿಕ ವರ್ಷದ ಅರ್ಧವಾರ್ಷಿಕ ಖಾತೆ ಮುಕ್ತಾಯದ ಪ್ರಮುಖ ದಿನವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಮತ್ತು ತುರ್ತು ಆರ್ಥಿಕ ವಹಿವಾಟು ನಡೆಸುವವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ, ಭಾನುವಾರದಂದು ಎಲ್ಲಾ ಬ್ಯಾಂಕ್ ಶಾಖೆಗಳು, ಆಡಳಿತ ಕಚೇರಿಗಳು, ಎಟಿಎಂ ಸಂಯೋಜಿತ ಶಾಖೆಗಳು ಹಾಗೂ ನಗದು ಸಂಗ್ರಹಣಾ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ತೆರೆದು ಸಾಮಾನ್ಯ ದಿನಗಳಂತೆಯೇ ಸೇವೆ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ.
ಯಾವೆಲ್ಲ ಸೇವೆಗಳು ಲಭ್ಯ?
ಸೆಪ್ಟೆಂಬರ್ 27ರ ಭಾನುವಾರ ಎಲ್ಲಾ ಬ್ಯಾಂಕ್ ಶಾಖೆಗಳು, ಆಡಳಿತ ಕಚೇರಿಗಳು, ಎಟಿಎಂ ಲಿಂಕ್ಡ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿರಲಿವೆ. ಇದರ ನಡುವೆಯೇ, ಮುಷ್ಕರದ ವ್ಯಾಪ್ತಿಗೆ ಬರದ ಖಾಸಗಿ ಬ್ಯಾಂಕ್ಗಳಾದ ಎಚ್ಡಿಎಫ್ಸಿ, ಐಸಿಐಸಿಐ, ಆಕ್ಸಿಸ್ ನಂತಹ ಪ್ರಮುಖ ಬ್ಯಾಂಕ್ಗಳು ಭಾನುವಾರ ರಜೆಯೇ ಇರುತ್ತದೆ. ಏತನ್ಮಧ್ಯೆ, ಮುಷ್ಕರದ ಅವಧಿಯಲ್ಲಿ (ಸೆಪ್ಟೆಂಬರ್ 28-30) ಭೌತಿಕವಾಗಿ ಬ್ಯಾಂಕ್ ಶಾಖೆಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಯುಪಿಐ, ಮೊಬೈಲ್ ಬ್ಯಾಂಕಿಂಗ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ನಂತಹ ಡಿಜಿಟಲ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಹಾಗಾಗಿ, ಪ್ರಮುಖ ವಹಿವಾಟುಗಳಿದ್ದಲ್ಲಿ ಗ್ರಾಹಕರು ಸೆಪ್ಟೆಂಬರ್ 27ರ ಭಾನುವಾರವೇ ಪೂರ್ಣಗೊಳಿಸಿಕೊಳ್ಳಲು ಬ್ಯಾಂಕ್ಗಳು ಸಲಹೆ ನೀಡಿವೆ.
ಮುಷ್ಕರಕ್ಕೆ ಪ್ರಮುಖ ಕಾರಣಗಳೇನು?
ಬ್ಯಾಂಕ್ ನೌಕರರ ಒಕ್ಕೂಟಗಳು ಪ್ರಮುಖವಾಗಿ ವಾರಕ್ಕೆ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರ ಹಮ್ಮಿಕೊಂಡಿವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



