ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 1.3ಕ್ಕೆ ಏರಿಕೆ: ಎಸ್‌ಬಿಐ ವರದಿ
2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 1.3 ಕ್ಕೆ ತಲುಪುವ ಲಕ್ಷಣ ಇದೆ ಪೂರ್ಣ ಹಣಕಾಸು ವರ್ಷದಲ್ಲಿ ಶೇಕಡಾ 7.3 ರಷ್ಟು ಏರಬಹುದು ಎಸ್‌ಬಿಐ ಸಂಶೋಧನಾ ವರದಿ 'Ecowrap' ತಿಳಿಸಿದೆ.

ಮುಂಬೈ: 2020-21ರ ನಾಲ್ಕನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 1.3 ಕ್ಕೆ ತಲುಪುವ ಲಕ್ಷಣ ಇದೆ ಪೂರ್ಣ ಹಣಕಾಸು ವರ್ಷದಲ್ಲಿ ಶೇಕಡಾ 7.3 ರಷ್ಟು ಏರಬಹುದು ಎಸ್‌ಬಿಐ ಸಂಶೋಧನಾ ವರದಿ 'Ecowrap' ತಿಳಿಸಿದೆ.
ಇ-ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಮಾರ್ಚ್ 2021 ರ ತ್ರೈಮಾಸಿಕದ ಜಿಡಿಪಿ ಅಂದಾಜುಗಳನ್ನು ಮತ್ತು 2020-21ನೇ ಸಾಲಿನ ತಾತ್ಕಾಲಿಕ ವಾರ್ಷಿಕ ಅಂದಾಜುಗಳನ್ನು ಮೇ 31 ರಂದು ಬಿಡುಗಡೆ ಮಾಡಲಿದೆ..
ನಮ್ಮ 'ಈಗಿನ ಮಾದರಿ' ಯ ಆಧಾರದ ಮೇಲೆ, ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇ. 1.3 ರಷ್ಟಿದೆ, ಪೂರ್ಣ ವರ್ಷಕ್ಕೆ (ಹಣಕಾಸು ವರ್ಷ 2020-21) ಜಿಡಿಪಿ ಶೇಕಡಾ 7.3 ರಷ್ಟಿದೆ ಎಂದು ನಾವು ಈಗ ನಿರೀಕ್ಷಿಸುತ್ತೇವೆ ಎಂದು ಹೇಳಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕೋಲ್ಕತ್ತಾದ ಸ್ಟೇಟ್ ಬ್ಯಾಂಕ್ ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್ (ಎಸ್‌ಬಿಐಎಲ್) ಸಹಯೋಗದೊಂದಿಗೆ ಕೈಗಾರಿಕಾ ಚಟುವಟಿಕೆ, ಸೇವಾ ಚಟುವಟಿಕೆ ಮತ್ತು ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ 41 ಹೈ-ಫ್ರೀಕ್ವೆನ್ಸಿ ಸೂಚಕಗಳೊಂದಿಗೆ 'ನೌಕಾಸ್ಟಿಂಗ್ ಮಾದರಿ' ಅನ್ನು ಅಭಿವೃದ್ಧಿಪಡಿಸಿದೆ.
ಶೇಕಡಾ 1.3 ರಷ್ಟು ಜಿಡಿಪಿ ಬೆಳವಣಿಗೆಯ ಅಂದಾಜಿನ ಪ್ರಕಾರ, ಇದುವರೆಗಿನ ಜಿಡಿಪಿ ಸಂಖ್ಯೆಯನ್ನು ಬಿಡುಗಡೆ ಮಾಡಿದ 25 ರಾಷ್ಟ್ರಗಳಲ್ಲಿ ಭಾರತ ಇನ್ನೂ ವೇಗವಾಗಿ ಬೆಳೆಯುತ್ತಿರುವ ಐದನೇ ರಾಷ್ಟ್ರವಾಗಿದೆ ಎಂದು ವರದಿ ಹೇಳಿದೆ.
"ನಮ್ಮ ಅಂದಾಜುಗಳು ಈಗ ಮೊದಲ ತ್ರೈಮಾಸಿಕ 22 ರಲ್ಲಿ ಜಿಡಿಪಿ6 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಬಹುದು ಎಂದು ಸೂಚಿಸುತ್ತದೆ. ಇದು ಮೊದಲ ತ್ರೈಮಾಸಿಕ 21 ರಲ್ಲಿ 11 ಲಕ್ಷ ಕೋಟಿ ರೂ.ಗಳ ನಷ್ಟಕ್ಕೆ ಹೋಲಿಸಿದರೆ ತುಸು ಇಳಿಕೆಯಾಗಿದೆ" ಅದು ಹೇಳಿದೆ.
ನೈಜ ಜಿಡಿಪಿ ನಷ್ಟವು 4-4.5 ಲಕ್ಷ ಕೋಟಿ ರೂ.ಗಳಷ್ಟಿರುತ್ತದೆ ಮತ್ತು ಆದ್ದರಿಂದ, ನಿಜವಾದ ಜಿಡಿಪಿ ಬೆಳವಣಿಗೆಯು ಶೇಕಡಾ 10-15ರ ವ್ಯಾಪ್ತಿಯಲ್ಲಿರುತ್ತದೆ (ಆರ್‌ಬಿಐ ಮುನ್ಸೂಚನೆಯ ಪ್ರಕಾರ 26.2 ಶೇಕಡಾ) ಎಂದು ಅದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


