PM CARES fund

ಚೀನಾ ಕಂಪನಿಗಳಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ: ಪ್ರಧಾನಿ ಮೋದಿಗೆ 7 ಪ್ರಶ್ನೆ ಕೇಳಿದ ಡಿಕೆ ಶಿವಕುಮಾರ್
ಚೀನಾ ಕಂಪನಿಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಎಷ್ಟು ದೇಣಿಗೆ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಾಹಿತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಪಿಎಂ ಕೇರ್ಸ್ ಕುರಿತಾದ ಆರ್‌ಟಿಐ ಅರ್ಜಿ ಸಮರ್ಥನೀಯವಲ್ಲ: ಪಿಎಂಒ
ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಿಎಂ ಕೇರ್ಸ್ ನಿಧಿಯನ್ನು 'ಸಾರ್ವಜನಿಕ ಪ್ರಾಧಿಕಾರ' ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ಕುರಿತು ಪ್ರಧಾನಿ ಕಚೇರಿ (ಪಿಎಂಒ) ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಪಿಎಂ ಕೇರ್ ಫಂಡ್ ಗೆ ರಾಜ್ಯದ ಉದ್ಯಮಿಗಳು ನೀಡಿದ ಹಣ ವಾಪಸ್ ಕೊಡಿ: ಕೇಂದ್ರಕ್ಕೆ ಛತ್ತೀಸ್ ಗಢ ಸಿಎಂ ಆಗ್ರಹ
ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ 'ಪಿಎಂ ಕೇರ್ಸ್ ಫಂಡ್'ನ ಪಾರದರ್ಶಕತೆ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ನಮ್ಮ ರಾಜ್ಯದ ಉದ್ಯಮಿಗಳು ಪಿಎಂ ಕೇರ್ಸ್ ಫಂಡ್ ಗೆ ನೀಡಿದ ಹಣವನ್ನು ವಾಪಸ್ ನೀಡುವಂತೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿ

ಪಿಎಂ ಕೇರ್ಸ್ ಫಂಡ್ ಪಾರದರ್ಶಕವಾಗಿರಬೇಕು: ರಾಹುಲ್ ಗಾಂಧಿ ಆಗ್ರಹ
ಪಿಎಂ ಕೇರ್ಸ್ ನಿಧಿಯ ಬಗ್ಗೆ ಹೆಚ್ಚುತ್ತಿರುವ ವಿವಾದ, ಗೊಂದಲದ ಮಧ್ಯೆಯೇ , ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ನಿಧಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಪಡಿಸಿದ್ದಾರೆ.

ಪಿಎಂ ಕೇರ್ಸ್ ನಿಧಿ ಸ್ಥಾಪನೆ ಸಿಂಧುತ್ವ ಪ್ರಶ್ನಿಸಿದ್ದ ಮನವಿ ವಜಾ
ಕರೋನ ಪಿಡುಗಿನಿಂದ ಉದ್ಭವಿಸಿರುವ ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕ ದೇಣಿಗೆ ಸ್ವೀಕರಿಸಲು ಪಿಎಂ ಕೇರ್ಸ್ ನಿಧಿ ಪಿಸಿರುವ ಕೇಂದ್ರದ ತೀರ್ಮಾನವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ದೇವೇಗೌಡ: ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ
ಕೊರೋನಾ ಸೋಂಕಿನ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣದಿಂದ 1 ಲಕ್ಷ ರೂ. ದೇಣಿಗೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.

ಹಣಕಾಸು ಸಚಿವಾಲಯ, ಪಿಎಸ್ ಯು ಸಿಬ್ಬಂದಿಯಿಂದ ಪಿಎಂ ಕೇರ್ ಫಂಡ್ ಗೆ 430 ಕೋಟಿ ರೂ. ನೆರವು
ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಾಗಿ 430.13 ಕೋಟಿ ರೂ. ನೆರವನ್ನು ಪಿಎಂಕೇರ್ ಗೆ ನೀಡಿದ್ದಾರೆ.

ಮಾರಕ ಕೊರೋನಾ ಸೋಂಕು ನಿವಾರಣೆಗಾಗಿ ವಿದೇಶಿ ದೇಣಿಗೆ ಸ್ವೀಕರಾಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ!
ಮಾರಕ ಕೊರೋನಾ ವೈರಸ್ ನಿರ್ವಹಣೆಗಾಗಿ ತೆರೆಯಲಾಗಿರುವ ಪಿಎಂ ಕೇರ್ಸ್ ಫಂಡ್ ನಿಧಿಗೆ ವಿದೇಶಿ ದೇಣಿಗೆ ಸ್ವೀಕಾರಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಕೊರೋನಾ ವೈರಸ್: ಮೂರೇ ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ ಬಂದ ಹಣವೆಷ್ಟು ಗೊತ್ತಾ?
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಇಡೀ ದೇಶವೇ ಕೈ ಜೋಡಿಸಿದ್ದು, ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಕೇವಲ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ ಎಂದು ತಿಳಿದುಬಂದಿದೆ.

