PM CARES fund

'ಪ್ರಧಾನಿಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರಿ ಶಾಲೆಗಳ ಸುಧಾರಣೆಗೆ 'ಪಿಎಂ ಕೇರ್ಸ್ ಫಂಡ್' ಬಳಸಲಿ: ಅಭಿಜಿತ್ ದೀಪ್ಕೆ ಆಗ್ರಹ
'ಒಂದೆಡೆ ಹಣವಿಲ್ಲ ಎಂದು ಹೇಳಲಾಗುತ್ತಿದೆ, ಆದರೆ ಇನ್ನೊಂದೆಡೆ 'ಪಿಎಂ ಕೇರ್ಸ್' ನಿಧಿಯಲ್ಲಿ ₹8,500 ಕೋಟಿ ಹಾಗೆಯೇ ಉಳಿದಿವೆ. ಹಾಗಾದರೆ, ಈ ಹಣವನ್ನು ಶಾಲೆಗಳಿಗಾಗಿ ಬಳಸಬಾರದೇ?' ಎಂದು ಪ್ರಶ್ನಿಸಿದರು.

PM CARES ಪ್ರಧಾನಿ ಮೋದಿ ಅವರ ಅತಿದೊಡ್ಡ ಸಾಂಸ್ಥಿಕ ಹಗರಣಗಳಲ್ಲಿ ಒಂದು, ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ: ಪ್ರಿಯಾಂಕ್ ಖರ್ಗೆ
ತುರ್ತು ಪರಿಹಾರಕ್ಕಾಗಿ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುತ್ತಿರುವ ಮೋದಿ ಸರ್ಕಾರ, ಅಗತ್ಯದ ಸಂದರ್ಭದಲ್ಲಿ ಅದನ್ನು ಖರ್ಚು ಮಾಡುವ ಉದ್ದೇಶವೇ ಹೊಂದಿಲ್ಲದಿದ್ದರೆ, ಏಕೆ ಹಣ ಸಂಗ್ರಹಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

PM CARES ನಿಧಿ ವಿವರ ಬಹಿರಂಗ; ವಿದೇಶಿ ದೇಣಿಗಗಳ ಬಗ್ಗೆ ಕೇಂದ್ರ ಹೇಳಿದ್ದೇನು?
ಪಿಎಂ ಕೇರ್ಸ್ ನ ಒಟ್ಟು ನಿಧಿಯ ಪೈಕಿ 7,846 ಕೋಟಿ ರೂ.ಗಳು ಸ್ಥಿರ ಠೇವಣಿಗಳಲ್ಲಿ ಮತ್ತು 605 ಕೋಟಿ ರೂ.ಗಳನ್ನು ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.

'ಪಿಎಂ ಕೇರ್ಸ್ ಫಂಡ್' ಬಗ್ಗೆಯೂ ಗಮನಹರಿಸಿ; ಮೋದಿಜಿ ನಿಮ್ಮನ್ನು ಖಂಡಿತ ಕ್ಷಮಿಸುತ್ತಾರೆ: RTI ಕಾರ್ಯಕರ್ತನಿಗೆ CJP ತಿರುಗೇಟು
ಆಗಸ್ಟ್ 1 ರಂದು ಭಾರತೀಯ ಚುನಾವಣಾ ಆಯೋಗ (ECI), ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (CBIC) ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸಿರುವುದಾಗಿ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಹೇಳಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣಾ ಬಾಂಡ್ ಬಳಿಕ ಪಿಎಂ ಕೇರ್ಸ್ ಫಂಡ್ ಮೇಲೂ ಅನುಮಾನ: ತನಿಖೆಗೆ ಆಗ್ರಹ
ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ ಎಂದು ಘೋಷಿಸಲ್ಪಟ್ಟ ಬೆನ್ನಲ್ಲೇ, ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಇದೀಗ ಅನುಮಾನಗಳು ಮೂಡತೊಡಗಿದ್ದು, ಇದರ ಬಗ್ಗೆಯೂ ತನಿಖೆ ನಡಸಬೇಕೆಂದು ಹಲವರು ಆಗ್ರಹಿಸುತ್ತಿದ್ದಾರೆ.

ಚುನಾವಣಾ ಬಾಂಡ್, ಪಿಎಂ ಕೇರ್ಸ್ ದೊಡ್ಡ ಹಗರಣಗಳು: ಪರಕಾಲ ಪ್ರಭಾಕರ್ ಟೀಕೆ

ಬಡವರ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ಮಾಡಲು ಸಾಧ್ಯವಾದರೆ ನಾನು ಕೃತಜ್ಞ: ಪಿಎಂ ಕೇರ್ಸ್ ಟ್ರಸ್ಟ್ ಸದಸ್ಯೆಯಾಗಿ ಆಯ್ಕೆಯಾಗಿರುವ ಸುಧಾ ಮೂರ್ತಿ
“ಬಡವರ ಜೀವನದಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಮಾಡಲು ಸಾಧ್ಯವಾದರೆ ನಾನು ಕೃತಜ್ಞನಾಗಿದ್ದೇನೆ” ಎಂದು ಖ್ಯಾತ ಶಿಕ್ಷಣತಜ್ಞೆ ಮತ್ತು ಪರೋಪಕಾರಿ ಸುಧಾ ಮೂರ್ತಿ ಹೇಳಿದ್ದಾರೆ.

ಪಿಎಂ ಕೇರ್ಸ್ ಫಂಡ್ ನ ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾ ಮೂರ್ತಿ ನೇಮಕ
ಪಿಎಂ ಕೇರ್ಸ್ ಫಂಡ್ ನ ಟ್ರಸ್ಟಿಯಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಹಾಗೂ ಸಲಹಾ ಮಂಡಳಿಗೆ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.

ಪಿಎಂ ಕೇರ್ಸ್ ಫಂಡ್ ಭಾರತದ ಏಕೀಕೃತ ನಿಧಿಗೆ ಹೋಗಲ್ಲ; ದೆಹಲಿ ಹೈಕೋರ್ಟ್ ಗೆ ಕೇಂದ್ರ ಮಾಹಿತಿ
ಪಿಎಂ ಕೇರ್ಸ್ ಫಂಡ್ ಭಾರತ ಸರ್ಕಾರದ ನಿಧಿಯಲ್ಲ, ಇದರಿಂದ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

