2023ರ ವೇಳೆ ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ, 2027ಕ್ಕೆ ಪೂರ್ಣ ಯೋಜನೆ ಜಾರಿ: ರೈಲ್ವೆ ಇಲಾಖೆ
ದೇಶದ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಪರಿಚಯಿಸಲಾಗುವುದು ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್‌ಲೈನ್ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ನವದೆಹಲಿ: ದೇಶದ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಪರಿಚಯಿಸಲಾಗುವುದು ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್‌ಲೈನ್ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಅದಲ್ಲದೆ 2027 ರ ವೇಳೆಗೆ ಯೋಜನೆಯ ಎಲ್ಲಾ 151 ಖಾಸಗಿ ರೈಲುಗಳು ಹಳಿ ಮೇಲೆ ಸಂಚರಿಸಲಿದೆ ಎನ್ನಲಾಗಿದೆ.
ಖಾಸಗಿ ಸಂಸ್ಥೆಗಳಿಗೆ ತನ್ನ ನೆಟ್‌ವರ್ಕ್‌ನಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ರೈಲ್ವೆ ಈ ತಿಂಗಳ ಆರಂಭದಲ್ಲಿ ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ರಯಾಣಿಕ ರೈಲುಗಳನ್ನು ಓಡಿಸಲು ಕಂಪನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಈ ಯೋಜನೆಯು ಖಾಸಗಿ ವಲಯದಿಂದ ಸುಮಾರು 30,000 ಕೋಟಿ ರೂ.ಗಳನ್ನು ಆಕರ್ಷಿಸಲಿದೆ.
ಖಾಸಗಿ ರೈಲುಗಳ ಯೋಜನೆಯ ಭಾಗವಾಗಿ, 2022-23ರಲ್ಲಿ 12, 2023-2024ರಲ್ಲಿ 45, 2025-26ರಲ್ಲಿ 50 ಮತ್ತು ಅಂತಿಮವಾಗಿ 2026-2027ರ ಅಂತ್ಯದಲ್ಲಿ 151 ರೈಲುಗಳು ಹಳಿ ಮೇಲೆ ಸಂಚಾರ ನಡೆಸಲಿದೆ. ಜುಲೈ 8 ರಂದುಪ್ರಾರಂಭವಾಗಿರುವ ಆರ್‌ಎಫ್‌ಕ್ಯೂ ನವೆಂಬರ್ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆಯಿದೆ, 2021 ರ ಮಾರ್ಚ್ ವೇಳೆ ಬಿಡ್ ತೆರೆಯಲಾಗುತ್ತದೆ. 2021 ರ ಏಪ್ರಿಲ್ 31 ರೊಳಗೆ ಬಿಡ್ ದಾರರ ರ ಆಯ್ಕೆಯನ್ನು ಯೋಜಿಸಲಾಗಿದೆ ಎಂದು ರೈಲ್ವೆ ಹೇಳಿದೆ.
ಒಟ್ಟು ಆದಾಯದಲ್ಲಿ ಹೆಚ್ಚಿನ ಪಾಲನ್ನು ಉಲ್ಲೇಖಿಸುವ ಬಿಡ್ ದಾರರಿಗೆ ಯೋಜನೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾ"ನಾವು ಖಾಸಗಿ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಆಶಿಸುತ್ತೇವೆ. ಮಾರ್ಚ್ 2021 ರೊಳಗೆ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗುವುದು ಮತ್ತು 2023 ರ ಮಾರ್ಚ್‌ನಿಂದ ರೈಲುಗಳು ಕಾರ್ಯನಿರ್ವಹಿಸುತ್ತವೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆ ಪೂರ್ವ ನಿಗದಿತ ದಂಡವನ್ನೂ ಹೊಂದಿರಲಿದ್ದು ಒಂದೊಮ್ಮೆ ನಿಗದಿತ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಫಲಿತಾಂಶಗಳನ್ನು ಪೂರೈಸುವಲ್ಲಿ ವಿಫಲವಾದ ಕಾರಣ ಖಾಸಗಿ ಪಾಲುದಾರರಿಂದ ಮರುಪಡೆಯಲಾಗುತ್ತದೆ. ಅಂತೆಯೇ, ರೈಲ್ವೆಯ ಕಡೆಯಿಂದ ವಿಫಲವಾದರೆ ರಿಯಾಯಿತಿ ಒಪ್ಪಂದದಲ್ಲಿ ದಂಡವನ್ನು ಮೊದಲೇ ನಿರ್ದಿಷ್ಟಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


