ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ಶೇ.1.26ಕ್ಕೆ ಏರಿಕೆ!
ಇಂಧನ ಮತ್ತು ವಿದ್ಯುತ್, ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ಬೆಲೆ ಹೆಚ್ಚಳದಿಂದಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 1.26 ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲೂ ಸಗಟು ಹಣದುಬ್ಬರವು ಏರಿಕೆಯಾಗಿತ್ತು.

ನವದೆಹಲಿ: ಇಂಧನ ಮತ್ತು ವಿದ್ಯುತ್, ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ಬೆಲೆ ಹೆಚ್ಚಳದಿಂದಾಗಿ ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 1.26 ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್‌ನಲ್ಲೂ ಸಗಟು ಹಣದುಬ್ಬರವು ಏರಿಕೆಯಾಗಿತ್ತು.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರವು ಕಳೆದ ವರ್ಷ ಏಪ್ರಿಲ್‌ನಲ್ಲಿ ಶೇ 0.79 ರಷ್ಟಿತ್ತು. 2024 ರ ಮಾರ್ಚ್‌ನಲ್ಲಿ, ಇದು ಶೇ 0.53 ರಷ್ಟಿತ್ತು.
'ಆಹಾರ ಪದಾರ್ಥಗಳು, ವಿದ್ಯುತ್, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಉತ್ಪನ್ನಗಳ ತಯಾರಿಕೆ, ಇತರ ಉತ್ಪಾದನೆಗಳ ಬೆಲೆಗಳಲ್ಲಿ ಹೆಚ್ಚಳವಾಗಿರುವುದರಿಂದ 2024ರ ಏಪ್ರಿಲ್‌ನಲ್ಲಿ ಹಣದುಬ್ಬರದ ಧನಾತ್ಮಕ ದರವು ಪ್ರಾಥಮಿಕವಾಗಿ ಏರಿಕೆಯಾಗಿದೆ' ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಮಾಹಿತಿಯ ಪ್ರಕಾರ, ಮಾರ್ಚ್‌ನಲ್ಲಿ ಶೇ 6.88 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 7.74 ಕ್ಕೆ ಏರಿದೆ. ತರಕಾರಿಗಳ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 23.60 ರಷ್ಟಿದ್ದು, ಹಿಂದಿನ ತಿಂಗಳು ಶೇ 19.52 ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಏಪ್ರಿಲ್‌ನಲ್ಲಿ 1.38 ರಷ್ಟಿದ್ದು, ಮಾರ್ಚ್‌ನಲ್ಲಿ (-) 0.77 ರಷ್ಟಿತ್ತು.
ಏಪ್ರಿಲ್‌ನಲ್ಲಿ ಡಬ್ಲ್ಯುಪಿಐ ಏರಿಕೆಯು ಚಿಲ್ಲರೆ ಹಣದುಬ್ಬರದ ದತ್ತಾಂಶಕ್ಕೆ ವ್ಯತಿರಿಕ್ತವಾಗಿದೆ. ವಿತ್ತೀಯ ನೀತಿಯನ್ನು ರೂಪಿಸುವಾಗ ಆರ್‌ಬಿಐ ಮುಖ್ಯವಾಗಿ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ 11 ತಿಂಗಳ ಕನಿಷ್ಠ ಮಟ್ಟ ಅಂದರೆ ಶೇ 4.83 ಕ್ಕೆ ಇಳಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



