OLA, UBER ಗೆ ಸಡ್ಡು; 'ನಮ್ಮ ಯಾತ್ರಿ'ಯಲ್ಲಿ ಇನ್ಮುಂದೆ ಕ್ಯಾಬ್ ಸೇವೆ ಕೂಡ ಲಭ್ಯ!
ಆಟೋ ಸೇವೆ ಮೂಲಕ ಬೆಂಗಳೂರಿನಲ್ಲಿ ಖ್ಯಾತಿ ಗಳಿಸಿರುವ ನಮ್ಮ ಯಾತ್ರಿ ಸಂಸ್ಥೆ ಇದೀಗ ಕ್ಯಾಬ್ ಸೇವೆಯನ್ನೂ ಆರಂಭಿಸಿದೆ.

ಬೆಂಗಳೂರು: ಆಟೋ ಸೇವೆ ಮೂಲಕ ಬೆಂಗಳೂರಿನಲ್ಲಿ ಖ್ಯಾತಿ ಗಳಿಸಿರುವ ನಮ್ಮ ಯಾತ್ರಿ ಸಂಸ್ಥೆ ಇದೀಗ ಕ್ಯಾಬ್ ಸೇವೆಯನ್ನೂ ಆರಂಭಿಸಿದೆ.
ಹೌದು.. ನಮ್ಮ ಯಾತ್ರಿ ಆ್ಯಪ್ ಆರಂಭದಲ್ಲಿ ಬೆಂಗಳೂರಿನಾದ್ಯಂತ ಆಟೊ ಸೇವೆಗಳನ್ನು ಒದದಗಿಸುತ್ತಿತ್ತು. ಇದೀಗ ಕ್ಯಾಬ್ ಸೇವಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಪ್ರಯಾಣಿಕರು ನಮ್ಮ ಯಾತ್ರಿ ಆ್ಯಪ್ ಮೂಲಕ ಕ್ಯಾಬ್ ಕೂಡ ಬುಕ್ ಮಾಡಬಹುದಾಗಿದೆ. ಸದ್ಯದಲ್ಲೇ ಈ ಸೇವೆ ಕರ್ನಾಟಕದಾದ್ಯಂತ ವಿಸ್ತರಣೆಯಾಗಲಿದೆ ಎಂದು ಸಂಸ್ಥೆ ಹೇಳಿದೆ.
ಸದ್ಯ 25,000 ಕ್ಯಾಬ್ಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿದ್ದು, ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಚಾಲಕರನ್ನು (Cab Drivers) ಸೇರಿಸುವ ಗುರಿಯನ್ನು ಆ್ಯಪ್ ಹೊಂದಿದೆ. ನಮ್ಮ ಯಾತ್ರಿಯು ಹೆಚ್ಚಿನ ಕಮಿಷನ್ ಮತ್ತು ಪಾರದರ್ಶಕತೆಯ ಕೊರತೆಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಶೂನ್ಯ-ಕಮಿಷನ್, ಡೈರೆಕ್ಟ್-ಟು-ಡ್ರೈವರ್ ಮಾದರಿಗೆ ಸಮರ್ಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ನಮ್ಮ ಯಾತ್ರಿಯ ಕ್ಯಾಬ್ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಚಾಲನೆ ನೀಡಿದ್ದು ಬಳಿಕ ಮಾತನಾಡಿದ ಅವರು, 'ನಮ್ಮ ಯಾತ್ರಿ ಕರ್ನಾಟಕದ ಸ್ವದೇಶಿ ಆ್ಯಪ್ ಆಗಿದೆ. ಅದರ ಸಮುದಾಯ-ಕೇಂದ್ರಿತ ವಿಧಾನ ಮತ್ತು ಚಾಲಕರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ. ನಾವೀನ್ಯತೆ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಗೆ ಅವರ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅವರಿಗೆ ಯಶಸ್ಸನ್ನು ಬಯಸುತ್ತೇನೆ' ಎಂದರು.
ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್‌ಎಟಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಮಾತನಾಡಿ, ನಮ್ಮ ಸಮುದಾಯವನ್ನು ಸಬಲೀಕರಣಗೊಳಿಸಲು ಮತ್ತು ನ್ಯಾಯಯುತ ವೇತನ, ಪರಸ್ಪರ ಗೌರವವನ್ನು ನೀಡುವ ರೀತಿಯಲ್ಲಿ ನೇರವಾಗಿ ಚಾಲಕರನ್ನು ಸಂಪರ್ಕಿಸಬಹುದಾದ, ಮುಕ್ತ ಚಲನಶೀಲತೆಯ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಾವು ನಮ್ಮ ಯಾತ್ರಿಯನ್ನು ಅಭಿನಂದಿಸುತ್ತೇವೆ.
ಇದು ಚಾಲಕರ ಕಲ್ಯಾಣ ಯೋಜನೆಗಳನ್ನು ವರ್ಧಿಸುತ್ತದೆ. ನಮ್ಮ ಯಾತ್ರಿ ಆ್ಯಪ್ ಆಟೋ ಸೇವೆಯಂತೆಯೇ ಕ್ಯಾಬ್‌ಗಳಲ್ಲಿಯೂ ಪಾರದರ್ಶಕತೆ ಮತ್ತು ದಕ್ಷತೆಗೆ ಆದ್ಯತೆ ನೀಡಲಿದೆ. ಇದು ಎಸಿ ಅಲ್ಲದ ಮಿನಿ, ಎಸಿ ಮಿನಿ, ಸೆಡಾನ್ ಮತ್ತು XL ಕ್ಯಾಬ್ ಒಳಗೊಂಡಂತೆ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತದೆ ಎಂದು ಹೇಳಿದರು.
ಶೀಘ್ರ ಕರ್ನಾಟಕದಾದ್ಯಂತ ಸೇವೆ
ನಮ್ಮ ಯಾತ್ರಿ ಆ್ಯಪ್ ಶೀಘ್ರದಲ್ಲೇ ಇಂಟರ್-ಸಿಟಿ, ಬಾಡಿಗೆಗಳು ಮತ್ತು ನಿಗದಿತ ರೈಡ್‌ಗಳನ್ನು ಕೂಡ ಒದಗಿಸಲಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಆ್ಯಪ್ ಸೇವೆ ಲಭ್ಯವಾಗಲಿದೆ. ಇದು ಅಂಗವೈಕಲ್ಯ-ಸ್ನೇಹಿ ಪ್ರಯಾಣ, ಹೆಚ್ಚುವರಿ ಲಗೇಜ್ ಕೊಂಡೊಯ್ಯಲು ಅವಕಾಶ, ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮತ್ತು ಪ್ರವಾಸಗಳಂತಹ ವಿಶೇಷ ಸೇವೆಗಳನ್ನೂ ಸಹ ಒದಗಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



