UPI ವಹಿವಾಟಿನಲ್ಲಿ Google Pay ಅನ್ನು ಹಿಂದಿಕ್ಕಿದ Paytm
UPI ವಹಿವಾಟುಗಳಲ್ಲಿನ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ Google Pay ಅನ್ನು Paytm ಹಿಂದಿಕ್ಕಿದೆ. ವಹಿವಾಟಿನ ಪರಿಮಾಣದ ವಿಷಯದಲ್ಲಿ Google Pay ನ ಮಾರುಕಟ್ಟೆ ಪಾಲು 2022ರ ಜೂನ್ ನಲ್ಲಿ ಶೇಕಡ 34 ರಿಂದ 2023ರ ಜೂನ್ ನಲ್ಲಿ ಶೇಕಡ 13.8ಕ್ಕೆ ಇಳಿದಿದೆ.

ಬೆಂಗಳೂರು: UPI ವಹಿವಾಟುಗಳಲ್ಲಿನ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ Google Pay ಅನ್ನು Paytm ಹಿಂದಿಕ್ಕಿದೆ. ವಹಿವಾಟಿನ ಪರಿಮಾಣದ ವಿಷಯದಲ್ಲಿ Google Pay ನ ಮಾರುಕಟ್ಟೆ ಪಾಲು 2022ರ ಜೂನ್ ನಲ್ಲಿ ಶೇಕಡ 34 ರಿಂದ 2023ರ ಜೂನ್ ನಲ್ಲಿ ಶೇಕಡ 13.8ಕ್ಕೆ ಇಳಿದಿದೆ.
ಇಂದು ಬಿಡುಗಡೆಯಾದ ವರ್ಲ್ಡ್‌ಲೈನ್‌ನ ಇಂಡಿಯಾ ಡಿಜಿಟಲ್ ಪಾವತಿಗಳ ವರದಿ H1 2023ರ ಪ್ರಕಾರ, Paytm ಇದೇ ಅವಧಿಯಲ್ಲಿ ಶೇಕಡ 14.7 ರಿಂದ 34.6ಕ್ಕೆ ಮಾರುಕಟ್ಟೆ ಪಾಲನ್ನು ಗಳಿಸಿದೆ. ವಹಿವಾಟಿನ ಮೌಲ್ಯಕ್ಕೆ ಸಂಬಂಧಿಸಿದಂತೆ, Paytm ಅದೇ ಅವಧಿಯಲ್ಲಿ ಶೇಕಡ 9.9ರಿಂದ 33ಕ್ಕೆ ಗಮನಾರ್ಹ ಏರಿಕೆ ಕಂಡಿದೆ. ಮತ್ತೊಂದೆಡೆ, Google Pay ಶೇಕಡ 34.6ರಿಂದ 10.9ಕ್ಕೆ ಇಳಿದಿದೆ.
PhonePe ಯುಪಿಐ ವಹಿವಾಟಿನಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದ್ದು ಮಾರುಕಟ್ಟೆಯ ದಿಗ್ಗಜನಾಗಿ ಉಳಿದಿದೆ. ಒಟ್ಟು ಮೌಲ್ಯದ ಪ್ರಕಾರ ಅದರ ಮಾರುಕಟ್ಟೆ ಪಾಲು 2023ರ ಜೂನ್ ನಲ್ಲಿ ಶೇಕಡ 49.8ರಷ್ಟಿದೆ. ಮೂರು ಅಪ್ಲಿಕೇಶನ್‌ಗಳು ಜೂನ್ 2023 ರಲ್ಲಿ ಎಲ್ಲಾ ವಹಿವಾಟುಗಳಲ್ಲಿ ಶೇಕಡ 95.68ರಷ್ಟು ಪಾಲನ್ನು ಹೊಂದಿವೆ.
2022ರ ಜನವರಿಯಲ್ಲಿ 885 ರೂ.ಗಳಿದ್ದ UPI ವ್ಯಕ್ತಿಯಿಂದ ವ್ಯಾಪಾರಿ (P2M) ವಹಿವಾಟಿನ ಸರಾಸರಿ ಟಿಕೆಟ್ ಗಾತ್ರವು (ATS) 2023ರ ಜೂನ್ ನಲ್ಲಿ 653 ರೂಪಾಯಿಗೆ ಇಳಿದಿದೆ. UPI ಅನ್ನು ಮೈಕ್ರೋ ವಹಿವಾಟಿಗಾಗಿ ಹೆಚ್ಚು ಬಳಸಲಾಗುತ್ತಿದೆ ಎಂದು ವರದಿ ಸೂಚಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


