ಕೊರೋನಾ ಸಂಕಷ್ಟದ ನಡುವೆಯೂ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಭಾವನೆಯಲ್ಲಿ ಶೇ.27 ಹೆಚ್ಚಳ
ಜಾಗತಿಕ ಸಾಪ್ಟ್ ವೇರ್ ವಹಿವಾಟು ಕಂಪನಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ 2019-20ರ ಆರ್ಥಿಕ ವರ್ಷದ ಒಟ್ತಾರೆ ಸಂಬಾವನೆ ಶೇ. 27ರಷ್ಟು ಹೆಚ್ಚಳವಾಗಿದ್ದು, 6.15 ದಶಲಕ್ಷಕ್ಕೆ ತಲುಪಿದೆ. ಹಾಗೆಯೇ , ಸಿಒಒ ಪ್ರವೀಣ್ ರಾವ್ ಅವರ ಕಾಂಪೋನ್ಸೇಷನ್ ಸಹ ಶೇ. 29ರಷ್ಟು ಹೆಚ್ಚಳವಾಗಿದ್ದು ಸುಮಾರು 2.3 ದಶಲಕ್ಷಕ್ಕೆ ತಲುಪಿದೆ

ಬೆಂಗಳೂರು: ಜಾಗತಿಕ ಸಾಪ್ಟ್ ವೇರ್ ವಹಿವಾಟು ಕಂಪನಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ 2019-20ರ ಆರ್ಥಿಕ ವರ್ಷದ ಒಟ್ತಾರೆ ಸಂಬಾವನೆ ಶೇ. 27ರಷ್ಟು ಹೆಚ್ಚಳವಾಗಿದ್ದು 6.15 ದಶಲಕ್ಷಕ್ಕೆ ತಲುಪಿದೆ. ಹಾಗೆಯೇ, ಸಿಒಒ ಪ್ರವೀಣ್ ರಾವ್ ಅವರ ಕಾಂಪೋನ್ಸೇಷನ್ ಸಹ ಶೇ. 29ರಷ್ಟು ಹೆಚ್ಚಳವಾಗಿದ್ದು ಸುಮಾರು 2.3 ದಶಲಕ್ಷಕ್ಕೆ ತಲುಪಿದೆ.
ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪರೇಖ್ಗೆ ಹೆಚ್ಚಿನ ಸಂಖ್ಯೆಯ ಕಾರ್ಯಕ್ಷಮತೆ ಆಧಾರದಲ್ಲಿ ನಿರ್ಬಂಧಿತ ಸ್ಟಾಕ್ ಯುನಿಟ್ ಗಳನ್ನು ನೀಡಲಾಗಿದೆ.
ಮಂಜೂರು ಮಾಡಿದ ಆರ್ಎಸ್ಯುಗಳು ಮೌಲ್ಯದಲ್ಲಿ ಶೇ.50ಕ್ಕಿಂತ ಹೆಚ್ಚಾಗಿದ್ದು ಅವರ ಸ್ಥಿರ ವೇತನದಲ್ಲಿ ತುಸು ಕಡಿತ ಮಾಡಲಾಗಿದೆ. ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣ್ 2017ರ ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಂಡಾಗ ನೀಡಿದ ಭರವಸೆಗೆ ಬದ್ಧರಾಗಿ ಯಾವುದೇ ಕಾಂಪೋನ್ಸೇಷನ್ ಪಡೆದುಕೊಂಡಿಲ್ಲ.
ಇನ್ನೊಂದೆಡೆ ಸುಮಾರು 30,000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ವಿತರಣಾ ವ್ಯವಸ್ಥಾಪಕರು, ಸಹಾಯಕ ಉಪಾಧ್ಯಕ್ಷರು, ಹಿರಿಯ ಉಪಾಧ್ಯಕ್ಷರು ಮತ್ತಿತರರು ಸೇರಿದಂತೆ ಉನ್ನತ ಮಟ್ಟದಲ್ಲಿ ಕಂಪನಿಯು ನೌಕರರನ್ನು ಕಡಿತ ಮಾಡುತ್ತಿದೆ ಎಂದು ವರದಿಯಾಗಿದೆ.
ಜೆಎಲ್ -7 ಮತ್ತು ಅದಕ್ಕಿಂತ ಹೆಚ್ಚಿನ ಸಿಬ್ಬಂದಿಗಳಲ್ಲಿ 15% ಸಿಬ್ಬಂದಿಯನ್ನು ವಜಾಗೊಳಿಸಲು ಐಟಿ ದಿಗ್ಗಜ ಸಂಸ್ಥೆ ಯೋಜಿಸಿದೆ ಎನ್ನಲಾಗಿದ್ದು ಇದು ನೇರವಾಗಿ 13,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


