ವಾಣಿಜ್ಯ

ಸ್ಟಾರ್ ಬಕ್ಸ್ ನ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ

ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಕಾಫಿ ದೈತ್ಯ ಸ್ಟಾರ್ ಬಕ್ಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಲಕ್ಷ್ಮಣ್ ನರಸಿಂಹನ್, ಈ ಹಿಂದೆ ಲಂಡನ್ ಮೂಲದ ಬಹುರಾಷ್ಟ್ರೀಯ ಕಂಪನಿ ರೆಕಿಟ್ ನ ಸಿಇಒ ಆಗಿದ್ದರು.

ಸ್ಟಾರ್ ಬಕ್ಸ್ ನ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ
ಸ್ಟಾರ್ ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್
Published On :

ನವದೆಹಲಿ: ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಕಾಫಿ ದೈತ್ಯ ಸ್ಟಾರ್ ಬಕ್ಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಲಕ್ಷ್ಮಣ್ ನರಸಿಂಹನ್, ಈ ಹಿಂದೆ ಲಂಡನ್ ಮೂಲದ  ಬಹುರಾಷ್ಟ್ರೀಯ ಕಂಪನಿ ರೆಕಿಟ್ ನ ಸಿಇಒ ಆಗಿದ್ದರು. 

ನರಸಿಂಹನ್  ಸ್ಟಾರ್ ಬಕ್ಸ್ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬೋರ್ಡ್ ಡೈರೆಕ್ಟರ್ ಆಗಲಿದ್ದಾರೆ ಎಂದು ಕಂಪನಿ ಗುರುವಾರ ಅಧಿಕೃತವಾಗಿ ತಿಳಿಸಿದೆ. ಅಕ್ಟೋಬರ್ 1 ರಂದು ಲಕ್ಷ್ಮಣ್ ನರಸಿಂಹನ್ ಕಂಪನಿ ಸೇರುತ್ತಾರೆ ಆದರೆ, ಏಪ್ರಿಲ್ 2023ರಲ್ಲಿ ಅಧಿಕಾರ ವಹಿಸಿಕೊಳ್ಳುವರು ಎಂದು ಸ್ಟಾರ್ ಬಕ್ಸ್ ಹೇಳಿದೆ.

ಅಲ್ಲಿಯವರೆಗೂ ಹಂಗಾಮಿ ಸಿಇಒ ಹೊವಾರ್ಡ್ ಷ್ಕಲ್ಜ್  ಕಂಪನಿಯನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 30 ರಂದು ನರಸಿಂಹನ್ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ರೆಕಿಟ್ ಸಂಸ್ಥೆ ಹೇಳಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.