ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಸಾಥ್, ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ!
ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.
ಭಾರತದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಮಾಡಿರುವ ಪಿಎಂ ಕೇರ್ಸ್ ಫಂಡ್ ಗೆ ದೇಶಾದ್ಯಂತ ನೂರಾರು ಕೋಟಿ ರೂಗಳ ದೇಣಿಗೆ ಸಂಗ್ರಹವಾಗುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೂಡ ಸೇರ್ಪಡೆಯಾಗಿದೆ. PM cares fundಗೆ 500 ಕೋಟಿ ರೂ. ಧನ ಸಹಾಯ ನೀಡುವ ಗುರಿಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸಂಸ್ಥೆಯ ಹೇಳಿಕೆಯಲ್ಲಿ ಪೇಟಿಎಂ (Paytm) ವ್ಯಾಲೆಟ್, ಯುಪಿಐ (UPI) ಹಾಗೂ Paytm ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ Paytm ಮಾಧ್ಯಮದಿಂದ ಮಾಡಲಾಗಿರುವ ಪ್ರತಿ ಹಣದ ವಹಿವಾಟಿನ ಮೇಲೆ ತಾನು ಪ್ರಧಾನಿ ನಿಧಿಗೆ ರೂ.10 ಹೆಚ್ಚುವರಿ ಕೊಡುಗೆ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ Paytm ಆಪ್ ಹಾಗೂ ಅದರ ಇನ್ಸ್ಟ್ರುಮೆಂಟ್ಸ್ ಮಾಧ್ಯಮದ ಮೂಲಕ ಮಾಡಲಾಗುವ ಪ್ರತಿ ಹಣ ಪಾವತಿಗೆ 10 ರೂ. ಹೆಚ್ಚುವರಿ ಕೊಡುಗೆ ತನ್ನ ಪರವಾಗಿ ನೀಡಲಿದೆ.
ಇದನ್ನೂ ಓದಿ: ಕೊರೋನಾ ವೈರಸ್: ಕೋವಿಡ್ 19 ದಾಳಿಗೆ ಜನರು ಮಾತ್ರರಲ್ಲ, ಇಂಟರ್ ನೆಟ್ ಗೂ ಭಾರಿ ಪೆಟ್ಟು, ಕಾರಣ ಏನು ಗೊತ್ತಾ?
ಇವುಗಳ ಜೊತೆಗೆ ಕಂಪನಿ ಈ ವೈರಸ್ ವಿರುದ್ಧ ಹೋರಾಟ ನಡೆಸಲು ತಯಾರಿಸಲಾಗಿರುವ ಚಿಕಿತ್ಸೆಯ ಉಪಕರಣಗಳು ಹಾಗೂ ಔಷದಿ ತಯಾರಿಸುವಲ್ಲಿ ನಿರತರಾಗಿರುವ ತಜ್ಞರಿಗಾಗಿ 5 ಕೋಟಿ ರೂ. ಗಳ ನಿಧಿ ಸ್ಥಾಪಿಸಿದೆ. ಈ ಮೂಲಕ ತಾನು ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಇದೇ ಕಾರಣಕ್ಕಾಗಿ ದೇಶದ ನಾಗರಿಕರ ಪ್ರಾಣ ಉಳಿಸಲು Paytm ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ಹಣ ನೆರವು ನೀಡುವಂತೆ ಮನವಿ ಮಾಡಿಕೊಂಡಿದೆ.
PM Cares Fund ಗೆ ನೀಡಲಾಗುವ ಕೊಡುಗೆಗಳಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10 ಮತ್ತು 139 ರ ಅಡಿ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.
Paytm is aiming to contribute ₹500 Crore to the PM CARES Fund.
For every contribution, or any other payment done by you on Paytm, we will contribute an extra up to ₹10.
Please contribute generously!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


