ಕಚೇರಿಗೆ ಬಂದು ಕೆಲಸ ಮಾಡಿದರೆ ರಿವಾರ್ಡ್; ಬಡ್ತಿ, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತಂತೆ: ಸಿಇಒಗಳ ಅಂಬೋಣ!
ದೇಶದಲ್ಲಿ ಸುಮಾರು ಶೇಕಡಾ 89ರಷ್ಟು ಸಿಇಒಗಳು ಮತ್ತು ಜಾಗತಿಕ ಮಟ್ಟದಲ್ಲಿ ಶೇಕಡಾ 87ರಷ್ಟು ಸಿಇಒಗಳು ಕಚೇರಿಗೆ ಹೋಗಿ ಕೆಲಸ ಮಾಡಿದರೆ ರಿವಾರ್ಡ್ ಗಳು, ಬಡ್ತಿಗಳು, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ.

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಹುತೇಕ ಐಟಿ ಕಂಪೆನಿಗಳು, ಸ್ಟಾರ್ಟ್ ಅಪ್ ಗಳು, ಎಂಎನ್ ಸಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದ್ದವು. ಕೊರೋನಾ ಸಂಕಷ್ಟದಿಂದ ನಾವೆಲ್ಲ ಪಾರು ಆದ ನಂತರ ವಾರಕ್ಕೆ ಮೂರು ದಿನ ಉದ್ಯೋಗಿಗಳು ಕೆಲಸಕ್ಕೆ ಬರುವಂತೆ ನಿಯಮ ಜಾರಿ ಮಾಡಲು ಬಹುತೇಕ ಕಂಪೆನಿಗಳು ಯಶಸ್ವಿಯಾಗಿದ್ದರೂ, ಕಂಪೆನಿಗಳಲ್ಲಿ ಮುಖ್ಯ ಕಾರ್ಯನಿರ್ವಾಹಕರು(Chief executives) ಕಚೇರಿಗೆ ಕೆಲಸಕ್ಕೆ ಹೋಗುವುದು ಬೇಕೇ ಬೇಡವೆ ಅಥವಾ ಮನೆಯಿಂದಲೇ ಕೆಲಸ ಮಾಡುವುದೇ ಎಂಬ ಸಂದಿಗ್ಧತೆಯಲ್ಲಿ ಇದ್ದಾರೆ.
ದೇಶದಲ್ಲಿ ಸುಮಾರು ಶೇಕಡಾ 89ರಷ್ಟು ಸಿಇಒಗಳು ಮತ್ತು ಜಾಗತಿಕ ಮಟ್ಟದಲ್ಲಿ ಶೇಕಡಾ 87ರಷ್ಟು ಸಿಇಒಗಳು ಕಚೇರಿಗೆ ಹೋಗಿ ಕೆಲಸ ಮಾಡಿದರೆ ರಿವಾರ್ಡ್ ಗಳು, ಬಡ್ತಿಗಳು, ವೇತನ ಹೆಚ್ಚಳಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುತ್ತಾರೆ. ಕೆಪಿಎಂಜಿ 2023 ಇಂಡಿಯಾ ಸಿಇಒ ಔಟ್‌ಲುಕ್ ಪ್ರಕಾರ, ಭಾರತದಲ್ಲಿ ಶೇಕಡಾ 54ರಷ್ಟು ಸಿಇಒಗಳು ಜಾಗತಿಕವಾಗಿ ಶೇಕಡಾ 64ರಷ್ಟು ಉದ್ಯೋಗಿಗಳಿಗೆ ಮೂರು ವರ್ಷಗಳಲ್ಲಿ ಕಚೇರಿಯಲ್ಲಿ ಕೆಲಸದ ವಾತಾವರಣ ಕಲ್ಪಿಸಿದ್ದಾರೆ.
ಉದ್ಯೋಗಿಗಳ ಕೆಲಸದ ಗುಣಮಟ್ಟ ಪ್ರತಿಪಾದನೆಗಳನ್ನು ಒಳಗೊಂಡಿರುವ ದೀರ್ಘಾವಧಿಯ ದೃಷ್ಟಿಕೋನವನ್ನು ನಾಯಕರು ಹೊಂದಿರಬೇಕು ಮತ್ತು ಪ್ರತಿಭೆಯನ್ನು ಪೋಷಿಸಲು ಮತ್ತು ನಿರ್ವಹಿಸಲು ಸಂಸ್ಥೆಗಳು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುವ ಯೋಜನೆಗಳನ್ನು ಹೊರತರುವುದನ್ನು ಮುಂದುವರಿಸುವುದರಿಂದ ಉದ್ಯೋಗಿಗಳ ಕಾಳಜಿ ಮತ್ತು ಅಗತ್ಯಗಳನ್ನು ಪರಿಗಣಿಸಬೇಕು ಎಂದು ವರದಿ ಹೇಳಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನಗಳ ಕಾಲ ಕಚೇರಿಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇನ್ಫೋಸಿಸ್ ತನ್ನ ಇತ್ತೀಚಿನ ಗಳಿಕೆಯ ಸಮ್ಮೇಳನದಲ್ಲಿ ಉದ್ಯೋಗಿಗಳ ಕೆಲಸದ ವಿಧಾನದಲ್ಲಿ ಮುಕ್ತವಾಗಿರುವುದಾಗಿ ಹೇಳಿಕೊಂಡಿದೆ.
"ಪ್ರತಿ ಮೂರು ತಿಂಗಳಿಗೊಮ್ಮೆ ಪ್ರತಿ ವಾರ, ಕ್ಯಾಂಪಸ್ ನಲ್ಲಿ ಹೆಚ್ಚು ಹೆಚ್ಚು ಉದ್ಯೋಗಿಗಳು ಬರುತ್ತಾರೆ. ಮುಂದಿನ ದಿನಗಳಲ್ಲಿ ಕಚೇರಿಗೆ ಬಂದು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಬಹುದು ಎಂದು ನಾವು ಆಶಿಸಿದ್ದೇವೆ ಎಂದು ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.
ಸಾಮಾನ್ಯವಾಗಿ, ನಮ್ಮ ದೃಷ್ಟಿಕೋನವು ಉದ್ಯೋಗಿಗಳಿಗೆ ಸಡಿಲತೆ ನೀಡುವುದಕ್ಕೆ ನಾವು ಬೆಂಬಲ ನೀಡುತ್ತೇವೆ. ಇಲ್ಲಿ ವರ್ಕ್ ಫ್ರಂ ಹೋಂ ವಾತಾವರಣವನ್ನು ಹೇಗೆ ಕಲ್ಪಿಸಿದ್ದೇವೆ ಎಂಬುದು ಕೂಡ ಮುಖ್ಯವಾಗುತ್ತದೆ. ಈ ಹಂತದಲ್ಲಿ ನಾವು ಇದನ್ನು ಮುಂದುವರಿಸುತ್ತೇವೆ ಎಂದರು.
ಮಾನವ ಸಂಪನ್ಮೂಲ ತಜ್ಞರು ಹೇಳುವ ಪ್ರಕಾರ ಶಾಶ್ವತವಾಗಿ ಕಂಪೆನಿಗಳು ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವ ಮತ್ತು ವರ್ಕ್ ಫ್ರಂ ಹೋಂ ಆಯ್ಕೆಯನ್ನು ನೀಡಿದರೆ ಅದು ಕಂಪೆನಿಗಳ ಕೆಲಸದ ದಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ಪಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


